ಅನ್ನ ತಿಂದರೆ ತೂಕ ಹೆಚ್ಚುತ್ತಾ.? ಬಿಯರ್‌ನಿಂದ ಹೊಟ್ಟೆ ಉಬ್ಬುತ್ತಾ.? ಸತ್ಯವೇನು ಗೊತ್ತಾ.?

Spread the love

ನೀವು ನಿತ್ಯ ಸವಿಯು ಆಹಾರಗಳು ಒಂದಲ್ಲಾ ಒಂದು ಸಮಸ್ಯೆಗಳಿಗೂ ಕಾರಣವಾಗುತ್ತೆ ಅನ್ನೋದು ಹಲವು ವರ್ಷದಿಂದ ನಾವು ಕೇಳುತ್ತಾ ಬಂದಿರುವ ವಿಚಾರಗಳು. ಆಹಾರ ಹೇಗೆ ನಮ್ಮ ದೇಹಕ್ಕೆ ಶಕ್ತಿ ನೀಡುವುದು ಹಾಗೆ ನಮಗೆ ಕೆಲಸ ಮಾಡಲು ಸಹಕಾರಿಯಾಗುವಂತಹ ಅಂಶಗಳನ್ನು ದೇಹಕ್ಕೆ ನೀಡುವುದು ನೋಡುತ್ತೇವೆ.

ಅದರ ಜೊತೆಗೆ ಹಲವು ಆಹಾರಗಳ ಕುರಿತಾದ ಅಡ್ಡಪರಿಣಾಮಗಳು ಸಹ ನಮ್ಮನ್ನು ಆಲೋಚನೆಗೆ ತಳ್ಳುತ್ತವೆ.

ಅದ್ರಲ್ಲೂ ಕೆಲವೊಂದು ಆಹಾರವನ್ನು ನಾವು ನಿತ್ಯವೂ ಸವಿಯುತ್ತೇವೆ. ಆದ್ರೆ ಅವು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಇಂತಹ ಕೆಲವೊಂದು ವಿಚಾರಗಳಲ್ಲಿ ಇದು ಎಷ್ಟು ಪ್ರಮಾಣದಲ್ಲಿ ಸತ್ಯವಾಗುತ್ತದೆ ಎಂಬ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.

ನಾವು ನಿತ್ಯ ಸವಿಯುವಂತಹ ಅನ್ನದಿಂದ ಹಿಡಿದು ನೀರು ಕುರಿಯುವ ಕುರಿತಾಗಿ ಹಾಗೆ ಹತ್ತು ಹಲವು ಆಹಾರಗಳ ಕುರಿತಾದ ವಿಶ್ಲೇಷಣೆಗಳಿವೆ. ಅದ್ರಲ್ಲೂ ಅನ್ನ ಹೆಚ್ಚು ಸೇವಿಸಿದರೆ ದಪ್ಪವಾಗುತ್ತಾರೆ, ಮಧುಮೇಹಿಗಳು ಚಾಕೊಲೇಟ್ ತಿನ್ನಬಾರದು ಇತ್ಯಾದಿ ಗಮನಾರ್ಹವಾಗಿವೆ. ಆದ್ರೆ ಈ ವಿಚಾರಗಳ ಹಿಂದೆ ಎಷ್ಟು ಸತ್ಯವಿದೆ ಎಂಬುದನ್ನು ತಿಳಿಯಬೇಕಿದೆ.

ಹಾಗಾದ್ರೆ ಯಾವೆಲ್ಲಾ ಆಹಾರಗಳ ಕುರಿತಾಗಿ ಜನರಲ್ಲಿ ತಪ್ಪು ತಿಳುವಳಿಕೆಗಳಿವೆ? ಯಾವುದೆಲ್ಲಾ ಸತ್ಯವಲ್ಲ ಎಂಬುದನ್ನು ತಿಳಿದುಕೊಳ್ಳಿ. ಹಾಗೆ ಯಾವ ತಪ್ಪು ತಿಳುವಳಿಕೆ ಇಂದಿಗೂ ನಮ್ಮ ನಡುವೆ ಇದೆ ಎಂಬುದನ್ನು ಸಹ ಅರಿತುಕೊಳ್ಳಿ.

ಬಿಯರ್ ಕುಡಿಯುವುದು ಹೊಟ್ಟೆ ದಪ್ಪವಾಗಲು ಕಾರಣ?

ಹಲವರಲ್ಲಿ ಇದೊಂದು ದೊಡ್ಡ ಪ್ರಶ್ನೆಯಾಗಿದೆ. ಬಿಯರ್ ಸೇವನೆ ನಮ್ಮ ಹೊಟ್ಟೆಯ ಗಾತ್ರವನ್ನ ದಪ್ಪಮಾಡಲಿದೆ ಎಂದು ಹೇಳಲಾಗುತ್ತದೆ. ಆದ್ರೆ ಬಿಯರ್ ಕುಡಿಯುವುದರಿಂದ ಖಂಡಿತವಾಗಿಯೂ ನೀವು ದಪ್ಪವಾಗುವುದಿಲ್ಲ. ಆದರೆ ನೀವು ಒಂದು ದಿನದಲ್ಲಿ 5-6 ಬಾಟಲಿ ಬಿಯರ್ ಕುಡಿದರೆ, ನಿಮ್ಮ ಹೊಟ್ಟೆ ಮಾತ್ರವಲ್ಲ, ನಿಮ್ಮ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ನೀವು ಎಷ್ಟೇ ಮದ್ಯ ಸೇವಿಸಿದರೂ ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಅನ್ನ ಸೇವನೆ ತೂಕ ಹೆಚ್ಚಿಸಲಿದೆ?

ಅನ್ನದಲ್ಲಿ ಫೈಬರ್ ಅಂಶವಿದೆ. ಆದ್ರೆ ಅನ್ನದ ಜೊತೆಗೆ ನಾವು ಏನನ್ನು ಸೇವಿಸುತ್ತೇವೆ ಎಂಬುದರ ಆಧಾರದ ಮೇಲೆ ಅದು ತೂಕ ಹೆಚ್ಚಿಸಲಿದ್ಯಾ ಅಥವಾ ಇಲ್ಲವಾ ಎಂಬುದು ನಿರ್ಧಾರವಾಗಲಿದೆ. ಹೀಗಾಗಿ ಅನ್ನ ನಮ್ಮ ದೇಹದ ತೂಕ ಹೆಚ್ಚಳಕ್ಕೆ ನೇರ ಕಾರಣವಲ್ಲ. ಬದಲಿಗೆ ಪರೋಕ್ಷ ಕಾರಣ ಆಗಿರಬಹುದು.

ಮಧುಮೇಹ ಇರುವವರು ಚಾಕೊಲೇಟ್ ತಿನ್ನಬಾರದು?

ಮಧುಮೇಹ ಇರುವವರು ಚಾಕೊಲೇಟ್ ತಿನ್ನಬಹುದು. ಆದರೆ ಅದು ಡಾರ್ಕ್ ಚಾಕೊಲೇಟ್ ಆಗಿರಬೇಕು. ಮತ್ತು ಆ ಚಾಕೊಲೇಟ್ 80% ಕ್ಕಿಂತ ಹೆಚ್ಚು ಕೋಕೋವನ್ನು ಹೊಂದಿರಬೇಕು. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಆದರೆ ಸಾಮಾನ್ಯ ಚಾಕೊಲೆಟ್‌ಗಳಲ್ಲಿ ಅಧಿಕ ಪ್ರಮಾಣದ ಎನರ್ಜಿ ಹಾಗೂ ಸಕ್ಕರೆ ಅಂಶ ಇರಲಿದೆ. ಇದು ನಿಮಗೆ ಹಾನಿ ಮಾಡಬಹುದು.

(ಹಕ್ಕು ನಿರಾಕರಣೆ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ನ್ಯೂಸ್ ಟೈಮ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

WhatsApp Group Join Now

Spread the love

Leave a Reply