12 ವೋಟ್ ಪಡೆದಿದ್ದು ಸರ್ದಾರ್ ವಲ್ಲಭಾಯಿ ಪಟೇಲ್, ಆದ್ರೆ ನೆಹರೂ ಹೇಗೆ ಪ್ರಧಾನಿಯಾದ್ರು

Spread the love

ಸ್ವಾತಂತ್ರ್ಯಾ ನಂತರ ಪ್ರಧಾನಿ ಯಾರಾಗಬೇಕು ಎಂದು ಮತದಾನವಾದಾಗ ಸರ್ದಾರ್ ವಲ್ಲಭಾಯಿ ಪಟೇಲ್ ಗೆ 12 ಮತಗಳು ಬಂದಿತ್ತು. ನೆಹರೂಗೆ ಕೇವಲ 2 ಮತ ಬಂದಿದ್ದು. ಆದರೆ ಕೊನೆಗೆ ಪ್ರಧಾನಿಯಾಗಿದ್ದು ನೆಹರೂ. ಇಲ್ಲಿಯೇ ಮತಗಳ್ಳತನ ಆರಂಭವಾಗಿತ್ತು ಎಂದು ಗೃಹಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಮೇಲೆ ಮತಗಳ್ಳತನದ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಉತ್ತರಿಸುತ್ತಿದ್ದ ಅಮಿತ್ ಶಾ ಮೊದಲು ಮತಗಳ್ಳತನ ಆರಂಭವಾಗಿದ್ದೇ ನೆಹರೂವಿನಿಂದ ಎಂದಿದ್ದಾರೆ.

ದೇಶದಲ್ಲಿ ಪ್ರಮುಖವಾಗಿ ಮೂರು ಮತದಾನ ನಡೆದಿತ್ತು. ಅದರಲ್ಲಿ ಮೊದಲನೆಯದ್ದು ನೆಹರೂ ಪ್ರಧಾನಿಯಾದಾಗ. ಸರ್ದಾರ್ ವಲ್ಲಭಾಯಿ ಪಟೇಲ್ ಗೆ 12 ವೋಟ್ ಬಂದಿತ್ತು. ನೆಹರೂಗೆ ಕೇವಲ 2 ಮತ ಬಂದಿತ್ತು. ಕೊನೆಗೆ ಪ್ರಧಾನಿಯಾಗಿದ್ದು ನೆಹರೂ!

ಎರಡನೆಯ ಬಾರಿಗೆ ಮತಗಳ್ಳತನವಾಗಿದ್ದು ಇಂದಿರಾ ಗಾಂಧಿಯವರಿಂದ. ತಮ್ಮ ಆಯ್ಕೆ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ತಿಳಿದು ತಮ್ಮ ಸ್ಥಾನಕ್ಕೆ ಕುತ್ತು ಬರಬಹುದು ಎಂದು ತಿಳಿದಾಗ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನು ಅಮಾನತಿನಲ್ಲಿಟ್ಟರು.

ಮೂರನೆಯ ಬಾರಿ ಸೋನಿಯಾ ಗಾಂಧಿ ಪೌರತ್ವ ಪಡೆಯುವ ಮೊದಲೇ ಮತ ಚಲಾಯಿಸಿದಾಗಲೇ ಮತಗಳ್ಳತನ ನಡೆದಿತ್ತು ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now

Spread the love

Leave a Reply