Horoscope : ಡಿಸೆಂಬರ್‌ 26 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ನಿಮ್ಮ ಸ್ನೇಹಿತರೊಂದಿಗೆ ಆನಂದದಿಂದ ಸಮಯ ಕಳೆಯುವ ಕಾಲ ಎಂದು ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರ ಅನಿರೀಕ್ಷಿತ ಉಡುಗೊರೆಯು ನಿಮಗೆ ಖುಷಿನೀಡಲಿದೆ. ಅದಕ್ಕೆ ಪ್ರತಿಯಾಗಿ ನೀವು ಕೂಡಾ ಅವರಿಗೆ ಸಹಾಯಮಾಡಬೇಕಾಗಿ ಬರಬಹುದು. ಹೊಸ ಸಂಬಂಧ ನಿಮ್ಮ ಭವಿಷ್ಯದಲ್ಲಿ ಅದೃಷ್ಟವನ್ನು ತರಲಿದೆ. ಹಾಗೂ ಮಕ್ಕಳು ನಿಮ್ಮ ಪಾಲಿಗೆ ಅದೃಷ್ಚವಂತರಾಗುತ್ತಾರೆ. ದೂರದ ಪ್ರಕೃತಿ ತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆಯಿದೆ. ಸರಕಾರಕ್ಕೆ ಸಂಬಂಧಿಸಿದ ವಿಚಾರಗಳು ಇತ್ಯರ್ಥಗೊಂಡು ನಿಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ.

ವೃಷಭ :-

ವೃತ್ತಿನಿರತರಿಗೆ ಹಾಗೂ ಕೆಲಸಕ್ಕೆ ಸಂಬಂಧಿಸದ ವಿಚಾರಗಳಿಗೆ ಇಂದು ಉತ್ತಮ ದಿನ ಎಂದು ಗಣೇಶ ಹೇಳುತ್ತಾರೆ. ಹೊಸ ಕೆಲಸಗಳು ಹಾಗೂ ಯೋಜನೆಗಳು ಸುಲಭವಾಗಿ ಫಲಕಾರಿಯಾಗುತ್ತದೆ. ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳು ಪ್ರೋತ್ಸಾಹದಿಂದಿರುತ್ತಾರೆ. ಖಂಡಿತವಾಗಿಯೂ ಬಡ್ತಿ ಸಿಗುವ ಸಂಭವಿದೆ ಮತ್ತು ವ್ಯವಹಾರ ಹಾಗೂ ವೃತ್ತಿಕ್ಷೇತ್ರಗಳಲ್ಲಿ ಉತ್ತಮ ಪ್ರತಿಫಲ ದೊರೆಯಲಿದೆ. ಅಪೂರ್ಣಗೊಂಡಿರುವ ಕಾರ್ಯಗಳು ಪೂರ್ಣಗೊಳ್ಳಲಿವೆ. ವೈವಾಹಿಕ ಸಂತಸ, ಮತ್ತು ಸರಕಾರಿ ಸಂಬಂಧಿತ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.

ಮಿಥುನ :-

ಎಚ್ಚರಿಕೆಯಿಂದಿರಿ! ಇಂದು ಹೊಸ ಯೋಜನಗಳ ಪ್ರಾರಂಭವು ಉತ್ತಮ ಆಲೋಚನೆಯಲ್ಲಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿರುತ್ಸಾಹವು ನಿಮ್ಮ ಸಮಯವನ್ನು ವ್ಯಯಿಸುತ್ತದೆ ಮತ್ತು ನಿಮ್ಮ ಕೆಲಸದಲ್ಲಿ ಉತ್ಸಾಹದ ಕೊರತೆಯಿದೆ. ಉದರ ಸಂಬಂಧಿ ಕಾಯಿಲೆಗಳು ಅಥವಾ ಇತರ ಯಾವುದೇ ವ್ಯಾಧಿಯು ನಿಮ್ಮನ್ನು ಕಾಡಬಹುದು ಮತ್ತು ನಿಮ್ಮ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ವೃತ್ತಿ ಅಥವಾ ವ್ಯವಹಾರದಲ್ಲಿ ವಿರೋಧಿಗಳಿರುವುದು ಕಂಡುಬರುತ್ತದೆ ಮತ್ತು ಮತ್ತು ಕಾರ್ಯಸ್ಥಳದಲ್ಲಿ ಜೊತೆ ಕೆಲಸಗಾರರು ಮತ್ತು ಮೇಲಾಧಿಕಾರಿಗಳು ನಿಮ್ಮ ಮೇಲೆ ಅಸಮಾಧಾನ ಹೊಂದಿರುತ್ತಾರೆ. ಜಾಗರೂಕರಾಗಿರಿ. ಹೆಚ್ಚುವರಿ ವೆಚ್ಚಗಳು ಉಂಟಾಗುವ ಸಾಧ್ಯತೆಯಿದೆ. ಇಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಕರ್ಕಾಟಕ :-

ಇಂದು ತುಂಬಾ ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಕುಟುಂಬ ಸದಸ್ಯರೊಂದಿಗಿನ ವಾಗ್ವಾದಗಳನ್ನು ತಪ್ಪಿಸಿ. ನಿಮ್ಮ ಮಾತು ಮತ್ತು ಸಿಡುಕಿನ ಮೇಲೆ ಹತೋಟಿಯಿರಿಸಿ. ಇದು ನಿಮ್ಮನ್ನು ಅನನುಕೂಲ ಪರಿಸ್ಥಿತಿಗೆ ತಳ್ಳಿಬಿಡಬಹುದು. ದಿನದಾಂತ್ಯದಲ್ಲಿ ನೀವು ಸಾಕಷ್ಟು ವ್ಯಯಿಸುತ್ತೀರಿ. ನಿಮ್ಮ ಶಾಪಿಂಗ್‌ನ್ನು ಮುಂದೂಡುವುದು ಉತ್ತಮ. ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ. ಮಂತ್ರ ಪಠಣೆ, ಪ್ರಾರ್ಥನೆ, ಪವಿತ್ರಗ್ರಂಥಗಳ ಓದುವಿಕೆ ಮತ್ತು ಇತರ ಆಧ್ಯಾತ್ಮ ಚಟುವಟಿಕೆಗಳು ನೆಮ್ಮದಿಯನ್ನು ಸಾಬೀತುಪಡಿಸಲಿವೆ.

ಸಿಂಹ :-

ಪರಸ್ಪರ ಸಂಘರ್ಷದಿಂದಾಗಿ ವಿವಾಹಿತರಿಗೆ ಇಂದು ಅಸಮಾಧಾನ ಉಂಟಾಗಬಹುದು. ಎಚ್ಚರದಿಂದಿರಿ ನಿಮ್ಮ ಬಾಳಸಂಗಾತಿಯು ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು. ತಾಳ್ಮೆ ಹಾಗೂ ಸಮಾಧಾನದಿಂದಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಅರ್ಥವಿಲ್ಲದ ವಾಗ್ವಾದಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ಇದು ನಿಮ್ಮ ಉದ್ಯಮ ಪಾಲುದಾರರು ಹಾಗೂ ಇತರರ ಚುಚ್ಚುಮಾತುಗಳಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಕಾರ್ಯಗಳು ನಿಮಗೆ ಉತ್ತಮ ಪ್ರತಿಫಲ ನೀಡುವುದಿಲ್ಲ. ಸಾಮಾಜಿಕ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಮನ್ನಣೆಯು ನಿಮ್ಮನ್ನು ಕಡೆಗಣಿಸಬಹುದು. ಧೈರ್ಯದಿಂದಿರಿ.

ಕನ್ಯಾ :-

ಕನ್ಯಾರಾಶಿಯವರಾದ ನೀವು ಈ ದಿನಪೂರ್ತಿ ಉತ್ಸಾಹ ಹಾಗೂ ಸಂಭ್ರಮದಿಂದ ಕೂಡಿರುತ್ತೀರಿ.ಮನೆಯಲ್ಲಿ ಮತ್ತು ಕಾರ್ಯಸ್ಥಳದಲ್ಲಿ ಪರಿಪೂರ್ಣ ಶಾಂತಿಯ ವಾತಾವರಣವಿರುತ್ತದೆ. ನಿಮ್ಮ ಸಹೋದ್ಯೋಗಿಗಳು ಮತ್ತು ವರಿಷ್ಠರಿಂದ ನೀವು ಸಹಕಾರವನ್ನು ಪಡೆಯುತ್ತೀರಿ ಮತ್ತು ನಿಮ್ಮ ಪಾಲುದಾರರೊಂದಿಗೆ ವಿಶ್ವಾಸವನ್ನು ಹಂಚಿಕೊಳ್ಳುವಿರಿ. ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಲ್ಲಿರಿ ಮತ್ತು ಇದು ನಿಮಗೆ ಸಂತಸದ ವಿಷಯವಾಗಲಿದೆ. ವಿವಾಹಿತ ಮಹಿಳೆಯರು ತಮ್ಮ ತವರುಮನೆಯಿಂದ ಶುಭಸುದ್ದಿಯನ್ನು ನಿರೀಕ್ಷಿಸಬಹುದು. ಕಡಿಮೆ ಖರ್ಚು ಮಾಡುವ ಉದ್ದೇಶದ ಹೊರತಾಗಿಯೂ ನೀವು ಮಿತಿಮೀರಿ ಖರ್ಚು ಮಾಡುವಿರಿ. ಎಚ್ಚರದಿಂದಿರಿ.

ತುಲಾ :-

ಮಿಶ್ರ ಪ್ರಭಾವದೊಂದಿಗೆ ಸಾಧಾರಣ ದಿನವು ತುಲಾ ರಾಶಿಯವರಿಗೆ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಮಕ್ಕಳು ಮತ್ತು ಅವರ ನಿರ್ವಹಣೆಯು ನಿಮ್ಮನ್ನು ಕಾಡುತ್ತಿರುವ ಚಿಂತೆಗೆ ಕಾರಣವಾಗಿರಬಹುದು. ಶೈಕ್ಷಣಿಕ ಆಸಕ್ತಿಗಳಿಗೆ ಇದು ಉಜ್ವಲ ಸಮಯವಲ್ಲ. ವಾಗ್ವಾದಗಳಲ್ಲಿ ತೊಡಗುವುದನ್ನು ಮತ್ತು ದೂರದ ಪ್ರಯಾಣವನ್ನು ತಪ್ಪಿಸಬೇಕು. ಬೌದ್ದಿಕ ಚರ್ಚೆಗಳು ಮತ್ತು ಸಾರ್ವಜನಿಕ ಗೋಚರತೆಯು ಅನುಕೂಲಕರವಾಗಿರುವುದಿಲ್ಲ. ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸಿದಲ್ಲಿ ಅವು ವಿಫಲತೆಯನ್ನು ಸಾಬೀತುಪಡಿಸುತ್ತವೆ. ನೀವು ನಿಮ್ಮ ಆತ್ಮೀಯರನ್ನು ಆಕಸ್ಮಿಕವಾಗಿ ಭೇಟಿಯಾಗಬಹುದು.

ವೃಶ್ಚಿಕ :-

ಹೊರಗಿನ ಒತ್ತಡಗಳಿಂದಾಗಿ ನೀವು ತಾಳ್ಮೆ ಹಾಗೂ ಸಮಾಧಾನವನ್ನು ಹೊಂದಿರಬೇಕು ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಚಿಂತೆಗಳು ಮತ್ತು ಅನಾರೋಗ್ಯ ನಿಮ್ಮ ಕ್ರಿಯಾಶೀಲ ಹಾಗೂ ದಿಗ್ಭ್ರಮೆಗೊಳಿಸುತ್ತದೆ. ಇದೇ ಸಮಯಕ್ಕೆ ನಿಮ್ಮ ಸಂಬಂಧಿಗಳೂ ನಿಮ್ಮನ್ನು ನಿರಾಶೆಗೊಳಿಸಬಹುದು. ಹಣಕಾಸು ಮತ್ತು ಆರ್ಥಿಕ ವಿಚಾರಗಳಿಗೆ ಇಂದು ಉತ್ತಮ ದಿನವಲ್ಲ. ಹಣ ಅಥವಾ ಆರ್ಥಿಕ ನಷ್ಟ ಉಂಟಾಗಲಿದೆ. ಎಚ್ಚರಿಕೆಯಿಂದಿರಿ ಮತ್ತು ವಿವೇಚನೆಯಿಂದ ವರ್ತಿಸಿ. ಕಾನೂನು ಪತ್ರಗಳ ಕಾರ್ಯದಿಂದ ದೂರವಿರಿ ಮತ್ತು ಯಾವುದೇ ದಾಖಲೆಗಳಿಗೆ ಸಹಿ ಹಾಕುವ ಮುನ್ನ ಎರಡೆರಡು ಬಾರಿ ಪರೀಕ್ಷಿಸಿ. ಇಂದು ಎಲ್ಲವೂ ಉತ್ತಮವಾಗಿರುವುದಿಲ್ಲ. ಆದರೆ, ಅದೇ ಜೀವನ.

ಧನು :-

ದಿನಪೂರ್ತಿ ನೀವು ಸಾಮಾಜಿಕ ಭೇಟಿಯಲ್ಲಿರುತ್ತೀರಿ ಮತ್ತು ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ತಿರುಗಾಟಕ್ಕೆ ತೆರಳಬಹುದು ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ದಿನದ ಪ್ರಾರಂಭದಲ್ಲಿನ ಹೊಸ ಕಾರ್ಯಗಳಿಂದಾಗಿ ಅದೃಷ್ಟವು ನಿಮಗಾಗಿ ಕಾದಿದೆ. ಅದೃಷ್ಟವು ನಿಮ್ಮ ಕಡೆಗಿರುತ್ತದೆ. ಆದ್ದರಿಂದ ನೀವು ಯಶಸ್ಸು ಮತ್ತು ಉತ್ತಮ ಆರೋಗ್ಯವನ್ನು ಪಡೆಯುವಿರಿ. ನಿಮ್ಮ ಕುಟುಂಬ ಸದಸ್ಯರು ಅಥವಾ ಒಡಹುಟ್ಟಿದವರೊಂದಿಗೆ ಖುಷಿಭರಿತ ಪ್ರಯಾಣ ತೆರಳುವಿರಿ. ಅತೀಂದ್ರಿಯ, ಕಲ್ಪನಾತೀತ ಮತ್ತು ಆಧ್ಯಾತ್ಮಿಕ ವಿಚಾರಗಳು ನಿಮ್ಮನ್ನು ಆಕರ್ಷಿಸುತ್ತದೆ ಮತ್ತು ನಿಮ್ಮ ಗಮನ ಸೆಳೆಯುತ್ತವೆ. ಸಾಮಾಜಿಕ ಮನ್ನಣೆ ಮತ್ತು ಗೌರವವು ವರ್ಧಿಸಿದಾಗ ನೀವು ಹರ್ಷಗೊಳ್ಳುವಿರಿ.

ಮಕರ :-

ನಿಮ್ಮ ಬೇಜಾವಾಬ್ದಾರಿತನದ ವರ್ತನೆಯು ನಿಮ್ಮ ಕುಟುಂಬದಲ್ಲಿ,ಅಹಿತಕರ ಸನ್ನಿವೇಶಗಳಿಗೆ ಕಾರಣವಾಗುವುದರಿಂದ ಅಥವಾ ನಿಮ್ಮ ಪ್ರೀತಿಪಾತ್ರರನ್ನು ಬೇಸರದಲ್ಲಿರಿಸುವುದರಿಂದ ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಸಿಹಿಯಾದ ಮಾತುಗಳು ಎಲ್ಲಾ ಸಮಸ್ಯೆಗಳನ್ನು ಸುಲಲಿತವಾಗಿ ಮತ್ತು ಯುಕ್ತಿಯಿಂದ ಬಗೆಹರಿಸಬಹುದು. ಮುಂದಕ್ಕೆ ಸಾಗಿ. ನಿಮ್ಮ ಪ್ರಯೋಜನಕ್ಕಾಗಿ ವಿವೇಚನೆ ಮತ್ತು ಮುಂದಾಲೋಚನೆಯನ್ನು ಉಪಯೋಗಿಸಿಕೊಳ್ಳಿ. ಆರೋಗ್ಯಕ್ಕೆ ಸಂಬಂಧಿಸಿ ಸಾಧಾರಣ ದಿನ. ಕಣ್ಣಿನ ತೊಂದರೆಯು ನಿಮ್ಮನ್ನು ಆತಂಕದಲ್ಲಿರಿಸಬಹುದು. ವಿದ್ಯಾರ್ಥಿಗಳು ತಮ್ಮ ಓದಿನ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ಕುಂಭ :-

ಕುಂಭ ರಾಶಿಯವರಿಗೆ ಫಲಪ್ರದ ದಿನವು ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮಾನಸಿಕವಾಗಿ, ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನೀವು ಉಲ್ಲಾಸದಿಂದಿರುವಿರಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗಿನ ಭೇಟಿ, ಸಂತೋಷದಾಯಕ ತಿರುಗಾಟ ಮತ್ತು ಉಡುಗೊರೆಗಳ ವಿನಿಮಯವು ನಿಮ್ಮನ್ನು ಖುಷಿ ಹಾಗೂ ಸಂಭ್ರಮದಲ್ಲಿರಿಸುತ್ತದೆ. ಸ್ವಾದಿಷ್ಟ ಆಹಾರ, ತಿನಿಸುಗಳು ಮತ್ತು ಪ್ರಚೋದನಕಾರಿ ಆಲೋಚನೆಗಳ ವಿನಿಮಯವು ನಿಮಗಾಗಿ ಕಾದಿದೆ. ಈ ಅಪರೂಪದ ಮತ್ತು ಅತ್ಯುತ್ತಮವಾದ ದಿನವನ್ನು ಆನಂದಿಸಿ. ಆಧ್ಯಾತ್ನದಲ್ಲಿ ನೀವು ತಲ್ಲೀನರಾಗಬಹುದು. ಮತ್ತು ನೀವು ಭಾವುಕರಾಗಬಹುದು.

ಮೀನ :-

ದುರಾಸೆಯು ಆರೋಗ್ಯಕ್ಕೆ ಹಾನಿಕಾರಕ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಜೀವನದಲ್ಲಿನ ಕೆಲವು ವಿಷಯಗಳಲ್ಲಿ ಅತಿಯಾಸೆಯನ್ನು ಹೊಂದುವುದು ನಿಮ್ಮ ಸ್ವಭಾವವಲ್ಲ. ನಿಮ್ಮ ಈ ಅದ್ಭುತ ಸ್ವಭಾವಕ್ಕೆ ಬದ್ಧರಾಗಿ ಮತ್ತು ಅಸಮಾಧಾನವನ್ನು ತಪ್ಪಿಸಿ. ಹೊಸ ಬಂಡವಾಳ ಹೂಡುವಾಗ ಎಚ್ಚರದಿಂದಿರಿ. ಐಶ್ವರ್ಯವು ನಿಮ್ಮ ಕೈಯಿಂದ ಜಾರಿ ಹೋಗಬಹುದು. ಆದ್ದರಿಂದ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಹುಚ್ಚಾಟದ ಒಪ್ಪಂದಗಳಿಂದ ದೂರವಿರಿ. ಇಂದು ನಿಮ್ಮ ದೈಹಿಕ ಆರೋಗ್ಯವು ಉತ್ತಮವಿರದ ಕಾರಣ ನಿಮ್ಮಲ್ಲಿ ಏಕಾಗ್ರತೆಯ ಕೊರತೆ ಕಂಡುಬರಬಹುದು. ನಿಮ್ಮ ಪ್ರೀತಿಪಾತ್ರರೊಂದಿಗಿನ ಮನಸ್ತಾಪವು ಗ್ರಹಗತಿಗಳ ಕಾರ್ಯಸೂಚಿಯಲ್ಲಿ ಮುಖ್ಯಸ್ಥಾನದಲ್ಲಿವೆ. ಇಂದು ದಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವೆಚ್ಚಗಳು ಉಂಟಾಗಬಹುದು. ನಿಮಗೆ ತಿಳಿದರಲಾರದು ಅವುಗಳು ನಿಮಗೆ ಸಮಾಧಾನವನ್ನು ತರುತ್ತದೆ.

WhatsApp Group Join Now

Spread the love

Leave a Reply