ಮೈಸೂರಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಪತ್ನಿ ಮರ್ಯಾದೆ ಕೊಡ್ಲಿಲ್ಲ ಅಂತ ಕೊಲೆಗೆ ಯತ್ನ ನಡೆದಿರುವ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ.
ಹೆಂಡತಿ ಹತ್ಯೆಗೆ ಪಾಪಿ ಪತಿ ಸುಪಾರಿ ನೀಡಿದ್ದಾನೆ. ಮೈಸೂರಿನ ಬಿಎಂಶ್ರೀ ನಗರದಲ್ಲಿ ಪತಿ ಮಹೇಶ್ ಈ ಒಂದು ಕೃತ್ಯ ಎಸಗಿದ್ದು, ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ಸುಪಾರಿ ಕೊಟ್ಟಿದ್ದಾನೆ.
ಪತ್ನಿ ನಾಗರತ್ನ ವರ್ತನೆಯಿಂದ ಬೇಸತ್ತಿದ್ದ ಪತಿ ಮಹೇಶ್ ಪತ್ನಿಯನ್ನ ಕೊಲ್ಲಲು ವಿರಾಜಪೇಟೆ ಮೂಲದ ಭಾಸ್ಕರ್, ಅಭಿಷೇಕ್ ಎಂಬುವರಿಗೆ ಸುಪಾರಿ ನೀಡಿದ್ದರು. ಮಹೇಶ್ ಪಾನಿಪುರಿ ವ್ಯಾಪಾರ ಮಾಡುತ್ತಿದ್ದು, ಆದರೆ ಪತ್ನಿ ನಾಗರತ್ನ ಗಂಡನ ಸಂಪಾದನೆಯನ್ನು ಬಡ್ಡಿಗೆ ಬಿಟ್ಟು ಗಂಡನಿಗೆ ಹಣ ನೀಡುತ್ತಿರಲಿಲ್ಲ. ಜೊತೆಗೆ ಗಂಡನಿಗೆ ಮರ್ಯಾದೆ ಕೊಡದ ಹಿನ್ನಲೆಯಲ್ಲಿ ಪತಿ ಮಹೇಶ್ ಪತ್ನಿ ನಾಗರತ್ನ ಕೊಲೆಗೆ ಪ್ಲಾನ್ ರೂಪಿಸಿದ್ದ.
ಗೊತ್ತಿರುವ ಹುಡುಗರಿಗೆ ಮನೆಗೆ ನುಗ್ಗಿ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡತಿಯನ್ನು ಕೊಲೆ ಮಾಡಿ ಎಂದು ಮಹೇಶ್ ಪ್ಲಾನ್ ರೂಪಿಸಿದ್ದು, ಈ ಹಿನ್ನಲೆ ರಾತ್ರಿ ಇಬ್ಬರು ಮನೆಗೆ ನುಗ್ಗಿ ನಾಗರತ್ನ ಮೇಲೆ ಹಲ್ಲೆ ನಡೆಸಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಮನೆಯ ಕೆಲವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೇ ಘಟನೆ ವೇಳೆ ಹತ್ತಿರದಲ್ಲೇ ನಿಂತು ಹೆಂಡತಿ ಸಾಯೋದನ್ನೇ ನೋಡಲು ಕಾಯುತ್ತಿದ್ದ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.
ಘಟನೆಯಲ್ಲಿ ಗಾಯಗೊಂಡ ನಾಗರತ್ನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತನಿಖೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲ್ಲುವಂತೆ ಸುಪಾರಿ ನೀಡಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೆಂಡ್ತಿ ಮರ್ಯಾದೆ ಕೊಡ್ತಿಲ್ಲ ಎಂದು ಹತ್ಯೆಗೆ 5 ಲಕ್ಷ ಸುಪಾರಿ ಕೊಟ್ಟ ಪಾಪಿ ಪತಿ!
WhatsApp Group
Join Now