ಮೇಷ :-
ಇಂದು ನಿಮ್ಮ ಕುಟುಂಬದೊಂದಿಗೆ ಪ್ರತಿ ಕ್ಷಣವನ್ನು ಆಸ್ವಾದಿಸುವಿರಿ. ನಿಮ್ಮ ಸಂಗಾತಿಯೊಂದಿಗೆ ಕಳೆದ ಸಮಯವು ಅಮೂಲ್ಯ ಹಾಗೂ ಅವರ್ಣನೀಯವಾಗಿರುತ್ತದೆ. ದೈಹಿಕ ಮತ್ತು ಭಾವನಾತ್ಮಕ ಅಂಶಗಳಿಂದ ನೀವು ಸಂತೃಪ್ತಿಯನ್ನು ಹೊಂದುವಿರಿ. ಆರ್ಥಿಕವಾಗಿ ತೃಪ್ತಿಕರ ದಿನವಾಗಲಿದೆ.
ನೀವು ವಿಚಾರಗಳ ಬಗ್ಗೆ ಹೆಚ್ಚು ದೃಢ ಮತ್ತು ಸ್ವಾಮ್ಯ ಪ್ರವೃತ್ತಿಯನ್ನು ಹೊಂದಿರುತ್ತೀರಿ ಮತ್ತು ಪರಿಗಣಿಸಲ್ಪಟ್ಟಿರದ ದೋಷಗಳನ್ನು ಪರಿಹರಿಸಿದ ಕಾರಣಕ್ಕೆ ಕಾರ್ಯಕ್ಷೇತ್ರದಲ್ಲಿ ನೀವು ಶ್ಲಾಘನೆಗೆ ಒಳಗಾಗುವಿರಿ. ವ್ಯಾಜ್ಯವನ್ನು ತಪ್ಪಿಸಿ ಇಲ್ಲವಾದಲ್ಲಿ ಇದು ನಿಮ್ಮ ಸಂಭಾವ್ಯ ಉತ್ತಮ ದಿನವನ್ನು ಹಾಳುಮಾಡಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ.
ವೃಷಭ :-
ಈ ದಿನವು ಅತ್ಯುತ್ತಮ ದಿನವಾಗಿರುವ ಭರವಸೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ನೀವು ಸುಸ್ಥಿತಿಯಲ್ಲಿರುವಿರಿ. ಉತ್ತಮ ವಿಚಾರಗಳಿಗಾಗಿ ದಿನಪೂರ್ತಿ ನೀವು ನಗುವಿನಿಂದ ಕೂಡಿರುವಿರಿ. ಎಲ್ಲವೂ ಸರಿಯಾದ ಸ್ಥಳದಲ್ಲಿ ಸಂಭವಿಸಲಿದೆ ಮತ್ತು ಇಂದು ನೀವು ಪೂರ್ಣಗೊಳಿಸಲು ಆಯೋಜಿಸಿದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನಿಮ್ಮ ಬಂಡವಾಳದಿಂದ ಉತ್ತಮ ಪ್ರತಿಫಲವನ್ನು ಪಡೆಯುವ ನಿರೀಕ್ಷಿಯಿದೆ. ಹೆತ್ತವರ ಸಹಾಯದಿಂದ ಬ್ರಹತ್ ಪ್ರಮಾಣದ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ನೀವು ಕಷ್ಟಕರ ಹಾದಿಯಲ್ಲಿ ಸಾಗುತ್ತಿದ್ದಲ್ಲಿ ಇಂದು ಎಲ್ಲವೂ ಸುಗಮವಾಗಲಿದೆ.
ಮಿಥುನ :-
ಇಂದು ನೀವು ನೆನಪಿನಲ್ಲಿಡಬಯಸುವಂತಹ ಉತ್ತಮ ದಿನವಾಗಿರುವುದಿಲ್ಲ. ನೀವು ಅವಮರ್ಯಾದೆ ಮತ್ತು ಮುಜುಗರವನ್ನು ಎದುರಿಸಬೇಕಾಗಬಹುದು. ಹೊಸದನ್ನೇನಾದರು ಪ್ರಾರಂಭಿಸಲು ನೀವು ಯೋಜನೆ ರೂಪಿಸಬಹುದು ಆದರೆ, ಅವುಗಳು ನೀವೆಣಿಸಿದ ಹಾದಿಯಲ್ಲಿ ಸಾಗುವುದಿಲ್ಲ. ನಿಮ್ಮ ಮಕ್ಕಳ ಶಿಕ್ಷಣ, ಆರೋಗ್ಯ ಅಥವಾ ನೆಮ್ಮದಿಗೆ ಸಂಬಂಧಿಸಿ ನೀವು ಸಾಕಷ್ಟು ಖರ್ಚುಮಾಡಬೇಕಾಗುತ್ತದೆ. ನಿಮ್ಮದೇ ಆರೋಗ್ಯವು ಚಿಂತೆಗೆ ಕಾರಣವಾಗುತ್ತದೆ ಇದು ನಿಮ್ಮ ನಿರಾಶೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಸ್ಥಿತಿಯನ್ನು ಮತ್ತೊಮ್ಮೆ ಹೇಳಬೇಕಾಗಿಲ್ಲ, ಖಂಡಿತವಾಗಿಯೂ ಇದು ನಿಮ್ಮನ್ನು ರಾತ್ರಿಯಿಡೀ ನಿದ್ದೆಗೆಡಿಸುವಂತೆ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಇಂದು ಸಾಮಾನ್ಯ ದಿನವಾಗಿದೆ ಮತ್ತು ಕಠಿಣ ಪರಿಶ್ರಮಪಟ್ಟರೆ ಉತ್ತಮವಾಗಿ ಪರಿವರ್ತನೆಗೊಳ್ಳಬಹುದು. ಇಂದು ಲೈಂಗಿಕವಾಗಿ ಕ್ರಿಯಾಶೀಲರಾಗುವಿರಿ ಎಂಬುದಾಗಿ ಗಣೇಶ ಭಾವಿಸುತ್ತಾರೆ.
ಕರ್ಕಾಟಕ :-
ಇಂದು ಉತ್ತಮ ದಿನವಲ್ಲ. ಮತ್ತು ನೀವು ಕೆಟ್ಟದಾದ ಮನಸ್ಥಿತಿಯಲ್ಲಿರಬಹುದು. ಏನು ತಪ್ಪು ನಡೆದಿದೆ ಮತ್ತು ನೀವೇನು ತಪ್ಪು ಮಾಡಿದಿರಿ ಎಂಬುದರ ಬಗ್ಗೆ ನೀವು ಆಶ್ಚರ್ಯ ಪಡಬಹುದು. ಇದು ಗ್ರಹಗತಿಗಳ ಕೆಟ್ಟ ಪ್ರಭಾವದಿಂದ ಹೀಗಾಗುತ್ತಿದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ನಿಮ್ಮ ಮನಸ್ಸು ಆತಂಕ ಮತ್ತು ಗೊಂದಲದಿಂದ ತುಂಬಿರುತ್ತದೆ ಮತ್ತು ಇತರರೊಂದಿಗೆ ವ್ಯವಹರಿಸುವಾಗ ಯಾರು ಒರಟಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಲು ನಿಮಗೆ ಅಸಾಧ್ಯವಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಮಹಿಳೆಯರೊಂದಿಗೆ ನೀವು ಜಗಳವಾಡುವ ಸಾಧ್ಯತೆಯಿದೆ. ಇಂದು ನೀವು ಮೋಸದಿಂದ ನಿಮ್ಮ ಹಣವನ್ನು ಕಳೆದುಕೊಳ್ಳುವಿರಿ. ಆದ್ದರಿಂದ ಅವುಗಳ ಬಗ್ಗೆ ಜಾಗರೂಕರಾಗಿರಿ. ಅವಮರ್ಯಾದೆಯನ್ನು ಎದುರಿಸುವ ಸಾಧ್ಯತೆಯಿದೆ. ಗಣೇಶ ನಿಮಗೆ ಸಹಾಯ ಮಾಡಲಿ.
ಸಿಂಹ :-
ಈ ದಿನವು ಅದ್ಭುತ ದಿನವಾಗಲಿದೆ ಎಂಬುದಾಗಿ ಗಣೇಶ ನಂಬುತ್ತಾರೆ. ಉತ್ತಮ ಆರೋಗ್ಯ, ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ರಚನಾತ್ಮಕ ಸಂವಾದವನ್ನು ಹೊಂದುವಿರಿ. ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ಸುಂದರ ಸ್ಥಳಗಳಿಗೆ ಪ್ರವಾಸ ತೆರಳುವ ಸಾಧ್ಯತೆಯಿದೆ. ನಿಮ್ಮ ಏಳಿಗೆಯಿಂದ ನಿಮ್ಮ ಪ್ರೀತಿಪಾತ್ರರು ಮತ್ತು ಸ್ನೇಹಿತರು ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. ಎಲ್ಲಾ ಕಲಾತ್ಮಕತೆಯ ಬಗ್ಗೆ ನೀವು ತೀವ್ರ ಒಲವು ತೋರಲಿದ್ದೀರಿ ಮತ್ತು ವಿಚಾರಗಳಲ್ಲಿನ ನಿಮ್ಮ ದೃಷ್ಟಿಯಲ್ಲಿ ಭಾವುಕರಾಗಿರುವ ಸಾಧ್ಯತೆಯಿಲ್ಲ. ನಿಮ್ಮ ಮನಸ್ಸು, ದೇಹ ಮತ್ತು ಆತ್ಮಕ್ಕೆ ಉತ್ತಮ ದಿನ.
ಕನ್ಯಾ :-
ನೀನು ಮಾಡಲಾರೆಯಾ? ಎಂಬ ಪದದೊಂದಿಗೆ ನೀವು ಹಾದಿಯನ್ನು ಹೊಂದಿರುವಿರಿ. ನಿಮ್ಮನ್ನು ಅನುಸರಿಸುತ್ತಿರುವವರೊಂದಿಗೆ ನೀವು ಉತ್ತಮ ಸಂವಾದವನ್ನು ಹೊಂದಬಹುದು ಮತ್ತು ಆಕರ್ಷಿಸಬಹುದು. ಸಾಮಾನ್ಯವಾಗಿಲ್ಲದಿದ್ದರೂ, ಸ್ವಲ್ಪಮಟ್ಟಿಗೆ ಮೇಲೆ ಸೂಚಿಸಿದ ವಿವರಣೆಯು ನಿಮಗೆ ಸರಿಹೊಂದುತ್ತದೆ.ನಿಮ್ಮ ಕುಟುಂಬವು ನಿಮ್ಮನ್ನು ಗೌರವಿಸುತ್ತದೆ ಮತ್ತು ನಿಮ್ಮೊಂದಿಗಿನ ಸಾಂಗತ್ಯವನ್ನು ಆನಂದಿಸುತ್ತದೆ. ನಿಮ್ಮ ಮೋಹಗೊಳಿಸುವಿಕೆಯ ಸ್ವಭಾವವು ಹಣವನ್ನು ನಿಮ್ಮತ್ತ ಆಕರ್ಷಿಸುತ್ತದೆ ಮತ್ತು ಉತ್ತಮ ಆರೋಗ್ಯವು ಈ ದಿನಪೂರ್ತಿ ಸಂತಸದಿಂದಿರುವ ಭರವಸೆಯನ್ನು ನೀಡುತ್ತದೆ. ಬೌದ್ಧಿಕ ಚರ್ಚೆಯಲ್ಲಿ ಒಳಗೊಳ್ಳಬಹುದು. ಆದರೆ ನಮ್ರತೆಯು ಮಾತ್ರವೇ ಸರಿಯಾದ ಪ್ರತಿಕ್ರಿಯೆಯನ್ನು ನೀಡುತ್ತದೆ. ಇಲ್ಲವಾದಲ್ಲಿ ನಿಮ್ಮ ಸಂವಾದವು ಸಣ್ಣ ಜಗಳವಾಗಿ ಮಾರ್ಪಡಬಹುದು.
ತುಲಾ :-
ಸೃಜನಶೀಲತೆ ಮತ್ತು ನಿಮ್ಮನ್ನು ಕಲಾವಿದನನ್ನಾಗಿಸಿದ ನಿಮ್ಮ ಕೌಶಲ್ಯಗಳಿಗೆ ಈ ದಿನವು ಅತ್ಯುತ್ತಮ ದಿನವಾಗಲಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಸದೃಢರಾಗಿರುವಿರಿ. ಅನ್ವೇಷಣಾ ಮಟ್ಟ ಮತ್ತು ಚೌಕಟ್ಟಿಗೂ ಮೀರಿದ ಅರ್ಹತೆ ಅಗತ್ಯವಿರುವ ಕಾರ್ಯಗಳಲ್ಲಿ ಇಂದು ನೀವು ಯಶಸ್ಸು ಕಾಣಲಿದ್ದೀರಿ. ಸದೃಢ ಪರಿಪೂರ್ಣತೆಯು ನಿಮ್ಮ ಗುರಿಯನ್ನು ಸಾಧಿಸಲು ಮತ್ತು ಹಣಕಾಸು ವಿಚಾರಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ನಿಮಗೆ ಸಹಕಾರಿಯಾಗಲಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಮತ್ತು ನೀವು ಅವರ ಸಾಂಗತ್ಯವನ್ನು ಆನಂದಿಸುವಿರಿ.
ವೃಶ್ಚಿಕ :-
ಗಣೇಶ ಅಪಘಾತಗಳ ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತಾರೆ. ಶಸ್ತ್ರಚಿಕಿತ್ಸೆಗೆ ಒಳಪಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಯಾಕೆಂದರೆ ನೀವು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ. ಸಮಸ್ಯೆಗಳು ಬೆಂಬತ್ತುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಗಳು ಅಷ್ಟು ಉತ್ತಮವಾಗಿರುವುದಿಲ್ಲ. ಮೋಜು ಮಾಡಲು ನೀವು ವೆಚ್ಚಮಾಡುವಿರಿ. ನಿಮ್ಮ ಆಪ್ತರೊಂದಿಗೆ ಮನಸ್ತಾಪ ಉಂಟಾಗಬಹುದು.
ಧನು :-
ಇಂದಿನ ದಿನ ಲಾಭದ ದಿನವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವಿಂದು ನಿಮ್ಮ ಕುಟುಂಬ ಜೀವನದ ಸಂತೋಷವನ್ನು ಸಂಪೂರ್ಣವಾಗಿ ಅನುಭವಿಸುವಿರಿ. ನೀವಿಂದು ಮಿತ್ರರೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುವಿರಿ. ನಿಮ್ಮ ಗ್ರಹಗತಿಯ ಪ್ರಕಾರ ನಿಮ್ಮ ಆದಾಯ ವೃದ್ಧಿಯಾಗುವ ಸಾಧ್ಯತೆಯಿದೆ. ನಿಮಗಿಷ್ಟವಾದ ತಿನಿಸನ್ನು ಸವಿಯುವಿರಿ
ಮಕರ :-
ಇಂದು ನೀವು ವ್ಯವಹಾರ ಸಂಬಂಧಿತ ಕಾರ್ಯಗಳಿಂದ ಲಾಭ ಪಡೆಯುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಹಣಕಾಸು ಹಿಂಪಡೆಯುವಿಕೆ, ಪ್ರಯಾಣ ಮತ್ತು ಹೆಚ್ಚುವರಿ ಆದಾಯಗಳಿಗೆ ಈ ದಿನವು ಅನುಕೂಲಕರ ದಿನ. ಇಂದು ನೀವು ಸರಕಾರ, ಸ್ನೇಹಿತರ ಮತ್ತು ಸಂಬಂಧಿಗಳಿಂದ ಪ್ರಯೋಜನ ಪಡೆಯುವಿರಿ. ನಿಮ್ಮ ಪ್ರೀತಿಪಾತ್ರರು ಉಡುಗೊರೆಗಳ ಮೂಲಕ ನಿಮ್ಮನ್ನು ಅಚ್ಚರಿಗೊಳಿಸಲಿದ್ದಾರೆ. ಬೆಂಕಿ, ನೀರು ಮತ್ತು ಅಪಘಾತಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಕೆಲವು ವ್ಯವಹಾರ ಸಂಬಂಧಿ ಕಾರ್ಯಗಳು ನಿಮಗೆ ಹೆಚ್ಚು ಶ್ರಮ ನೀಡಲಿವೆ. ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ನೀವು ಸಂತೋಷಗೊಳ್ಳುವಿರಿ. ನಿಮ್ಮ ಗೌರವ ವೃದ್ಧಿಸಲಿದೆ.
ಕುಂಭ :-
ಈ ದಿನವು ಮಿಶ್ರ ಫಲಿತಾಂಶಗಳ ಅನುಗ್ರಹವಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ತೊಂದರೆಯಲ್ಲಿ ಸಿಲುಕಿಕೊಳ್ಳಲಿದ್ದೀರಿ. ಆದರೆ, ನಿಮ್ಮ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಚೈತನ್ಯದ ಕೊರತೆಯು ಉತ್ಸಾಹದ ಕೊರತೆಯನ್ನು ಉಂಟುಮಾಡುತ್ತದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಾರ್ಯದ ಬಗ್ಗೆ ಸಂತೋಷವನ್ನು ಹೊಂದುವುದಿಲ್ಲ ಮತ್ತು ಇದು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ವಿನೋದಕ್ಕಾಗಿ ನೀವು ಸಾಕಷ್ಟು ವೆಚ್ಚಮಾಡಬಹುದು. ಪ್ರಯಾಣ ತೆರಳುವ ಸಾಧ್ಯತೆಯಿದೆ. ವಿದೇಶದಿಂದ ಶುಭಸುದ್ದಿಗಳು ಬರಲಿವೆ. ನಿಮ್ಮ ಮಕ್ಕಳ ಬಗ್ಗೆ ನೀವು ಚಿಂತೆಗೊಳಗಾಗುವಿರಿ.
ಮೀನ :-
ಆಧ್ಯಾತ್ಮದಲ್ಲಿ ತೊಡಗಿಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇಂದು ನೀವು ಕೆಲವು ಅನನುಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಜೊತೆಗೆ, ನೀವು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಕಾಯಿಲೆಗಳು ನಿಮ್ಮ ಖರ್ಚನ್ನು ಹೆಚ್ಚಿಸಬಹುದು. ಕುಟುಂಬ ಸದಸ್ಯರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ. ಅನಿರೀಕ್ಷಿತ ಧನಲಾಭವು ನಿಮ್ಮನ್ನು ಉಲ್ಲಾಸದಲ್ಲಿರಿಸುತ್ತದೆ. ವ್ಯವಹಾರದಲ್ಲಿರುವವರು ತಮ್ಮ ಹಣಕಾಸು ವಿಚಾರಗಳಲ್ಲಿ ಚೇತರಿಕೆ ಕಂಡುಕೊಳ್ಳುತ್ತಾರೆ
Horoscope Today : ಡಿಸೆಂಬರ್ 07 ರಂದು ಯಾವ ರಾಶಿಗೆ ಶುಭ.? ಯಾವ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now