ಆಸ್ಟ್ರೇಲಿಯಾವನ್ನೇ ಬೆಚ್ಚಿಬೀಳಿಸಿದ ತಂದೆ-ಮಗ; ಯಹೂದಿಗಳ ಮೇಲೆ ದಾಳಿ ನಡೆಸಿದ ಸಾಜಿದ್ ಮತ್ತು ನವೀದ್ ಯಾರು?

Spread the love

ಆಸ್ಪ್ರೇಲಿಯಾದ ಬಾಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬದ ಸಂಭ್ರಮದಲ್ಲಿದ್ದ ಯಹೂದಿಗಳನ್ನು ಗುರಿಯಾಗಿಸಿಕೊಂಡು, ನಡೆದ ಗುಂಡಿನ ದಾಳಿಯಿಂದಾಗಿ 16 ಜನರು ಮೃತಪಟ್ಟಿದ್ದಾರೆ ಎಂದು ನ್ಯೂ ಸೌಥ್ಸ್‌ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಯಹೂದಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಸಾಜಿದ್‌ ಅಕ್ರಮ್‌ ಮತ್ತು ನವೀದ್‌ ಅಕ್ರಮ್‌ ಯಾರು? ಇವರಿಬ್ಬರ ನಂಟೇನು.?
ಏನಿದು ಘಟನೆ?

ಭಾನುವಾರ ಸಿಡ್ನಿಯ ಬೀಚ್‌ನಲ್ಲಿ ನಡೆದಂತಹ ಘಟನೆ ಕಳೆದ 30 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಎಂಟು ದಿನಗಳ ಕಾಲ ನಡೆಯುವ ಹನುಕ್ಕಾ ಬೈ ದಿ ಸೀ ಹಬ್ಬ ರವಿವಾರ(ಡಿ.15)ರಿಂದ ಆರಂಭವಾಗಿತ್ತು. ಉತ್ಸವದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸಂಭ್ರಮದಿಂದ ನಡೆಯುತ್ತಿದ್ದ ಹಬ್ಬದ ನಡುವೆ ಕೇಳಿ ಬಂದ ಗುಂಡಿನ ಸದ್ದು ಜನರನ್ನು ನಡುಗಿಸಿತು. ಕಪ್ಪು ಬಟ್ಟೆ ಧರಿಸಿಕೊಂಡು ಬಂದಿದ್ದ, ಇಬ್ಬರು ಜನರ ಮೇಲೆ ಮನಬಂದಂತೆ ಗುಂಡು ಹಾರಿಸುತ್ತಿದ್ದರು. ಈ ದೃಶ್ಯ ಕಂಡ ಜನ ಹೌಹಾರಿದರು. ದಿಕ್ಕಾಪಾಲಾಗಿ ಓಡಲು ಶುರು ಮಾಡಿದರು. ತಮ್ಮ ತಮ್ಮ ಪ್ರಾಣ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಗಳತ್ತ ಕಾಲ್ಕಿತ್ತರು. ಹೀಗಿದ್ದರೂ ಸಹ, ಬಂದೂಕುಧಾರಿಗಳ ಕೈಗೆ ಸಿಕ್ಕ ಕೆಲವರು ಗುಂಡೇಟಿಗೆ ಬಲಿಯಾದರು. ಮೃತರಲ್ಲಿ 10 ವರ್ಷದ ಮಗು ಮತ್ತು 87 ವರ್ಷದ ವೃದ್ಧರು ಸೇರಿದ್ದಾರೆ ಎನ್ನಲಾಗಿದೆ.

ಯಾರೀ ಹಂತಕರು?

ಅಮಾಯಕ ಜನರ ಮೇಲೆ ದಾಳಿ ನಡೆಸಿದ ಹಂತಕರು ಯಾರೆಂದು ನ್ಯೂಸೌಥ್‌ ವೇಲ್ಸ್‌ ಪೊಲೀಸರು ಹಾಗೂ ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದಾರೆ.ದಾಳಿ ನಡೆಸಿದ ಇಬ್ಬರು ಬಂದೂಕುಧಾರಿಗಳನ್ನು ತಂದೆ ಮತ್ತು ಮಗ ಎಂದು ಗುರುತಿಸಲಾಗಿದೆ. ನಾಗರಿಕರ ಪ್ರತಿದಾಳಿಯಲ್ಲಿ ತಂದೆ ಹತನಾಗಿದ್ದಾನೆ. ಇಬ್ಬರು ಸೌಥ್‌ ವೆಸ್ಟ್‌ ನಗರ ವಾಸಿಗಳು ಎನ್ನಲಾಗಿದೆ.(ಸಿಡ್ನಿಯಲ್ಲಿ ಗುಂಡಿನ ದಾಳಿ ಬೆಂಗಳೂರು, ಮುಂಬೈ ಸೇರಿದಂತೆ ಹಲವು ಕಡೆ ಕಟ್ಟೆಚ್ಚರ)

50 ವರ್ಷದ ಸಾಜಿದ್‌ ಅಕ್ರಮ್ ಹಣ್ಣಿನ ಅಂಗಡಿಯೊಂದರ ಮಾಲೀಕನಾಗಿದ್ದ. ಈತ ಪೊಲೀಸರ ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದ. ಇನ್ನು ಈತನ ಮಗ ನವೀದ್‌ ಅಕ್ರಮ್. ಈತನನ್ನು ಘಟನಾ ಸ್ಥಳದಲ್ಲೇ ಬಂಧಿಸಲಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರನ್ನು ಹೊರತುಪಡಿಸಿ, ದಾಳಿಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ. ಮೇಲ್ನೋಟಕ್ಕೆ ಯಹೂದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎನ್ನುವುದು ಬೆಳಕಿಗೆ ಬಂದಿದ್ದು, ನಿಖರ ಕಾರಣವನ್ನು ಹಂತಕನಿಂದ ಪಡೆಯಬೇಕಿದೆ ಎಂದು ನ್ಯೂ ಸೌಥ್ಸ್‌ ಪೊಲೀಸರು ಸ್ಪಷ್ಟಪಡಿಸಿದ್ದಾರೆ..

ಮೀನುಗಾರಿಕೆಗೆ ಹೋಗ್ತಿದ್ದೇವೆ ಎಂದು ಸುಳ್ಳು

ಹಂತಕರು ದಾಳಿ ನಡೆಸುವ ಮೊದಲು ತಮ್ಮ ಕುಟುಂಬ ಸದಸ್ಯರಿಗೆ ವಾರಾಂತ್ಯದ ಮೀನುಗಾರಿಕೆಗಾಗಿ ಜರ್ವಿಸ್ ಬೇಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿದ್ದರು. ಆರೋಪಿಗಳ ಬಳಿ ಬಂದೂಕು ಪರವಾನಗಿ ಇತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ನ್ಯೂ ಸೌಥ್‌ ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.(ಬಂಧೂಕುದಾರಿಯನ್ನು ಹಿಡಿದ ನಾಗರಿಕ)

ಆರೋಪಿಗಳ ವಾಹನದಲ್ಲಿ ಸುಧಾರಿತ ಸ್ಫೋಟಕ ಸಾಧನಗಳು ಪತ್ತೆಯಾಗಿವೆ. ಇವರು ಉನ್ನತ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆದರು ಮತ್ತು ಇವರಿಗೆ ಇನ್ಯಾರಾದರೂ ಸಹಕರಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

WhatsApp Group Join Now

Spread the love

Leave a Reply