ಕಾಲು ನೋವು ಸಾಮಾನ್ಯವಲ್ಲ, ಇದು ಗಂಭೀರ ಕಾಯಿಲೆಗಳ ಸಂಕೇತ! ಸಣ್ಣ ಸಮಸ್ಯೆ ಅಂತ ನಿರ್ಲಕ್ಷಿಸಬೇಡಿ

Spread the love

ಇಂದು ಅನೇಕ ಜನರು ಕಾಲುಗಳಲ್ಲಿ ನೋವಿನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಕಾರಣ ವಿಭಿನ್ನವಾಗಿರಬಹುದು. ಒಂದು ವೇಳೆ ನೀವು ಪಾದದ ನಿರಂತರ ನೋವಿನಿಂದ ಬಳಲುತ್ತಿದ್ದರೆ, ನಡೆಯುವಾಗ ನಿಮ್ಮ ಪಾದಗಳಲ್ಲಿ ಸೆಳೆತವನ್ನು ಅನುಭವಿಸಿದರೆ, ಅದನ್ನು ಸಣ್ಣ ಸಮಸ್ಯೆ ಅಂತ ನಿರ್ಲಕ್ಷಿಸಬೇಡಿ..

ಆಗಾಗ ಕಾಲು ಸೆಳೆತವು ಗಂಭೀರ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು. ಮೊದ ಮೊದಲು ಕಾಲು ನೋವು ಸಾಮಾನ್ಯ ಸಮಸ್ಯೆಯಂತೆ ಕಂಡುಬಂದರೂ, ಸಹ ಅದು ದೇಹದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವ ಸೂಚನೆ ನೀಡುತ್ತದೆ. ಬಹಷಃ ಹೃದಯದ ಸಮಸ್ಯೆಗಳಿಂದ ಹಿಡಿದು ಎಲೆಕ್ಟ್ರೋಲೈಟ್ ಅಸಮತೋಲನ, ನರವೈಜ್ಞಾನಿಕ ಸಮಸ್ಯೆಗಳು ಮತ್ತು ಚಯಾಪಚಯ ಸಮಸ್ಯೆಗಳ ಲಕ್ಷಣವೂ ಆಗಿರಬಹುದು. ಕಾಲಿನ ಸೆಳೆತಕ್ಕೆ 5 ಕಾರಣಗಳಿವೆ, ಅವುಗಳನ್ನು ನಿರ್ಲಕ್ಷಿಸಬೇಡಿ.. ಏಕೆಂದರೆ ಸಮಯೋಚಿತ ಆರೋಗ್ಯ ಚಿಕಿತ್ಸೆ ಮಾತ್ರ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ..

ಅಪಧಮನಿಯ ಕಾಯಿಲೆ : ಬಾಹ್ಯ ಅಪಧಮನಿಯ ಕಾಯಿಲೆಯು ಕಾಲಿನ ಸೆಳೆತಕ್ಕೂ ಕಾರಣವಾಗಬಹುದು. ಈ ಸ್ಥಿತಿಯಿರುವ ಜನರು ನಡೆಯುವಾಗ ಕಾಲು ನೋವನ್ನು ಅನುಭವಿಸುತ್ತಾರೆ. ವಿಶ್ರಾಂತಿ ಪಡೆದ ನಂತರ ಉತ್ತಮವಾಗುತ್ತಾರೆ. ಈ ಸ್ಥಿತಿಯು ಕಾಲುಗಳ ಅಪಧಮನಿಗಳಲ್ಲಿನ ಅಡಚಣೆಗಳಿಂದ ಉಂಟಾಗುತ್ತದೆ. ವೀನಸ್ ಅಸಾಮರ್ಥ್ಯದಿಂದಲೂ ಕಾಲು ಸೆಳೆತ ಉಂಟಾಗಬಹುದು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.. ರಾತ್ರಿಯಲ್ಲಿ ಊತ ಮತ್ತು ಸಂಜೆ ಸೆಳೆತ ಇದರ ಲಕ್ಷಣಗಳಾಗಿವೆ.

ನಾಳೀಯ ಅಸ್ವಸ್ಥತೆಗಳು : ನಾಳೀಯ ಅಸ್ವಸ್ಥತೆ ಇರುವವರು ಕಾಲಿನ ಸೆಳೆತದಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ಸಿಯಾಟಿಕಾ, ನರರೋಗ ಮತ್ತು ಬೆನ್ನು ನೋವು ಸೇರಿದಂತೆ ನರಗಳ ಸಮಸ್ಯೆಗಳಿಂದಲೂ ಕಾಲು ಸೆಳೆತ ಉಂಟಾಗಬಹುದು. ಹಾಗಾಗಿ ಇದನ್ನು ನಿರ್ಲಕ್ಷಿಸಬೇಡಿ..

ಚಯಾಪಚಯ ಮತ್ತು ಹಾರ್ಮೋನುಗಳ ಸಮಸ್ಯೆಗಳು : ಥೈರಾಯ್ಡ್ ಅಸ್ವಸ್ಥತೆಗಳು, ರಕ್ತಹೀನತೆ ಮತ್ತು ವಿಟಮಿನ್ ಡಿ ಕೊರತೆಯಂತಹ ಚಯಾಪಚಯ ಮತ್ತು ಹಾರ್ಮೋನುಗಳ ಸಮಸ್ಯೆಗಳು ಪಾದದ ನೋವಿಗೆ ಕಾರಣವಾಗಬಹುದು.. ಹಾಗಾಗಿ ಆದಷ್ಟು ಬೇಗ ವೈದ್ಯರ ಬಳಿ ಹೋಗುವುದು ಒಳ್ಳೆಯದು.

ಎಲೆಕ್ಟ್ರೋಲೈಟ್‌ಗಳು : ಎಲೆಕ್ಟ್ರೋಲೈಟ್‌ಗಳ ಕೊರತೆ, ಮುಖ್ಯವಾಗಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ, ಕಾಲು ಸೆಳೆತಕ್ಕೆ ಕಾರಣವಾಗಬಹುದು. ನಿರ್ಜಲೀಕರಣಗೊಂಡ ಜನರು ಸಹ ಈ ಸಮಸ್ಯೆಯನ್ನು ಅನುಭವಿಸಬಹುದು. ಇವು ಕೆಲವು ಕಾರಣಗಳು, ನಿಮ್ಮ ಪಾದಗಳು ನಿರಂತರವಾಗಿ ನೋಯುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

WhatsApp Group Join Now

Spread the love

Leave a Reply