ಚಳಿಗಾಲದ ಚಳಿ, ಹೃದಯಕ್ಕೆ ತರದಿರಲಿ ನಡುಕ : ಮುನ್ನೆಚ್ಚರಿಕೆಗೆ ಇರಲಿ ಈ ವೈದ್ಯಕೀಯ ಪರೀಕ್ಷೆಗಳು!

Spread the love

ಚಳಿಗಾಲದ ತಣ್ಣನೆಯ ವಾತಾವರಣವು ಕೇವಲ ನೆಗಡಿ, ಕೆಮ್ಮನ್ನಷ್ಟೇ ಅಲ್ಲ, ಹೃದಯಕ್ಕೂ ಕಂಟಕ ತರಬಲ್ಲದು. ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಚಳಿಯಲ್ಲಿ ನಮ್ಮ ರಕ್ತನಾಳಗಳು ಸಂಕುಚಿತಗೊಂಡು ರಕ್ತ ಸಂಚಲನಕ್ಕೆ ಅಡ್ಡಿಯುಂಟು ಮಾಡುವುದು. ಇದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಪ್ರಾಣಾಪಾಯ ಸಂಭವಿಸಬಹುದು.

ಮುನ್ನೆಚ್ಚರಿಕೆಯಾಗಿ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ : ದೆಹಲಿಯ ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ವರುಣ್ ಬನ್ಸಾಲ್ ಅವರ ಪ್ರಕಾರ, ಚಳಿಗಾಲದಲ್ಲಿ ಪ್ರತಿಯೊಬ್ಬರೂ ಈ ಕೆಳಗಿನ ಮೂರು ಪರೀಕ್ಷೆಗಳಿಗೆ ಒಳಗಾಗುವುದು ಕ್ಷೇಮ:

ಲಿಪಿಡ್ ಪ್ರೊಫೈಲ್ ಪರೀಕ್ಷೆ : ಇದು ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL), ಉತ್ತಮ ಕೊಲೆಸ್ಟ್ರಾಲ್ (HDL) ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ತೋರಿಸುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದಷ್ಟು ಹೃದಯಾಘಾತದ ಸಂಭವನೀಯತೆ ಹೆಚ್ಚಿರುತ್ತದೆ.

ರಕ್ತದೊತ್ತಡದ ತಪಾಸಣೆ : ಚಳಿಯಲ್ಲಿ ರಕ್ತನಾಳಗಳು ಕಿರಿದಾಗುವುದರಿಂದ ಬಿಪಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಧಿಕ ರಕ್ತದೊತ್ತಡ ಇರುವವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯ.

ಇಸಿಜಿ : ಹೃದಯ ಬಡಿತದ ವೇಗ ಮತ್ತು ಹೃದಯದ ಸ್ನಾಯುಗಳ ಬಲವನ್ನು ತಿಳಿಯಲು ಇಸಿಜಿ ಸಹಕಾರಿ. ಪದೇ ಪದೇ ಎದೆನೋವು ಕಾಣಿಸಿಕೊಳ್ಳುತ್ತಿದ್ದರೆ ಈ ಪರೀಕ್ಷೆಯನ್ನು ನಿರ್ಲಕ್ಷಿಸಬೇಡಿ.

ಬೆಳಿಗ್ಗೆ 4 ರಿಂದ 6 ಗಂಟೆ : ಅತ್ಯಂತ ಅಪಾಯಕಾರಿ ಸಮಯ! ವೈದ್ಯರ ಪ್ರಕಾರ, ಚಳಿಗಾಲದಲ್ಲಿ ಬೆಳಗಿನ ಜಾವ 4 ರಿಂದ 6 ಗಂಟೆಯ ಅವಧಿಯಲ್ಲಿ ಹೃದಯಾಘಾತದ ಅಪಾಯ ಅತಿ ಹೆಚ್ಚು. ಈ ಸಮಯದಲ್ಲಿ ವಾತಾವರಣದ ಉಷ್ಣಾಂಶ ತೀರಾ ಕಡಿಮೆಯಿರುವುದರಿಂದ ರಕ್ತನಾಳಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

WhatsApp Group Join Now

Spread the love

Leave a Reply