ಮೂರು ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಮಕ್ಕಳು ಹಾವು ಕಚ್ಚಿಸಿ ತಂದೆಯನ್ನೇ ಕೊಲೆಗೈದಿರುವ ಘಟನೆ ತಮಿಳುನಾಡು ಜಿಲ್ಲೆಯ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ.
ಎಸ್ ಐಟಿ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ತಂದೆಯ ಇನ್ಶೂರೆನ್ಸ್ ಹಣಕ್ಕಾಗಿ ಮಕ್ಕಳಿಬ್ಬರು ತಂದೆಯನ್ನು ಹಾವು ಕಚ್ಚಿಸಿ ಕೊಲೆಗೈದಿದ್ದಾರೆ. ಹಾವು ಕಡಿತದಿಂದ ಸಾವು ಎಂದು ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇನ್ಶೂರೆನ್ಸ್ ಕಂಪನಿ ಈ ಬಗ್ಗೆ ಅನುಮಾನಗೊಂಡಿದೆ. ಈ ವೇಳೆ ವಿಶೇಷ ತನಿಖಾ ತಂಡ ಪ್ರಕರಣ ಕೈಗೆತ್ತಿಕೊಂಡಿದೆ.
ಇ.ಪಿ.ಗಣೇಶನ್ (56) ಇಪರ್ತಿಪೇಟೆ ತಮ್ಮ ನಿವಾಸದಲ್ಲಿ ಅಕ್ಟೋಬರ್ ನಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಸಹಜ ಸಾವು ಎನ್ನಲಾಗಿತ್ತು. ಆದರೆ ವಿಮೆ ಪಾಲಿಸಿ ಪ್ರಕ್ರಿಯೆ ವೇಳೆ ವಿಮೆ ಕಂಪನಿಯವರಿಗೆ ಕೆಲ ಅನುಮಾನ ವ್ಯಕ್ತವಾಗಿದ್ದಕ್ಕೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ವೇಳೆ ಗನೇಶನ್ ಮೂರು ಕೋಟಿ ಇನ್ಶುರೆನ್ಸ್ ಮಾಡಿಸಿದ್ದರು. ಈ ಹಣವನ್ನು ಪಡೆಯಲು ಇಬ್ಬರು ಮಕ್ಕಳು ತಂದೆಗೆ ಎರಡು ಬಾರಿ ಹಾವು ಕಚ್ಚಿಸಿದ್ದರು. ಆದರೂ ಎರಡು ಬಾರಿ ಗಣೇಶನ್ ಬದುಕುಳಿದಿದ್ದರು. ಇದರಿಂದ ಮಕ್ಕಳಿಬ್ಬರು ವಿಷಕಾರಿ ಹವು ಕಚ್ಚಿಸಿದ್ದಾರೆ. ವಿಷವೇರಿದ ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ನಾಟಕಮಾಡಿ ಆಸ್ಪತ್ರೆಗೆ ತಲುಪಿಸಲು ವಿಳಂಬ ಮಾಡಿದ್ದಾರೆ. ಚಿಕಿತ್ಸೆ ಫಲಿಸದೇ ಗಣೇಶನ್ ಮೃತಪಟ್ಟಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ.
ಪ್ರಕರಣ ಸಂಬಂಧ ಇಬ್ಬರು ಉತ್ರರು ಸೇರಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ಶೂರೆನ್ಸ್ ಹಣಕ್ಕಾಗಿ ಹಾವು ಕಚ್ಚಿಸಿ ತಂದೆಯನ್ನೇ ಕೊಂದ ಮಕ್ಕಳು
WhatsApp Group
Join Now