ಕಾಲೇಜ್ ಹಾಸ್ಟೆಲ್ನಲ್ಲಿ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ವಿದ್ಯಾರ್ಥಿಯ (student) ಶವ ಪತ್ತೆ (dead body found)ಆಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್ಬಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಸ್ಟೆಲ್ನಲ್ಲಿ ನಡೆದಿದೆ.
BAMS ಅಂತಿಮ ವರ್ಷದಲ್ಲಿ ಓದುತ್ತಿದ್ದ ಈಶ್ವರ ಗಾದಗೆ(21) ಮೃತ ವಿದ್ಯಾರ್ಥಿ. ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆಡಳಿತ ಮಂಡಳಿ, ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಟುಂಬಸ್ಥರಿಗೆ ಮಾಹಿತಿ ನೀಡದೇ ಆಸ್ಪತ್ರೆಗೆ ಮೃತದೇಹವನ್ನು ಸಾಗಾಟ ಮಾಡಿದ್ದಾರೆ.
ಡೆತ್ ನೋಟ್ ಪತ್ತೆ: ಕೊಲೆ ಎಂದ ಕುಟುಂಬಸ್ಥರು
ಮೃತ ವಿದ್ಯಾರ್ಥಿ ಈಶ್ವರ ಗಾದಗೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಧನ್ನೂರ ಎಸ್ ಗ್ರಾಮದವರು. ಎಸ್ಬಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ನಲ್ಲಿ BAMS ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಆರು ತಿಂಗಳ ಹಿಂದೆ ಕೂಡ ಕಾಲೇಜ್ ಉಪನ್ಯಾಸಕ ಕಿರುಕುಳ ತಾಳಲಾರದೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇನ್ನು ಎರಡು ಲೈನ್ ಇರುವ ಡೆತ್ ನೋಟ್ ಪತ್ತೆ ಆಗಿದೆ. ‘ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನಾನೇ ಕಾರಣ. ಸಾರಿ ಮಮ್ಮಿ, ಪಪ್ಪಾ’ ಅಂತ ಬರೆಯಲಾಗಿದೆ. ಆದರೆ ಇದು ನಮ್ಮ ಮಗ ಬರೆದ ಡೆತ್ ನೋಟ್ ಅಲ್ಲ, ನಮ್ಮ ಮಗನ ಬರವಣಿ ಅಲ್ಲ ಎಂದಿದ್ದಾರೆ ಕುಟುಂಬಸ್ಥರು. ಕಾಲೇಜ್ನವರು ಸೃಷ್ಟಿ ಮಾಡಿರುವ ಡೆತ್ ನೋಟ್ ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿ ಕಾಲಿನ ಬೆರಳಿ ಉಗುರು ಕಿತ್ತು ಚಿತ್ರಹಿಂಸೆ ನೀಡಿದ್ದಾರೆ. ಕತ್ತು, ದೇಹದ ಭಾಗದಲ್ಲಿ ರಕ್ತ ಗಾಯಗಳಾಗಿವೆ. ಕಾಲೇಜ್ನವರೇ ಕೊಲೆ ಮಾಡಿ ಆತ್ಮಹತ್ಯೆ ಕಥೆ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಕುಟುಂಬಸ್ಥರ ಆರೋಪವಾಗಿದೆ.
ಈ ಹಿಂದೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ
ಇನ್ನು ಈಶ್ವರ ಗಾದಗೆ ಈ ಕಾಲೇಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂರನೇ ವಿದ್ಯಾರ್ಥಿ. ಈ ಹಿಂದೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅದನ್ನು ಮುಚ್ಚಿ ಹಾಕಿದ್ದಾರೆ. ನಮ್ಮ ಮಗನಿಗೂ ಕಿರಕುಳ ನೀಡಿದ್ದಾರೆ. ಇದು ಅಂತಿಮ ವರ್ಷವಿರುವುದರಿಂದ ಸಮಾಧಾನ ಮಾಡಿದ್ದೇವು. ಆದರೆ ಕಾಲೇಜನವರು ಕೊಂದು ಬಿಟ್ಟರು. ಎಲ್ಲಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾನೆ ಎಂದು ಮಗನ್ನು ಕಳೆದುಕೊಂಡ ಹೆತ್ತವರು ಕಣ್ಣೀರು ಹಾಕಿದ್ದಾರೆ.
ಹಾಸ್ಟೆಲ್ನಲ್ಲಿ BAMS ವಿದ್ಯಾರ್ಥಿ ಅನುಮಾನಾಸ್ಪದ ಸಾವು : ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ
WhatsApp Group
Join Now