ನಕ್ಷೆಯಲ್ಲಿ ಕೆರೆ, ಸ್ಮಶಾನ ಇರುವ ಭೂಮಿ ಪಿತ್ರಾರ್ಜಿತ ಆಸ್ತಿ ಹೇಗೆ ಆಗುತ್ತದೆ ಸಚಿವರೇ? : ಕೃಷ್ಣ ಬೈರೇಗೌಡರಿಗೆ ಯತ್ನಾಳ್ ಪ್ರಶ್ನೆ

Spread the love

ಸಚಿವ ಕೃಷ್ಣಭೈರೇಗೌಡ ಅವರ ಮೇಲೆ ಭೂ ಕಬಳಿಕೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಮಾತನಾಡಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ನಕ್ಷೆಯಲ್ಲಿ ಕೆರೆ ಹಾಗೂ ಸ್ಮಶಾನ ಇರುವ ಭೂಮಿ ಪಿತ್ರಾರ್ಜಿತ ಆಸ್ತಿ ಹೇಗೆ ಆಗುತ್ತದೆ ಮಾನ್ಯ ಸಚಿವರೇ ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಬೇಲಿಯೇ ಎದ್ದು ಹೊಲ ಮೇಯಿತೇ ? ಕೋಲಾರ ಜಿಲ್ಲೆಯ ನರಸಾಪುರ ಹೋಬಳಿ ಗರುಡನ ಪಾಳ್ಯ ಗ್ರಾಮದ ಸರ್ವೇ ಸಂ: 46 ಮತ್ತು ಸಂ: 47 ರಲ್ಲಿರುವ ಸ್ಮಶಾನ ಹಾಗೂ ಕೆರೆ ಭೂಮಿಯನ್ನುಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇ ಗೌಡರು ಒತ್ತುವರಿ ಮಾಡಿಕೊಂಡು ಪಂಚಾಯಿತಿಯಲ್ಲಿ ತಮ್ಮ ಹೆಸರಿಗೆ ಮ್ಯುಟೇಷನ್ ಮಾಡಿಸಿಕೊಂಡಿರುವ ಬಗ್ಗೆ ಆರೋಪವಿದೆ .

ಸದನದಲ್ಲಿ ಸದಸ್ಯರು ಭೂ ಕಬಳಿಕೆಯ ಆಪಾದನೆ ಮಾಡಿದರೂ ಈವರೆಗೂ ಕಂದಾಯ ಸಚಿವರು ಯಾವುದೇ ದಾಖಲೆ ನೀಡಿ ಸ್ಪಷ್ಟೀಕರಣ ನೀಡಿಲ್ಲ. ರಾಜ್ಯದ ಕಂದಾಯ ಸಚಿವರಾಗಿ ಭೂಮಿಯನ್ನು ರಕ್ಷಣೆ ಮಾಡಬೇಕಾದವರ ಮೇಲೆಯೇ ಭೂ ಕಬಳಿಕೆ ಆರೋಪ ಕೇಳಿಬರುತ್ತಿರುವುದು ನಿಜಕ್ಕೂ ದುರದೃಷ್ಟಕರ. ನಕ್ಷೆಯಲ್ಲಿ ಕೆರೆ ಹಾಗೂ ಸ್ಮಶಾನ ಇರುವ ಭೂಮಿ ಪಿತ್ರಾರ್ಜಿತ ಆಸ್ತಿ ಹೇಗೆ ಆಗುತ್ತದೆ ಮಾನ್ಯ ಸಚಿವರೇ ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಹೈಕಮಾಂಡ್ ನಿಂದ ಆದೇಶ ಬಂದ ಕೂಡಲೇ ತಮ್ಮ ಸಹದ್ಯೋಗಿ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟ ಸಿದ್ದರಾಮಯ್ಯನವರು, ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಕಂದಾಯ ಸಚಿವರನ್ನು, ಹಾಗೂ ಸದನದಲ್ಲಿ ತಪ್ಪು ಮಾಹಿತಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಸಂಪುಟದಿಂದ ಕೈಬಿಟ್ಟು ಮೇಲ್ಪಂಕ್ತಿ ಹಾಕಿಕೊಡಲಿ ಎಂದು ಯತ್ನಾಳ್ ಹೇಳಿದ್ದಾರೆ.

WhatsApp Group Join Now

Spread the love

Leave a Reply