ವೈಟ್ಫೀಲ್ಡ್ನಲ್ಲಿ ತಾನೇ ಕಟ್ಟಿಸುತ್ತಿದ್ದ ಮನೆಯಲ್ಲಿ ಟೆಕ್ಕಿ ಮುರಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮುರಳಿ ಅವರು ಉಷಾ ನಂಬಿಯಾರ್ ಎಂಬುವರ ಜಾಗವನ್ನು ಖರೀದಿ ಮಾಡಿಕೊಂಡು ಮನೆ ನಿರ್ಮಿಸುತ್ತಿದ್ದರು. ಆದರೆ, ಕಟ್ಟಡದಲ್ಲಿ ನಿಯಮ ಮೀರಿ ಕೆಲಸ ನಡೆಸಲಾಗಿದೆ ಎಂಬ ಆರೋಪದ ಮೇಲೆ ಉಷಾ ನಂಬಿಯಾರ್ ಅವರು ಜಿಬಿಎಗೆ ದೂರು ನೀಡಿದ್ದು, ಇದರಿಂದ ಜಿಬಿಎ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಇದೇ ವೇಳೆ, ಜಿಬಿಎ ಅಧಿಕಾರಿಗಳೊಂದಿಗೆ ಸೇರಿ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಮುರಳಿ ತಮ್ಮ ಡೆತ್ ನೋಟ್ನಲ್ಲಿ ಆರೋಪಿಸಿದ್ದಾರೆ. ಇಂದು ಹಣ ಕೊಡಲೇಬೇಕೆಂದು ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ, ಮಾನಸಿಕ ಒತ್ತಡಕ್ಕೆ ಒಳಗಾದ ಮುರಳಿ ನಿರ್ಮಾಣ ಹಂತದ ಮನೆಯ 2ನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಉಷಾ ನಂಬಿಯಾರ್ ಸೇರಿದಂತೆ ಇಬ್ಬರ ವಿರುದ್ದ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ
WhatsApp Group
Join Now