ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ನಾನು ಹೇಳಿಲ್ಲ. ನಾನು ಹೇಳಿರುವುದು ಬೇರೆ ತರ, ಅದನ್ನು ತಿರುಚಲಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಹೇಳಿದ್ದಾರೆ.
ಸಿಎಂ ಕುರ್ಚಿ ಕಿತ್ತಾಟ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಸ್ಪಷ್ಟನೆ ಕೊಡುವುದು ಸಿಎಂ ಹಾಗೂ ಡಿಸಿಎಂ ಅವರ ಕರ್ತವ್ಯ. ಸಿಎಂ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ನಾನು ಹೇಳಿಲ್ಲ. ನಾನು ಹೇಳಿರುವುದು ಬೇರೆ ತರ. ಅದನ್ನು ತಿರುಚಿದ್ದೀರಿ. ಆದರೆ ಇಂದು ಸಿಎಂ, ಡಿಸಿಎಂ ಇಬ್ಬರು ಕೂಡಾ ಸ್ಪಷ್ಟನೆ ಕೊಟ್ಟಿರುವುದರಿಂದ ಈ ಬಗ್ಗೆ ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಈಗ ಅವರಿಬ್ಬರೂ ತಮ್ಮ ಬಾಯಿಯಿಂದಲೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದ ಮೇಲೆ ಮತ್ತೊಬ್ಬರು ಅದರ ಬಗ್ಗೆ ಮಾತಾಡುವುದಕ್ಕೆ ಯಾವುದೇ ಬೆಲೆ ಇರಲ್ಲ. ರಾಜ್ಯದಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ. ಡಿಕೆ ಶಿವಕುಮಾರ್ ಅವರ ಮಾತು ಒಂದೇ. ಅದು 140 ಶಾಸಕರು ನಮ್ಮ ಪಕ್ಷದವರೇ, ನಾನು ಅವರ ಅಧ್ಯಕ್ಷ ಎನ್ನುವುದು. ಪ್ರತಿ ಸಂದರ್ಭದಲ್ಲೂ ಈ ಮಾತನ್ನು ಅವರು ಹೇಳಿದ್ದಾರೆ. ಮೊದಲ ದಿನದಿಂಲೂ ಹೇಳಿದ್ದಾರೆ, ಈಗಲೂ ಹೇಳುತ್ತಿದ್ದಾರೆ. ನಾಳೆಯೂ ಅದನ್ನು ಹೇಳುತ್ತಾರೆ ಎಂದರು.
ಈಗಾಗಲೇ ಸಿಎಂ ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ಅದರ ಬಗ್ಗೆ ಹೆಚ್ಚಿನ ವಿಚಾರ ಬೇಡ. ಹೈಕಮಾಂಡ್ ಮೀಟಿಂಗ್ ಕೆಲ ದಿನಗಳ ಹಿಂದೆಯೂ ನಡೆದಿತ್ತು. ಅನೇಕ ರಾಜ್ಯಗಳ ವಿಚಾರಗಳನ್ನು, ಸಂಘಟನೆಯ ವಿಚಾರಗಳನ್ನು, ಆಗುಹೋಗುಗಳನ್ನು, ಲೋಕಸಭಾ ಅಧಿವೇಶನ ಸಂಬಂಧ ಸರ್ಕಾರದ ವಿಚಾರಗಳು, ವೈಫಲ್ಯಗಳು ಎಲ್ಲವನ್ನು ಚರ್ಚೆ ಮಾಡಲು ಅನೇಕ ಬಾರಿ ಹೈಕಮಾಂಡ್ ಸಭೆ ಮಾಡಬೇಕಾಗುತ್ತದೆ. ಲೋಕಸಭೆಯಲ್ಲಿ ಪ್ರಸ್ತಾಪ ಮಾಡಬೇಕಾದ ವಿಚಾರಗಳನ್ನು ಅಲ್ಲಿ ತಿಳಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸಹಜ ಎಂದು ಸುರೇಶ್ ಸ್ಪಷ್ಟನೆ ನೀಡಿದರು.
ಸಿಎಂ ಕೊಟ್ಟ ಮಾತಿನಂತೆ ನಡೆಯಲಿ ಎಂದು ನಾನು ಹೇಳಿಯೇ ಇಲ್ಲ – ಡಿಕೆಸು ಫುಲ್ ಯೂಟರ್ನ್!
WhatsApp Group
Join Now