ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಗೆ ಟಾರ್ಚರ್ ಕೊಟ್ಟಿದ್ದ ಪುಂಡರನ್ನ ಪೊಲೀಸರು ಬಂಧಿಸಿದ್ದಾರೆ. ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಯುವತಿಯನ್ನ ಚುಡಾಯಿಸಿದ್ದ ಮೂವರು ಕಿಡಿಗೇಡಿಗಳನ್ನ ಎಸ್.ಜಿ ಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನ ರೋಷನ್ (19), ಆರ್ಯನ್ (19) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿಯ ಹೆಸರು ತಿಳಿದುಬಂದಿಲ್ಲ.
ನಡುರಸ್ತೆಯಲ್ಲಿ ಯುವತಿಗೆ ಕಿರುಕುಳ ಕೊಟ್ಟಿದ್ದ ಕಿಡಿಗೇಡಿಗಳು
ಡಿಸೆಂಬರ್ 25 ತಡರಾತ್ರಿ ಸಿಲ್ಕ್ಬೋರ್ಡ್ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಯುವತಿಗೆ ಮೂವರು ಯುವಕರು ಕಿರುಕುಳ ನೀಡಿದರು. ಒಂದೇ ಬೈಕ್ನಲ್ಲಿ ಮೂವರು ಕಿಡಿಗೇಡಿಗಳು ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದ್ದಲ್ಲದೇ ಯುವತಿಯನ್ನ ಸುಮಾರು ಎರಡು ಕಿಲೋ ಮೀಟರ್ ದೂರ ರಸ್ತೆಯುದ್ದಕ್ಕೂ ಯುವತಿ ಬೈಕ್ ಫಾಲೋ ಮಾಡುತ್ತಾ ಚುಡಾಯಿಸಿದ್ದರು. ಅಷ್ಟೇ ಅಲ್ಲದೇ ಯುವತಿ ಬೈಕ್ ಮುಂದೆ ಹೋಗಿ ಅಡ್ಡಾದಿಡ್ಡಿ ಚಾಲನೆ ಮಾಡಿ ಟಾರ್ಚರ್ ಕೊಟ್ಟಿದ್ದರು.
ಬೈಕ್ ಸೀಜ್ ಮಾಡಿದ ಪೊಲೀಸರು
ಮೂವರು ಕಿಡಿಗೇಡಿಗಳು ಒಂದೇ ಬೈಕ್ನಲ್ಲಿ, ಹೆಲ್ಮೆಟ್ ಕೂಡ ಧರಿಸದೇ ತ್ರಿಬಲ್ ರೈಡ್ ಮಾಡುತ್ತಾ ಯುವತಿಗೆ ಟಾರ್ಚರ್ ಕೊಡುತ್ತಿದ್ದನ್ನು ಹಿಂಬದಿ ವಾಹನ ಸವಾರ ಮೊಬೈಲ್ನಲ್ಲಿ ಸೆರೆ ಹಿಡಿದು ವಿಡಿಯೋ ಸಮೇತ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದರು. ಯುವತಿ ಚುಡಾಯಿಸಿದ ಬಗ್ಗೆ ದೂರು ದಾಖಲಿಸಿಕೊಂಡ ಸುದ್ದಗುಂಟೆಪಾಳ್ಯ ಪೊಲೀಸರು ಗಾಡಿ ನಂಬರ್ ಪತ್ತೆ ಮಾಡಿ, ಮೂವರು ಕಿಡಿಗೇಡಿಗಳನ್ನ ಬಂಧಿಸಿದ್ದಷ್ಟೇ ಅಲ್ಲದೇ ಕೃತ್ಯಕ್ಕೆ ಬಳಸಿದ್ದ ಬೈಕ್ನ್ನು ಸೀಜ್ ಮಾಡಿದ್ದಾರೆ.
ತಡರಾತ್ರಿ ಯುವತಿಗೆ ಟಾರ್ಚರ್ : ಕಿರುಕುಳ ಕೊಟ್ಟಿದ್ದ ಪುಂಡರ ಹೆಡೆಮುರಿ ಕಟ್ಟಿದ ಪೊಲೀಸರು ; ಮೂವರು ಅರೆಸ್ಟ್.!
WhatsApp Group
Join Now