ಅಮಿತ್ ಶಾ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರಿಯಾಂಕ್ ಖರ್ಗೆ, ಮೇಲ್ಮನೆಯಲ್ಲಿ ಕೋಲಾಹಲ! ಅಷ್ಟಕ್ಕೂ ಖರ್ಗೆ ಪುತ್ರ ಹೇಳಿದ್ದೇನು?

Spread the love

ಚಳಿಗಾಲದ ಅಧಿವೇಶನದಲ್ಲಿ ‘ದ್ವೇಷ ಭಾಷಣ ತಡೆ ವಿಧೇಯಕ’ ಗದ್ದಲ ಕೋಲಾಹಲಕ್ಕೆ ಕಾರಣವಾಗಿದೆ. ಪರಿಷತ್ನಲ್ಲಿ ಇಂದು ವಿಪಕ್ಷಗಳ ವಿರೋಧದ ನಡುವೆಯೂ ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆ ವಿಧೇಯಕ ಮಂಡಿಸಿದೆ. ಈ ವೇಳೆ ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಹೆಸರು ಪ್ರಸ್ತಾಪಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಅಮಿತಾ ಶಾರನ್ನ ನಾಲಾಯಕ್ ಎಂದು ಕರೆದಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯಿಂದ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ

ವಿಧಾನ ಪರಿಷತ್ನಲ್ಲಿ ರಾಜ್ಯ ಸರ್ಕಾರ ಬಿಜೆಪಿ ಸದಸ್ಯರ ಪ್ರತಿಭಟನೆ ನಡುವೆಯೇ ದ್ವೇಷ ಭಾಷಣ ಮಸೂದೆ ಅಂಗೀಕರಿಸಿದೆ. ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಸಚಿವರು ವೋಟ್ ಚೋರಿಯಿಂದ ಅಧಿಕಾರಕ್ಕೆ ಬಂದಿರೋದು ಅಂತ ಟಾಂಗ್ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಪ್ರಸ್ತಾಪಿಸಿ ನಾಲಿಗೆ ಹರಿಬಿಟ್ಟಿದ್ದಾರೆ. ಅಮಿತ್ ಶಾ ಅವರ ಹೆಸರನ್ನ ಪ್ರಸ್ತಾಪಿಸಿದ್ದಕ್ಕೆ ಛಲವಾದಿ ನಾರಾಯಣಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆಗೆ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಎಚ್ಚರಿಸಿದರು.

ಕ್ಷಮೆ ಕೇಳುವಂತೆ ಒತ್ತಾಯ

ಸಚಿವ ಪ್ರಿಯಾಂಕ್ ಖರ್ಗೆ ಅಮಿತ್ ಶಾ ಅವರನ್ನ ನಾಲಾಯಕ್ ಎಂದು ಕರೆದು ನಾಲಿಗೆ ಹರಿಬಿಟ್ಟಿದ್ದಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ಉಂಟಾಯ್ತು. ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ನಾಯಕರು ಕೆರಳಿ ಕೆಂಡವಾದರು. ಸದನದ ಬಾವಿಗಿದು ಬಿಜೆಪಿ, ಜೆಡಿಎಸ್ ಸದಸ್ಯರು ಧರಣಿ ಕುಳಿತು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ರು.

ಈಗ ಚುನಾವಣೆ ನಡೆದ್ರು ನಿಮ್ಮ ಸರ್ಕಾರ ಬರಲ್ಲ

ಇದಕ್ಕು ಮೊದಲು, ದ್ವೇಷ ಭಾಷಣದ ಬಿಲ್ ಮೇಲೆ ಗೃಹ ಸಚಿವ ಪರಮೇಶ್ವರ್ ಉತ್ತರ ನೀಡುತ್ತಿದ್ದರು, ರಾಜಕೀಯ ಪ್ರೇರಿತ ಎಂದು ಹೇಳ್ತೀರಾ, ನಮಗೆ ಅರಿವಿಲ್ಲ, ಇದು, ಅಧಿಕಾರ ಶಾಶ್ವತ ಅಲ್ಲ, ಆ ಕಡೆ ನಾವು ಬಂದಾಗ ನಮಗೆ ಅನ್ವಯ ಆಗಲ್ವಾ, ಇನ್ನು 15 ವರ್ಷ ಆದ ಮೇಲೆ ಬರುತ್ತೆ ಅಲ್ವಾ? ಎಂದು ಪರಮೇಶ್ವರ್ ಹೇಳುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಸಿ.ಟಿ ರವಿ, ಈಗ ಚುನಾವಣೆ ನಡೆದ್ರೂ ನಿಮ್ಮ ಸರ್ಕಾರ ಬರಲ್ಲ, ನಿಮ್ಮಪ್ಪನಾಣೆ ಬರಲ್ಲ ಎಂದು ಸಿ.ಟಿ ಸರ್ಕಾರದ ವಿರುದ್ಧ ಹರಿಹಾಯ್ದರು.

WhatsApp Group Join Now

Spread the love

Leave a Reply