ಆಧುನಿಕವಾಗಿ, ಶೈಕ್ಷಣಿಕವಾಗಿ ಜಗತ್ತು ಅದೇಷ್ಟೇ ಬೆಳೆದು ನಿಂತಿದ್ದರೂ ವರದಕ್ಷಿಣೆಯ ಪಿಡುಗು ಮಾತ್ರ ಇನ್ನೂ ನಿಂತಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಪತಿ ಹಾಗೂ ಮನೆಯವರ ವರದಕ್ಷಿಣೆ ಕಿರುಕುಳ, ಧನದಾಹಕ್ಕೆ ನವವಿವಾಹಿತೆಯರೇ ಬಲಿಯಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
58 ದಿನಗಳ ಹಿಂದಷ್ಟೇ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ನವವಿವಾಹಿತೆ ಪತಿಯ ವರದಕ್ಷಿಣೆ ಕಿರುಕುಳ, ಅವಮಾನಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಮಮೂರ್ತಿ ನಗರದಲ್ಲಿ ಈ ಘಟನೆ ನಡೆದಿದೆ. ಈ ಹಿನ್ನೆಲೆ ಆಕೆಯ ಪತಿ ಸೂರಜ್ ಮತ್ತು ಅವನ ಕುಟುಂಬದವರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ರಾಮಮೂರ್ತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗಾನವಿಯ ದೊಡ್ಡಮ್ಮ, ಅವನು ಗಂಡಸೇ ಅಲ್ಲ ಎಂದು ಆಕೆಗೆ ಫಸ್ಟ್ ನೈಟ್ ದಿನವೇ ಗೊತ್ತಾಗಿತ್ತು ಎಂದು ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ.
ಗಾನವಿ ಮೃತ ನವವಿವಾಹಿತೆ. ಕೆಲ ದಿನಗಳ ಹಿಂದಷ್ಟೇ ಗಾನವಿ, ಸೂರಜ್ ಎಂಬಾತನ ಜೊತೆ ವಿವಾಹವಾಗಿದ್ದರು. ಎರಡೂ ಕುಟುಂಬಗಳು ನೋಡಿಯೇ ಮಾಡಿದ್ದ ಮದುವೆ. ಸೂರಜ್ ಮನೆಯವರ ಬೇಡಿಕೆಯಂತೆ ಲಕ್ಷ ಲಕ್ಷ ಹಣ, ಚಿನ್ನಾಭರಣ ಕಿಟ್ಟು ಮದುವೆ ಮಾಡಲಾಗಿತ್ತು. ಅಲ್ಲದೇ ಸೂರಜ್ ಬೇಡಿಕೆಯಂತೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನೂ ಗಾನವಿ ತಂದೆ-ತಾಯಿ ನೆರವೇರಿಸಿದ್ದರು. ಹೀಗೆ ಭರ್ಜರಿಯಾಗಿ ವಿವಾಹವಾದ ವರಮಹಾಶಯನಿಗೆ ವರದಕ್ಷಿಣೆಯ ದಾಹ ಕಡಿಮೆಯಾಗಿಲ್ಲ. ಆತನ ತಾಯಿ ಹಾಗೂ ಸಹೋದರನೂ ಇದಕ್ಕೆ ಸಾಥ್ ನೀಡಿದ್ದಾರೆ.
ನವದಂಪತಿ ಹತ್ತು ದಿನಗಳ ಕಾಲ ಶ್ರೀಲಂಕಾಗೆ ಹನಿಮೂನ್ ಟ್ರಿಪ್ ಹೋಗಿದ್ದರು. ವರದಕ್ಷಿಣೆ ವಿಚಾರವಾಗಿ ಸೂರಜ್ ಅಲ್ಲಿಯೂ ಗಲಾಟೆ ಮಾಡಿದ್ದಾನೆ. ನವದಂಪತಿ ನಡುವೆ ಜಗಳವಾಗಿ ಹತ್ತುದಿನದ ಹನಿಮೂನ್ ಟ್ರಿಪ್ ಅರ್ಧಕ್ಕೆ ನಿಲ್ಲಿಸಿ 5 ದಿನಕ್ಕೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವಾಪಸ್ ಆಗುತ್ತಿದ್ದಂತೆಯೇ ಗಾನವಿ ಪೋಷಕರಿಗೆ ಕರೆ ಮಾಡಿದ ಸೂರಜ್ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಆವಾಜ್ ಹಾಕಿದ್ದಾನೆ. ಮನೆಗೆ ಬಂದವರಿಗೆ ಅವಮಾನ ಮಾಡಿ, ವರದಕ್ಷಿಣೆ ಬಗ್ಗೆ ಮತ್ತೆ ಬೇಡಿಕೆ ಇಟ್ಟಿದ್ದಾನೆ. ಪತಿ ಹಾಗೂ ಆತನ ಮನೆಯವರ ವರ್ತನೆ, ವರದಕ್ಷಿಣೆ ಕಿರುಕುಳಕ್ಕೆ ನೊಂದ ಗಾನವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದು ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ವೈದ್ಯರು ಗಾನವಿ ಬ್ರೇನ್ ಡೆಡ್ ಆಗಿದೆ ಎಂದು ತಿಳಿಸಿದ್ದರು. ಚಿಕಿತ್ಸೆ ಮುಂದುವರೆದಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಗಗನಾ ಕೊನೆಯಿಸಿರೆಳೆದಿದ್ದಾಳೆ. ನೂರಾರು ಕನಸುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಗಾನವಿ ಕನಸು ಮದುವೆಯಾಗುತ್ತಿದ್ದಂತೆಯೇ ಬಾಡಿಹೋಗಿದೆ. ವರದಕ್ಷಿಣೆ ಭೂತ ನವವಿವಾಹಿತೆಯನ್ನೇ ಬಲಿಪಡೆದಿದೆ.
ಹನಿಮೂನ್ ಅರ್ಧಕ್ಕೆ ಬಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ನವವಿವಾಹಿತೆ ಚಿಕಿತ್ಸೆ ಫಲಿಸದೇ ಸಾವು – ‘ಫಸ್ಟ್ ನೈಟ್ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ’
WhatsApp Group
Join Now