ಇನ್ಮುಂದೆ ರಾಜ್ಯ ಸರ್ಕಾರಿ ನೌಕರರು ಈ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕೆಲಸವೇ ಹೋಗುತ್ತೆ.!

Spread the love

ಕರ್ನಾಟಕದ ಸರ್ಕಾರಿ ಅಧಿಕಾರಿಗಳ ಚಲನವಲನ ರಿಜಿಸ್ಟಾರ್, ನಗದು ಘೋಷಣೆ ರಿಜಿಸ್ಟಾರ್ ನಿರ್ವಹಣೆಯ ಜೊತೆಗೆ ಸಭ್ಯ ಉಡುಗೆ ತೊಡುಗೆಗಳನ್ನು ಧರಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

ಸರ್ಕಾರಿ ನೌಕರರ ಕುರಿತು ಸಾರ್ವಜನಿಕರಿಂದ ಹಾಗೂ ಸಂಘ ಸಂಸ್ಥೆಗಳಿಂದ ಸಾಕಷ್ಟು ದೂರು ಬಂದ ಮೇಲೆ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಹೀಗಾಗಿ ಸರ್ಕಾರಿ ನೌಕರರು ಕಡ್ಡಾಯವಾಗಿ ಈ ಕೆಳಗಿನ ಸೂಚನೆಗಳನ್ನು ಪಾಲನೆಬೇಕಾಗಿ ತಿಳಿಸಲಾಗಿದೆ.

• ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಲನವಲನ ವಹಿ (Movement Register) ಕಡ್ಡಾಯವಾಗಿ ನಿರ್ವಹಿಸಬೇಕು.
• ಎಲ್ಲಾ ಸರ್ಕಾರಿ ಅಧಿಕಾರಿ/ ಸಿಬ್ಬಂದಿ ಕಚೇರಿಗಳ ನಿಗದಿತ ಪ್ರಾರಂಭ ಸಮಯ ಬೆಳಗ್ಗೆ 10:10 ಗಂಟೆಗೆ ಹಾಜರಾಗಬೇಕು ಕಛೇರಿ ಸಮಯ ಮುಗಿಯುವವರೆಗೂ ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ಹಾಜರಿರಬೇಕು.
• ಕಚೇರಿ ಸಮಯದಲ್ಲಿ ಅಧಿಕೃತ ಕಾರ್ಯಕ್ಕಾಗಿ ಹೊರ ಹೋಗಬೇಕಾದ್ದಲ್ಲಿ ಚಲನವಲನ ವಹಿಯಲ್ಲಿ ಹೊರ ಹೋಗುವ ಕಾರಣಗಳನ್ನು ದಾಖಲಿಸಬೇಕು.
• ಮೇಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು. ಹೊರ ಹೋಗುವ ಸಮಯ ಹಾಗೂ ಹಿಂದಿರುಗಿದ ಸಮಯವನ್ನು ಸಹಿ ಮತ್ತು ದಿನಾಂಕದೊಂದಿಗೆ ದಾಖಲಿಸಬೇಕು.
• ಚಲನವಲನ ವಹಿಯಲ್ಲಿ ದಾಖಲು ಮಾಡದೇ ಕರ್ತವ್ಯ ಸ್ಥಳದಲ್ಲಿ ಹಾಜರಿಲ್ಲದ ಅಧಿಕಾರಿ/ ಸಿಬ್ಬಂದಿನ ಅನಧಿಕೃತವಾಗಿ ಗೈರು ಹಾಜರಿ ಎಂದು ಪರಿಗಣಿಸುವುದು. ಮೇಲಾಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳುವುದು.

ನಗದು ಘೋಷಣೆ ವಹಿ (Cash Declaration Register) ಕಡ್ಡಾಯ

ನಗದು ಘೋಷಣೆ ವಹಿಯನ್ನು ನಿರ್ವಹಿಸುವ ಕುರಿತು ಈಗಾಗಲೇ ಹಲವು ಸುತ್ತೋಲೆಗಳು ಜಾರಿ ಮಾಡಲಾಗಿದೆ. ಸರ್ಕಾರಿ ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ಎಎಂಎಸ್ ನಲ್ಲಿ ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ ಕಛೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ರಿಜಿಸ್ಟಾರ್‌ನಲ್ಲಿ ನಿಗದಿತ ನಮೂನೆಯಲ್ಲಿ ಸಹಿಯೊಂದಿಗೆ ಘೋಷಿಸಬೇಕು. ಮೇಲಾಧಿಕಾರಿಗಳು ತಮ್ಮ ಎಲ್ಲಾ ಸಿಬ್ಬಂದಿಗಳು ನಗದು ಘೋಷಣಾ ವಹಿಯಲ್ಲಿ ನಮೂದಿಸುತ್ತಿರುವ ಬಗ್ಗೆ ಆಗಿಂದಾಗ್ಗೆ ಪರಿಶೀಲಿಸಲು ಸೂಚನೆ ನೀಡಲಾಗಿದೆ.

ಸಭ್ಯ ಉಡುಗೆ ತೊಡುಗೆಗಳನ್ನು ಧರಿಸುವುದು ಕಡ್ಡಾಯ

ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ ನೌಕರರುಗಳು ಸರ್ಕಾರದ ಘನತೆಗೆ ಧಕ್ಕೆ ಬಾರದಂತೆ ಮತ್ತು ಶೋಭೆಯನ್ನು ತರುವಂತಹ ಸಭ್ಯ ಉಡುಗೆ, ತೊಡುಗೆಗಳನ್ನು ಮಾತ್ರ ಧರಿಸುವುದು ಕಡ್ಡಾಯವೆಂದು ತಿಳಿಸಲಾಗಿದೆ. ಈ ಸೂಚನೆಗಳನ್ನು ಪಾಲಿಸದಿದ್ದರೇ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

WhatsApp Group Join Now

Spread the love

Leave a Reply