ದೈವ ನಮ್ದು ನಿಮ್ಮದಲ್ಲ : ದೈವದ ವೇಷ ಹಾಕಿ ನೃತ್ಯ ಮಾಡುತ್ತಿದ್ದವನನ್ನು ತಡೆದ ಕರಾವಳಿ ಹುಡುಗನಿಗೆ ಬೆಂಗಳೂರಿಗರ ಕೌಂಟರ್

Spread the love

ಕರಾವಳಿ ಜನರು ಬಹಳ ಭಕ್ತಿಯಿಂದ ಆರಾಧಿಸುವ ದೈವದ ನೃತ್ಯವನ್ನು ಎಲ್ಲೆಂದರಲ್ಲಿ ವೇಷ ಹಾಕಿ ಅನುಕರಿಸಬಾರದು ಎಂಬುದು ಆ ಭಾಗದ ಜನರ ಮನವಿ ಹಾಗೂ ಆಕ್ರೋಶವೂ ಹೌದು. ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ದೈವದ ವೇಷ ಹಾಕಿದ್ದಕ್ಕೂ ಸಹ ಕರಾವಳಿ ಜನರು ಕಿಡಿಕಾರಿದ್ದರು.

ಇನ್ನು ಕಾಂತಾರ ಚಿತ್ರ ಬಿಡುಗಡೆಯಾದ ಮೇಲಂತೂ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳು ಹಾಗೂ ಉತ್ತರ ಭಾರತದ ಭಾಗಗಳಲ್ಲೂ ಸಹ ದೈವದ ಹಾಗೆ ವೇಷ ಹಾಕಿ ಕಾರ್ಯಕ್ರಮಗಳಲ್ಲಿ ಹಾಗೂ ದೂರದರ್ಶನದ ಡಾನ್ಸ್ ಶೋಗಳಲ್ಲಿ ಅನೇಕರು ನೃತ್ಯ ಮಾಡಿದ್ದರು.

ಈ ವೇಳೆ ಕರಾವಳಿ ಜನರಿಂದ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ದುಡ್ಡಿಗಾಗಿ ತಮ್ಮ ಆಚರಣೆಯನ್ನು ಮನರಂಜನಾ ವಸ್ತುವನ್ನಾಗಿ ಮಾರ್ಪಡಿಸುತ್ತಿದ್ದೀರ ಎಂದು ಕಿಡಿಕಾರಿದ್ದರು. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಗರದ ವಿಜಯ ಬ್ಯಾಂಕ್ ಲೇಔಟ್‌ನಲ್ಲಿ ನಡೆದಿದೆ.

ಅಲ್ಲಿನ ಕಾರ್ಯಕ್ರಮವೊಂದರಲ್ಲಿ ದೈವದ ಹಾಗೆ ವ್ಯಕ್ತಿಯೊಬ್ಬರು ವೇಷ ಧರಿಸಿ ನಿಂತಿದ್ದರು. ಆ ವ್ಯಕ್ತಿ ಬಳಿಗೆ ತೆರಳಿದ ಕರಾವಳಿ ಯುವಕ ನೀವು ದೈವದ ವೇಷ ಹಾಕಿ ಡಾನ್ಸ್ ಮಾಡಬಹುದಾ? ಎಂದು ಪ್ರಶ್ನಿಸಿದ್ದಾನೆ. ಅತ್ತ ವೇಷಧಾರಿ ಎಲ್ಲರೂ ಮಾಡುತ್ತಿದ್ದಾರೆ ಎಂದು ಉತ್ತರಿಸಿದ್ದು, ಯುವಕ ಯಾರು ಮಾಡುತ್ತಿದ್ದಾರೆ, ನಿಮಗೆ ಮಾಡಲು ಹೇಳಿದವರಾರು ನಂಬರ್ ಕೊಡಿ ಎಂದು ಕಿಡಿಕಾರಿದ್ದಾನೆ.

ಅದೇ ಸಮಯಕ್ಕೆ ಸ್ಥಳಕ್ಕೆ ಕಾರ್ಯಕ್ರಮದ ಆಯೋಜಕರು ಆಗಮಿಸಿದ್ದು, ವ್ಯಕ್ತಿಯೋರ್ವ ಬಂದು ಯುವಕನನ್ನು ಪ್ರಶ್ನಿಸಿದ್ದಾನೆ. ಯುವಕ ಈ ರೀತಿ ವೇಷ ಹಾಕಿ ಡಾನ್ಸ್ ಮಾಡುವಂತಿಲ್ಲ ಎಂದಿದ್ದು, ವ್ಯಕ್ತಿ ನಂಬರ್ ಕೇಳುತ್ತಿದ್ದಲ್ಲ ತಗೊ ನನ್ನ ನಂಬರ್ ಎಂದು ಕೋಪದಿಂದಲೇ ಹೇಳಿ ತನ್ನ ಸಂಪರ್ಕ ಸಂಖ್ಯೆಯನ್ನು ನೀಡಿದ್ದಾನೆ.

ಅಷ್ಟೇ ಅಲ್ಲದೇ ಮತ್ತೊಂದಷ್ಟು ಕಾರ್ಯಕ್ರಮದ ಆಯೋಜಕರು ಸ್ಥಳಕ್ಕಾಗಮಿಸಿ ಯುವಕನ ಜತೆ ಮಾತನಾಡಿದ್ದಾರೆ. ಆ ವ್ಯಕ್ತಿ ಇಡೀ ಕರ್ನಾಟಕದಲ್ಲಿ ಎಲ್ಲ ಕಡೆ ನಡೆಯುತ್ತಿದೆ, ದಯವಿಟ್ಟು ಇದಕ್ಕೆ ನೀವು ಸಹಕರಿಸಬೇಕು, ದೈವ ನಮ್ಮದು, ನಿಮ್ಮದಲ್ಲ. ದೈವ ನಮ್ಮ ಆಸ್ತಿ ನಾವು ನಡೆಸುತ್ತಿದ್ದೇವೆ’ ಎಂದು ಯುವಕನಿಗೆ ಹೇಳಿ ಯಾವುದೇ ಕಾರಣಕ್ಕೂ ಇದನ್ನು ಕೈಬಿಡುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.

WhatsApp Group Join Now

Spread the love

Leave a Reply