ವಿಜಯ್ ಯಾಕಪ್ಪಾ ಸರ್ಕಸ್ ಮಾಡ್ತಿಯಾ? ತಮಿಳುನಾಡಲ್ಲಿ ಇಂಡಿ ಕೂಟವೇ ಗೆಲ್ಲೋದು : ಪಿ. ಚಿದಂಬರಂ

Spread the love

ಕರೂರು ಕಾಲ್ತುಳಿತದ ಬೆನ್ನಲ್ಲೇ ಪೊಲಿಟಿಕಲ್‌ ಪಿಕ್ಚರ್‌ ಬದಲಾಗಿದೆ. ಸ್ಟಾರ್‌ ನಟನಿಗೆ ಬಿಜೆಪಿ ದಾಳ ಹಾಕಿದೆ. ವಿಜಯ್‌ರನ್ನು ತಮ್ಮನ್ನ ಸೆಳೆಯುವ ಕಾರ್ಯತಂತ್ರ ಜೋರಾಗಿದೆ. ಈ ಪೊಲಿಟಿಕಲ್‌ ಗೇಮ್‌ನಲ್ಲಿ ಕಾಂಗ್ರೆಸ್‌ ಕೂಡ ಒಂದು ಹೆಜ್ಜೆ ಮುಂದಿಟ್ಟಿದೆ.

ನಟ ವಿಜಯ್ ಏನೇ ಸರ್ಕಸ್ ಮಾಡಿದರೂ ತಮಿಳುನಾಡಲ್ಲಿ ಇಂಡಿ ಕೂಟವೇ ಗೆಲ್ಲೋದು ಎಂದು ಪಿ. ಚಿದಂಬರಂ ಹೇಳುತ್ತಿದ್ದಾರೆ.

2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ನಟ ವಿಜಯ್‌ ಭರಪೂರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನದ ಹಿಂದೆ ಶ್ರೀಲಂಕಾ ಸಂಸದ ನಮಲ್‌ ರಾಜಪಕ್ಸೆ ನಟ ವಿಜಯ್‌ ರಾಜಕೀಯಕ್ಕೆ ಬಂದಿರುವ ಬಗ್ಗೆ ಮಾತನಾಡಿದ್ದರು. ರಾಜಕೀಯ ಎನ್ನುವುದು ಹಗಲು ರಾತ್ರಿ ಶ್ರಮಿಸಿ ಜನರ ಭರವಸೆ ಉಳಿಸಿಕೊಳ್ಳಲು ಮಾಡಬೇಕಾದ ಕೆಲಸ. ಅದು ಸಿನಿಮಾ ಸ್ಕ್ರಿಪ್ಟ್‌ನಂತಲ್ಲ. 24 ಗಂಟೆ ಜನರಿಗಾಗಿ ಕೆಲಸ ಮಾಡಿ, ಅವರ ಭರವಸೆ ಗಳಿಸಿ ಎಂದು ಸಲಹೆ ನೀಡಿದ್ದರು. ಇದೀಗ ಚಿದಂಬರಂ ಕೂಡಾ ಒಂದಷ್ಟು ಸಲಹೆ ನೀಡಿದ್ದಾರೆ.

‘ನಟ ವಿಜಯ್‌ ರಾಜಕೀಯ ಜೀವನಕ್ಕೆ ಶುಭಾಶಯ ಕೋರುತ್ತೇನೆ. ಅವರು ಮಾತನಾಡುವಾಗ ಧೈರ್ಯದಿಂದ ಇರುತ್ತಾರೆ. ಆದರೆ, ಇಂಡಿಯಾ ಮೈತ್ರಿಕೂಟ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಲಿದೆ. ವಿಜಯ್‌ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

‘ರಾಜಕೀಯ ಅನುಭವವೇ ನಮ್ಮ ಶಕ್ತಿ’
‘ಇಂಡಿಯಾ ಮೈತ್ರಿಕೂಟವು ಅತ್ಯಂತ ಪ್ರಬಲವಾಗಿದೆ. ರಾಜಕೀಯದಲ್ಲಿ ಭಾರಿ ಅನುಭವವಿದೆ. ಈಗಾಗಲೇ ಸಾಕಷ್ಟು ಚುನಾವಣೆಗಳನ್ನು ಎದುರಿಸಿದೆ. ಚುನಾವಣಾ ಪ್ರಚಾರಗಳನ್ನು ಹೇಗೆ ನಡೆಸಬೇಕೆಂಬುದು ಮೈತ್ರಿಕೂಟಕ್ಕೆ ಕರಗತವಾಗಿದೆ. ಚುನಾವಣಾ ಫಲಿತಾಂಶವು ಆಯಾ ಕ್ಷೇತ್ರಗಳ ಮೇಲೆ ಅವಲಂಬಿತವಾಗಿರುತ್ತದೆ, ಆದರೂ ಒಟ್ಟಾರೆಯಾಗಿ ಮೈತ್ರಿಕೂಟವೇ ಮೇಲುಗೈ ಸಾಧಿಸಲಿದೆ’ ಎಂದು ಚಿದಂಬರಂ ಹೇಳಿದ್ದಾರೆ.

ಬಿಜೆಪಿ ಜೊತೆ ವಿಜಯ್ ಮೈತ್ರಿ..?

ತಮಿಳುನಾಡಿನಲ್ಲಿ ನಟ ವಿಜಯ್‌ ಬೆಂಬಲಕ್ಕೆ ನಿಲ್ಲುವುದಾಗಿ ಬಿಜೆಪಿ ಸುಳಿವು ಕೊಟ್ಟಿದೆ. ಆ ಮೂಲಕ ಸ್ಟಾರ್‌ಗಿರಿ ಲಾಭ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರ ಹಾಕ್ತಿದೆ. ಬಿಜೆಪಿ ಹಿರಿಯ ನಾಯಕರೊಬ್ಬರು ವಿಜಯ್‌ ಅವರನ್ನು ಸಂಪರ್ಕಿಸಿದ್ದಾರೆ. ಕಾಲ್ತುಳಿತ ಕೇಸ್‌ನಲ್ಲಿ ಡಿಎಂಕೆ ಟಾರ್ಗೆಟ್‌ ಪಾಲಿಟಿಕ್ಸ್‌ ಮಾಡ್ತಿದ್ರೆ, ವಿಜಯ್‌ ಒಂಟಿಯಲ್ಲ ಅನ್ನೋ ಮೆಸೇಜ್‌ ಪಾಸ್‌ ಮಾಡಿದ್ದಾರೆ. ಇತ್ತ ಡಿಎಂಕೆ ಕೂಡ ತಾಳ್ಮೆಯಿಂದ ಇರುವಂತೆ ಸಲಹೆ ನೀಡಿದೆ. ತಮಗೆ ಬೆಂಬಲವಾಗಿ ನಿಂತ ಎಲ್ಲಾ ಪಾರ್ಟಿ ನಾಯಕರಿಗೆ ವಿಜಯ್‌ ಕೂಡಾ ಧನ್ಯವಾದ ಹೇಳಿದ್ದಾರೆ.

ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ದ್ರಾವಿಡರ ಪ್ರಾಬಲ್ಯವಿರುವ ನೆಲದಲ್ಲೇ ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ಡಿಎಂಕೆ, ಎಐಎಡಿಎಂಕೆಗೆ ಸೆಡ್ಡು ಹೊಡೆಯುವ ನಾಯಕತ್ವದ ಅಗತ್ಯವಿದೆ. ವಿಜಯ್‌ ಸ್ಟಾರ್‌ಗಿರಿ ಅವಕಾಶ ಬಳಸಿಕೊಳ್ಳುವುದಕ್ಕೆ ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಯಾಕಂದ್ರೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಟಿವಿಕೆ ಸ್ಪರ್ಧೆ ಮಾಡುತ್ತೆ ಅಂತಾ ಟಿವಿಕೆ ಮುಖ್ಯಸ್ಥ ವಿಜಯ್‌ ಘೋಷಿಸಿದ್ದರು. ಆದರೆ, ಸದ್ಯದ ಬೆಳವಣಿಗೆಯಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಕರೂರು ಕಾಲ್ತುಳಿತದ ಬೆನ್ನಲ್ಲೇ ನಟ ವಿಜಯ್‌ ಬೆನ್ನಿಗೆ ಬಿಜೆಪಿ ನಿಂತಿದೆ. ಡಿಎಂಕೆ ಆಡಳಿತ ವೈಫಲ್ಯ ದುರಂತಕ್ಕೆ ಕಾರಣ ಎಂದು ಬಿಜೆಪಿ ದೂಷಿಸುತ್ತಿದೆ.

WhatsApp Group Join Now

Spread the love

Leave a Reply