ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಮುಖವಾಗಿದ್ದು, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಸರಕಾರ ಮಾಸಿಕ 2 ಸಾವಿರ ರೂ.ಗಳನ್ನು ನೇರ ಅವರ ಖಾತೆಗೆ ವರ್ಗಾವಣೆ ಮಾಡುತ್ತದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದು ಇದರ ಉದ್ದೇಶ.ಆದರೆ ಇತ್ತೀಚಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬಂದಿಲ್ಲ ಎಂದು ಯಜಮಾನಿಯರು ದೂರಿದ್ದಾರೆ.
ಇದೀಗ ಖಾತೆಗೆ 24ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಹಾಗಾದ್ರೆ ಹಣ ಜಮೆ ಆಗಿದೆಯೋ ಇಲ್ವೋ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ಹೌದು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಯಾವಾಗ ಬರುವುದೋ ಎಂದು ಅಧಿಕಾರಿಗಳ ಬಳಿ ಅಲೆದು ಬೇಸತ್ತಿದ್ದೀರಾ? ಇನ್ನು ಮುಂದೆ ಯಾರ ಬಳಿಯೂ ಹೋಗಬೇಕಿಲ್ಲ. ಇದಕ್ಕಾಗಿ ಬಂದಿದೆ ಸಹಾಯವಾಣಿ! ಹೌದು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘181’ ಸಂಖ್ಯೆಯ ಸಹಾಯವಾಣಿಯನ್ನು ತೆರೆದಿದ್ದು, ಇದರಡಿ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿಯನ್ನೂ ತರಲಾಗಿದೆ.
ಆದರೆ, ಕೆಲವೊಮ್ಮೆ ಎರಡು ತಿಂಗಳು, ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿಫಲಾನುಭವಿ ಮಾತ್ರವಲ್ಲದೆ, ಮನೆಯ ಬಹುತೇಕ ಸದಸ್ಯರು ಆಗಾಗ್ಗೆ ಖಾತೆ ಹಾಗೂ ಮೊಬೈಲ್‌ನಲ್ಲಿಸಂದೇಶ ಪರಿಶೀಲಿಸುತ್ತಾರೆ. ಆಗಲೂ ಸಮಾಧಾನವಾಗದೆ, ತಮ್ಮ ನೆರೆಹೊರೆಯವರನ್ನು ಕೇಳುವುದು, ಇಲ್ಲವೇ ಕಚೇರಿಗಳಿಗೆ ಭೇಟಿ ನೀಡಿ ‘ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ. ಯಾವಾಗ ಬರುತ್ತದೆ’ ಎಂದು ಕೇಳಿ ವಾಪಸ್ಸಾಗುತ್ತಿರುತ್ತಾರೆ. ಇನ್ನು ಮುಂದೆ ಎಲ್ಲಿಯೂ ಹೋಗಬೇಕಿಲ್ಲ. ನಿಮ್ಮ ಮೊಬೈಲ್‌ನಿಂದಲೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಲೋ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ಇಲ್ಲವೇ ತೆರಿಗೆ ಪಾವತಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿಗೃಹಲಕ್ಷ್ಮಿ ಹಣ ನಿಲ್ಲಿಸಲಾಗಿರುತ್ತದೆ. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಿಖರವಾದ ಮಾಹಿತಿ ಪಡೆಯಬಹುದು. 181ಕ್ಕೆ ಕರೆ ಮಾಡಿದರೆ ಅಲ್ಲಿನ ಆಪರೇಟರ್‌ಗಳು ದೂರುದಾರರಿಂದ ಮಾಹಿತಿ ಪಡೆಯುತ್ತಾರೆ. ನಂತರ ದೂರುದಾರರು ಯಾವ ತಾಲೂಕಿಗೆ ಬರುವರೋ ಆ ತಾಲೂಕಿನ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುವರು. ಅವರಿಂದ ಮಾಹಿತಿ ಪಡೆದು, ಫಲಾನುಭವಿಗಳಿಗೆ ತಲುಪಿಸುವರು.
ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗಿಲ್ವಾ.? ಹಾಗಾದ್ರೆ ಈ ಸಹಾಯವಾಣಿಗೆ ಕರೆ ಮಾಡಿ ಸಾಕು
WhatsApp Group
Join Now