ಕಾಲ ಬದಲಾಗಿದೆ. ಶಿಕ್ಷಣದ ಮೌಲ್ಯ ಕಡಿಮೆ ಆಗ್ತಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಶಿಕ್ಷಣದ ತತ್ವಗಳನ್ನು ಹೇಳಿಕೊಡಬೇಕಾಗಿದ್ದ ಶಿಕ್ಷಕರೊಬ್ಬರು ಶಾಲಾ ಅವಧಿಯಲ್ಲೇ ವಿದ್ಯಾರ್ಥಿಗಳಿಂದ ತನ್ನ ಕಾರನ್ನು ತೊಳೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿ.ಕೆ.ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಿಕ್ಷಕ ಉದಯ್ ಅವರು ಕಾರಿನಲ್ಲಿ ಶಾಲೆಗೆ ಆಗಮಿಸಿದ್ದು, ಈ ವೇಳೆ ಕಾರಿನಲ್ಲಿ ಇದ್ದ ಧೂಳು, ಕೆಸರನ್ನು ತೊಳೆಯಳು ವಿದ್ಯಾರ್ಥಿಗಳ ಬಳಿ ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ತೆರಳಿ ಕಾರು ಸ್ವಚ್ಛಗೊಳಿಸಿದ್ದಾರೆ.
ವಿದ್ಯಾರ್ಥಿಗಳಿಂದ ಕಾರು ತೊಳೆಸಿದ ವಿಡಿಯೋ ಅಲ್ಲಿದ್ದ ಜನರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆಯೂ ಕೂಡ ಶಿಕ್ಷಕ ಉದಯ್ ಇಂತಹ ಕೆಲಸ ಮಾಡಿಸಿದ್ದರು ಎಂದು ಜನರು ಹೇಳಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ಕೂಡ ನೀಡಲಾಗಿತ್ತು. ಈ ದೂರಿನ ಆಧಾರದ ಮೇಲೆ ಹಳಿಯಾಳ ಬಿಇಒ ಪ್ರಮೋದ ಮಹಾಲೆ ಈ ವಿಷಯದ ಬಗ್ಗೆ ವರದಿ ನೀಡುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.
ಶಿಕ್ಷಕ ತನ್ನ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕಾರು ತೊಳೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಶಿಕ್ಷಕರ ವಿರುದ್ಧ ಗರಂ ಆಗಿದ್ದಾರೆ.
ಆಟ.. ಪಾಠ ಬಿಟ್ಟಾಕಿ.. ಮೇಷ್ಟ್ರ ಗಾಡಿ ಕ್ಲೀನ್ ಮಾಡಿ! : ಸರ್ಕಾರಿ ಶಾಲೆಯ ಅವಸ್ಥೆ ನೋಡಿ!
WhatsApp Group
Join Now