Horoscope Today : ಭಾನುವಾರ ಉತ್ಸಾಹಭರಿತವಾಗಿದೆಯೇ? ನಿಮ್ಮ ಜಾತಕವನ್ನು ನೋಡಿ – 21-12-2025

Spread the love

ಮೇಷ :-

ಸಿಟ್ಟು ನಿಮ್ಮ ಕೆಲಸ ಹಾಗೂ ಸಂಬಂಧಗಳನ್ನು ಹಾಳುಮಾಡುವ ಕಾರಣ ನಿಮ್ಮ ಸಿಟ್ಟನ್ನು ನಿಗ್ರಹಿಸುವ ಅಗತ್ಯವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಉದ್ವೇಗ, ಹಗೆತನವು ನಿಮ್ಮನ್ನು ಕೆಲಸದಲ್ಲಿ ಗಮನಹರಿಸಲು ಬಿಡುವುದಿಲ್ಲ. ಇಂದು ನೀವು ಅಸ್ವಸ್ಥರಾಗಿರುವ ಸಾಧ್ಯತೆಯಿದೆ. ನೀವು ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಸಾಧ್ಯತೆಯಿದೆ ಅಥವಾ ಶುಭಕರ ಸಮಾರಂಭಗಳಿಗೆ ಆಮಂತ್ರಣ ಬರುವ ಸಾಧ್ಯತೆಯಿದೆ.

ವೃಷಭ :-

WhatsApp Group Join Now

ಕಾರ್ಯಒತ್ತಡವು ಅಧಿಕವಾಗಿರುತ್ತದೆ. ನೀವು ಅಧಿಕ ಶ್ರಮಪಡಬೇಕಾಗುತ್ತದೆ ಆದರೂ ಯಶಸ್ಸು ಬೇಗನೆ ಸಿಗುವುದಿಲ್ಲ. ಪರಿಸ್ಥಿತಿಯ ಕೈಗೊಂಬೆಯಾಗಿರುವಿರಿ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯವಲ್ಲ. ನಿಮ್ಮ ಆಹಾರದ ಆಯ್ಕೆ ಸೂಕ್ತವಾಗಿರಲಿ. ನಿಮ್ಮ ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ಫಲಕಾರಿ ಲಾಭವನ್ನು ಹಿಂಬಾಲಿಸುವ ಬದಲು ಧ್ಯಾನ ಮತ್ತು ಆಧ್ಯಾತ್ಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬುದಾಗಿ ಗಣೇಶ ಹೇಳುತ್ತಾರೆ.

ಮಿಥುನ :-

ಇಂದು ಆನಂದಕರ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಹತ್ತಿರದ ಸುಂದರ ಸ್ಥಳಗಳಿಗೆ ನೀವು ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗಿನ ಸಣ್ಣ ಪ್ರವಾಸಿದಿಂದ ಖುಷಿಪಡಬಹುದು. ವಾರ್ಡ್‌ರೋಬ್ ಬದಲಾಯಿಸುವ ನಿಮ್ಮ ಆಸೆಯು ಕೈಗೂಡಲಿದೆ. ಇಂದು ನೀವು ಉತ್ಕೃಷ್ಟ ಅಡುಗೆಯನ್ನು ಸವಿಯಬಹುದು. ನಿಮಗಿಷ್ಟವಾದ ವಾಹನದಲ್ಲಿ ದೂರ ಸವಾರಿ ತೆರಳಬಹುದು. ನಿಮ್ಮ ಜನಪ್ರಿಯತೆ ವರ್ಧಿಸುವ ಸಾಧ್ಯತೆಯಿದೆ.

ಕರ್ಕಾಟಕ :-

WhatsApp Group Join Now

ಉದ್ಯಮಿಗಳು ಅದೃಷ್ಟವು ತಮ್ಮ ಕಡೆಗಿರುವ ದಿನವನ್ನು ಎದುರು ನೋಡಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ ಮತ್ತು ಇದರಿಂದ ಅವರನ್ನು ಸಂತೋಷಪಡಿಸುತ್ತೀರಿ. ದಿನಪೂರ್ತಿ ನಿಮ್ಮ ಮನಸ್ಸು ಶಾಂತಿಯಿಂದ ಇರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ನಿಮ್ಮ ನಿರ್ವಹಣೆಯು ಉತ್ತಮವಾಗಿರುತ್ತದೆ ಮತ್ತು ಅವರನ್ನು ಸುಲಭವಾಗಿ ಜಯಿಸುತ್ತೀರಿ. ಕೆಲಸದಲ್ಲಿ ಯಶಸ್ಸಿನ ಭರವಸೆಯಿದೆ. ಖರ್ಚುವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ.

ಸಿಂಹ :-

ಕಲೆ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿರುವವರುವವರಿಗೆ ಈ ದಿನ ಅನುಕೂಲಕರವಾಗಿರುವುದರಿಂದ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ಮಾಡುತ್ತಾರೆ ಎಂಬುದಾಗಿ ಗಣೇಶ ಹೇಳುತ್ತಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಗಮನಹರಿಸುವಿರಿ. ಏಕಾಗ್ರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಿ.

ಕನ್ಯಾ :-

WhatsApp Group Join Now

ಇಂದಿನ ದಿನವು ಅನನುಕೂಲತೆಯಿಂದ ತುಂಬಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ದೈಹಿಕವಾಗಿ ಆರೋಗ್ಯಕರವಾಗಿರಬಹುದು. ಚಿಂತೆಗಳು ನಿಮ್ಮ ಮನಸ್ಸನ್ನು ಕಾಡಬಹುದು. ನಿಮ್ಮ ಸಂಗಾತಿಯೊಂದಿಗೆ ಜಗಳ ಹಾಗೂ ವಾಗ್ವಾದಗಳು ನಡೆಯುವ ಸಾಧ್ಯತೆಯು ದಟ್ಟವಾಗಿದೆ. ನಿಮ್ಮ ತಾಯಿಯ ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡಬಹುದು. ಭೂ ಮತ್ತು ಆಸ್ತಿಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ತುಲಾ :-

ಈ ದಿನಪೂರ್ತಿ ಸಂತಸಕರವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಪ್ರತಿಸ್ಪರ್ಧಿಗಳ ಎದುರಿಗೇ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತೀರಿ. ಎಲ್ಲಾ ವಿಚಾರದಲ್ಲಿ ಯಶಸ್ಸು ನಿಮಗೆ ಲಭಿಸಲಿದೆ. ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಮಾಡಬಹುದು. ನಿಮ್ಮ ಮನಸ್ಸು ಒತ್ತಡರಹಿತವಾಗಿರುತ್ತದೆ. ಯಾತ್ರಾಸ್ಥಳಕ್ಕೆ ತೆರಳುವುದರಿಂದ ನೀವು ಅತ್ಯುನ್ನತ ಆನಂದವನ್ನು ಅನುಭವಿಸುವಿರಿ. ಸಂಬಂಧಗಳಲ್ಲಿರುವ ಭಾವಾವೇಶಗಳು ನಿಮ್ಮನ್ನು ಗೊಂದಲದಲ್ಲಿ ಸಿಲುಕಿಸಬಹುದು.

ವೃಶ್ಚಿಕ :-

ನಿಮ್ಮ ಮನೆಯಲ್ಲಿನ ಸಾಮರಸ್ಯವನ್ನು ಕಾಯ್ದುಕೊಳ್ಳಬೇಕಾದರೆ ನಿಮ್ಮ ನಾಲಗೆಯ ಮೇಲೆ ಹಿಡಿತ ಸಾಧಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಹಠಾತ್ ವರ್ತನೆಯಿಂದ ನೀವು ಯಾರನ್ನಾದರೂ ನೋಯಿಸುವ ಸಾಧ್ಯತೆಯಿದೆ. ಆರೋಗ್ಯದ ತೊಂದರೆಗಳು ಉಂಟಾಗಬಹುದು. ಮತ್ಸರವೆಂಬ ಪೆಡಂಭೂತವು ನಿಮ್ಮ ಮೇಲೆ ಅಧಿಕಾರ ಚಲಾಯಿಸಬಹುದು. ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಬಂಧಿಸಿ ತೊಂದರೆಗಳನ್ನು ಎದುರಿಸಬೇಕಾದೀತು.

ಧನು :-

ಇಂದಿನ ದಿನವು ನೀವು ಯೋಜನೆ ರೂಪಿಸಿದಂತೆಯೇ ಸಾಗಲಿದೆ ಎಂಬುದಾಗಿ ಎಂಬುದನ್ನು ಖಚಿತಪಡಿಸಲು ಕೊಡಲು ಗಣೇಶ ಸಂತಸಪಡುತ್ತಾರೆ. ಹಣಕಾಸು ಲಾಭ ಉಂಟಾಗುವ ಭರವಸೆ ಇದೆ.ಇಂದಿನಿಂದ ಜೀವನಪೂರ್ತಿ ನೀವು ತುಂಬಾ ಉಲ್ಲಾಸಭರಿತರಾಗಿರುತ್ತೀರಿ. ಸಣ್ಣ ವಿನೋದ ಪ್ರವಾಸವನ್ನು ಕೈಗೊಳ್ಳಬಹುದು. ನಿಮ್ಮ ಆತ್ಮೀಯರೊಂದಿಗೆ ಕೆಲವು ಆಹ್ಲಾದಕರ ಕ್ಷಣಗಳನ್ನು ನೀವು ಆನಂದಿಸಬಹುದು. ಕೆಲವು ಹರ್ಷ ಮತ್ತು ಮಂಗಳಕರ ಸಮಾರಂಭಕ್ಕೆ ನಿಮಗೆ ಆಹ್ವಾನ ಬರುವ ಸಾಧ್ಯತೆಯಿದೆ. ಪ್ರತಿಷ್ಠೆ ಮತ್ತು ಜನಪ್ರಿಯತೆ ವೃದ್ಧಿಸಲಿದೆ.

ಮಕರ :-

ನಿರುತ್ಸಾಹ ಮತ್ತು ಖಿನ್ನತೆಯ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿಗಾಗಿ ನೀವು ವೆಚ್ಚ ಮಾಡಬೇಕಾಗಿ ಬರಬಹುದು. ನಿಮ್ಮ ಆತ್ಮೀಯರು ಅಸಹಕಾರ ಮತ್ತು ತಟಸ್ಥ ಮನೋಭಾವವನ್ನು ಹೊಂದಬಹುದು.ನಿಮ್ಮ ಆಸ್ತಿ ಹಾಗೂ ಕೀರ್ತಿಯ ನಷ್ಟ ಉಂಟಾಗುವ ಸಾಧ್ಯತೆಯನ್ನು ಗ್ರಹಗತಿಗಳು ಸೂಚಿಸುತ್ತವೆ. ಇವೆಲ್ಲವೂ ನಿಮ್ಮ ಚಿಂತನೆಗಳು ಧಾರ್ಮಿಕ ಮತ್ತು ಆಧ್ಯಾತ್ಮದೆಡೆಗೆ ಸಾಗಲು ಕಾರಣವಾಗುತ್ತದೆ. ಕಾನೂನು ವಿವಾದಗಳು ವ್ಯಥ್ಯೆ ಮೂಲವಾಗಿದೆ. ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಎಚ್ಚರವಹಿಸಿ.

ಕುಂಭ :-

ಇದೊಂದು ನಿಮಗೆ ಅಸಾಧಾರಣ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಈ ಅವಧಿಯಲ್ಲಿ ನಿಮಗೆ ಸಿಗುವ ಲಾಭಗಳಿಂದ ನೀವು ಅತ್ಯಂತ ಖುಷಿಪಡುತ್ತೀರಿ.ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸಕಾಲ. ವಾಣಿಜ್ಯ ಕಾರ್ಯಗಳಲ್ಲಿ ತೊಡಗಿರುವವರು ಹರ್ಷದ ದಿನವನ್ನು ಎದುರು ನೋಡಬಹುದು. ಘನತೆ ಮತ್ತು ಜನಪ್ರಿಯತೆಯು ವೃದ್ಧಿಯಾಗಲಿದೆ. ನಿಮ್ಮ ಮಕ್ಕಳೊಂದಿಗೆ ವಿಶಿಷ್ಟ ಬಾಂಧವ್ಯವನ್ನು ನಿರೀಕ್ಷಿಸಬಹುದು. ಆದಾಯ ಹೆಚ್ಚಳಗೊಳ್ಳುವ ಸಂಭವವಿದೆ. ನೀವು ಪ್ರಯಾಣ ತೆರಳುವ ಸಾಧ್ಯತೆಯಿದೆ.

ಮೀನ :-

ಆಹ್ಲಾದಕರ ಮತ್ತು ಆಶಾದಾಯಕ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮನ್ನು ಪ್ರಶಂಸಿಸುವ ಸಾಧ್ಯತೆಯಿದೆ. ನೀವು ಉದ್ಯಮದಲ್ಲಿರಬಹುದು ಅಥವಾ ಸೇವೆಯಲ್ಲಿರಬಹುದು ಧನಾತ್ಮಕ ಫಲಿತಾಂಶವನ್ನು ನೀವು ನಿರೀಕ್ಷಿಸಬಹುದು. ಸಂದರ್ಭಗಳ ಬದಲಾವಣೆಯ ರೀತಿಯಿಂದ ನೀವು ಹರ್ಷಪಡುತ್ತೀರಿ. ನಿಮ್ಮ ತಂದೆ ಅಥವಾ ಹಿರಿಯರಿಂದ ಲಾಭ ಮತ್ತು ಸಹಕಾರವನ್ನು ನಿರೀಕ್ಷಿಸಬಹುದು. ಮನೆಯ ವಾತಾವರಣವು ಪರಮಾನಂದದ ಮೂಲವಾಗಿರುತ್ತದೆ.


Spread the love

Leave a Reply