ವೈದ್ಯಾಧಿಕಾರಿಯೊಬ್ಬರಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಕರ್ತವ್ಯನಿರತ ನರ್ಸ್ ಒಬ್ಬರು ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಆತ್ಮ*ಹತ್ಯೆಗೆ ಯತ್ನಿಸಿದ ನರ್ಸ್‌ನ್ನು ಸುನಿತಾ ಎಂದು ಗುರುತಿಸಲಾಗಿದ್ದು, ಅವರು ಕರ್ತವ್ಯದ ಮಧ್ಯೆ 20ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಅಸ್ವಸ್ಥಗೊಂಡ ಸುನಿತಾಳನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಮುಂದುವರಿದಿದೆ.
ವೈದ್ಯಾಧಿಕಾರಿಯಿಂದ ನಿರಂತರ ಕಿರುಕುಳ
ಮಾಹಿತಿಗಳ ಪ್ರಕಾರ, ಮರಿಯಮ್ಮನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಮಂಜುಳಾ ಅವರು ಸುನಿತಾಗೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿವೆ. ಈ ಕಿರುಕುಳದಿಂದ ಮನನೊಂದುಕೊಂಡ ಸುನಿತಾ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
16 ವರ್ಷಗಳಿಂದ ನರ್ಸ್ ಆಗಿ ಸೇವೆ
ಸುಮಾರು 16 ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಅನುಭವಿ ಸಿಬ್ಬಂದಿಯಾಗಿರುವ ಸುನಿತಾ, ವೈದ್ಯಾಧಿಕಾರಿಯ ವರ್ತನೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಕಚೇರಿ ಸಂಬಂಧಿತ ವಿಚಾರಗಳು, ಕರ್ತವ್ಯ ಒತ್ತಡ ಹಾಗೂ ಮಾತಿನ ಕಿರುಕುಳಗಳು ಈ ದುರ್ಘಟನೆಗೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಘಟನೆಗೆಯು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಸ್ಪತ್ರೆಯಂತಹ ಸೇವಾ ಕ್ಷೇತ್ರದಲ್ಲೇ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಎದುರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಪ್ರಕರಣವು ಆರೋಗ್ಯ ಇಲಾಖೆಯೊಳಗಿನ ಕಾರ್ಯಪದ್ದತಿ ಹಾಗೂ ಮೇಲಧಿಕಾರಿಗಳ ವರ್ತನೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪ್ರಕರಣದ ಸತ್ಯಾಸತ್ಯತೆ ತನಿಖೆಯ ನಂತರವೇ ಸ್ಪಷ್ಟವಾಗಲಿದೆ.
ವೈದ್ಯಾಧಿಕಾರಿಯಿಂದ ನರ್ಸ್‌ಗೆ ನಿರಂತರ ಕಿರುಕುಳ, 20ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆಯಲ್ಲೇ ಆತ್ಮ*ಹತ್ಯೆ ಯತ್ನ!
WhatsApp Group
Join Now