ಹೈಕಮಾಂಡ್ ನಿಂದ ಬಂತು ಸಂದೇಶ : ಡಿಕೆಶಿ ದೆಹಲಿ ಟೂರ್ ಕ್ಯಾನ್ಸಲ್, ಸಿಎಂ ಜತೆ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಹಾಜರ್

Spread the love

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆ ಶಿವಕುಮಾರ್  (DK Shivakumar) ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಂತಿದೆ. ನಾಳೆ(ನವೆಂಬರ್ 29) ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಸಭೆ ನಡೆಯಲಿದ್ದು, ಕರ್ನಾಟಕ ಕುರ್ಚಿ ಕಾಳಗಕ್ಕೆ ತೆರೆ ಎಳೆಯಲಿದ್ದಾರೆ ಎನ್ನಲಾಗಿತ್ತು.

WhatsApp Group Join Now

ಆದ್ರೆ, ದೆಹಲಿಯಲ್ಲಿ ಸಭೆ ನಡೆಯೋ ಮುನ್ನವೇ ರಾಜ್ಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಸಿಎಂ ಡಿಸಿಎಂ ನಾಳೆ (ನವೆಂಬರ್ 29) ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಿದ್ದಾರೆ. ಕೆಸಿ ವೇಣುಗೋಪಾಲ್ ಅವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​​ಗೆ ಕರೆ ಮಾಡಿ ಇಬ್ಬರು ಕುಳಿತು ಮಾತುಕತೆ ಮೂಲಕ ಗೊಂದಲ ಬಗೆರಿಸಿಕೊಳ್ಳಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇತ್ತ ಬೆಂಗಳೂರಿನ ನಾಳೆ (ನವೆಂಬರ್ 29) ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬ್ರೇಕ್​ ಫಾಸ್ಟ್ ಮೀಟಿಂಗ್ ಫಿಕ್ಸ್ ಆಗಿದ್ದು, ನಾಯಕರ ಸಭೆ ತೀವ್ರ ಕುತೂಹಲ ಮೂಡಿಸಿದೆ.

ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದ ಸಿಎಂ

WhatsApp Group Join Now

ಹೈಕಮಾಂಡ್​ ನಿಂದ ಬಂದ ಸಂದೇಶದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದೇನೆ. ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ. ಪಕ್ಷದ ವರಿಷ್ಠರು ನನಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ನೀವಿಬ್ಬರೂ ಭೇಟಿ ಮಾಡಿ ಎಂದು ತಿಳಿಸಿದ್ದಾರೆ. ಹಾಗಾಗಿ ಅವರನ್ನು ನಾನು ಉಪಹಾರಕ್ಕಾಗಿ ಕರೆದಿದ್ದು, ಅಲ್ಲಿ ಚರ್ಚೆ ಮಾಡುತ್ತೇವೆ. ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಹೇಳಿದ್ದನ್ನು ಒಪ್ಪುವುದಾಗಿ ಹೇಳಿದ್ದಾರೆ. ಹೈಕಮಾಂಡ್‌ನವರು ನವದೆಹಲಿಗೆ ಕರೆದರೆ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್

WhatsApp Group Join Now

ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್‌, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​​ಗೆ ದೂರವಾಣಿ ಕರೆ ಮಾಡಿದ್ದು, ಇಬ್ಬರೂ ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಪರಸ್ಪರ ಮಾತುಕತೆ ಮಾಡಿ ನಿರ್ಣಯವನ್ನು ತಮಗೆ ತಿಳಿಸಿ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಇಂದು ಸಂಜೆಯ ದೆಹಲಿ ಪ್ರವಾಸ ರದ್ದು ಮಾಡಿದ್ದು, ಹೈಕಮಾಂಡ್ ಸೂಚನೆಯಂತೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ಕರೆ ಮಾಡಿ ನಾಳೆ ಬೆಳಗ್ಗೆ ಬ್ರೇಕ್ ಫಾಸ್ಟ್​​ಗೆ ಬರುವುದಾಗಿ ತಿಳಿಸಿದ್ದಾರೆ. ಹೌದು.. ನಾಳೆ (ನವೆಂಬರ್ 29) ಬೆಳಗ್ಗೆ 9.30ಕ್ಕೆ ಸಿಎಂ ನಿವಾಸ ಕಾವೇರಿಗೆ ತೆರಳಿ ಸಿದ್ದರಾಮ್ಯಯನವರೊಂದಿಗೆ ಚರ್ಚೆ ಮಾಡಲಿದ್ದಾರೆ. ಹೀಗಾಗಿ ಉಭಯ ನಾಯಕರ ಸಭೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿ ಪ್ರವಾಸ ರದ್ದುಗೊಳಿಸಿದ ಡಿಕೆಶಿ

ಹೌದು…ಸಹೋದರ ಡಿಕೆ ಸುರೇಶ್ ಅವರು ದೆಹಲಿ ತಲುಪುತ್ತಿದ್ದಂತೆಯೇ ಇತ್ತ ಡಿಕೆ ಶಿವಕುಮಾರ್ ಸಹ ದೆಹಲಿಗೆ ತೆರಳಲು 7.40ರ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದ್ರೆ, ಹೈಕಮಾಂಡ್​, ಇಬ್ಬರು ಮಾತುಕತೆ ನಡೆಸಿ ಬಳಿಕ ದೆಹಲಿಗೆ ಬರುವಂತೆ ಸೂಚನೆ ನೀಡಿದೆ. ಹೀಗಾಗಿ ಇನ್ನೇನು ಫ್ಲೈಟ್ ಹತ್ತಬೇಕಿದ್ದ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ರದ್ದುಗೊಳಿಸಬೇಕಾಯ್ತು.

ಡಿಕೆ ಶಿವಕುಮಾರ್ ಅವರು ಇಂದು ದೆಹಲಿ ತೆರಳಲು ಸಜ್ಜಾಗಿದ್ದರು. ಇದಕ್ಕಾಗಿ ಎರಡು ಏರ್ ಟಿಕೆಟ್ ಸಹ ಬುಕ್ ಮಾಡಿದ್ದರು. ಮೊದಲು ಸಂಜೆ 7 ಗಂಟೆ ವಿಮಾನಕ್ಕೆ ಟಿಕೆಟ್ ಬುಕ್ ಆಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ 7 ಗಂಟೆ ಫ್ಲೈಟ್​​ ಟಿಕೆಟ್​ ಕ್ಯಾನ್ಸಲ್ ಆಗಿತ್ತು. ಬಳಿಕ ಸಂಜೆ 7.40ರ ಏರ್​​ ಇಂಡಿಯಾ ಫ್ಲೈಟ್​ ಟಿಕೆಟ್ ಬುಕ್​ ಮಾಡಿದ್ದರು. ಯಾವಾಗ ಹೈಕಮಾಂಡ್​​ನಿಂದ ಫೋನ್ ಬಂತೋ ಆಗ ಡಿಕೆಶಿ ದೆಹಲಿ ಪ್ರವಾಸ ರದ್ದು ಮಾಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಬೆಳಗ್ಗೆ ಬ್ರೇಕ್ ಫಾಸ್ಟ್​​ ಮಾಡಲು ತಮ್ಮ ನಿವಾಸಕ್ಕೆ ಬರುವುದಾಗಿ ಹೇಳಿದ್ದಾರೆ.

ಕುತೂಹಲ ಮೂಡಿಸಿದ ಸಭೆ

ಬೆಳ್ಳಂ ಬೆಳಿಗ್ಗೆ ತಿಂಡಿ ತಿನ್ನುತ್ತಾ ಸಿಎಂ ಸ್ಥಾನದ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸುವರು. ಈ ಸಭೆಯಲ್ಲಿ ಏನಾಗುತ್ತೆ ಎನ್ನುವುದೇ ಕೌತುಕ. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನ ಬಿಟ್ಟುಕೊಡುವಂತೆ ಡಿಕೆ ಶಿವಕುಮಾರ್ ಮನವೊಲಿಸುತ್ತಾರಾ ಇಲ್ಲವೇ ತಮಗೆ ಬಾಕಿ ಉಳಿದ ಎರಡೂವರೆ ವರ್ಷ ಪೂರ್ಣಗೊಳಿಸಲು ಬಿಡುವಂತೆ ಡಿಕೆಶಿಯನ್ನೇ ಸಿದ್ದರಾಮಯ್ಯ ಮನವೊಲಿಸುತ್ತಾರಾ ಎಂಬ ಕುತೂಹಲ ಮೂಡಿಸಿದೆ.

ಸಂಧಾನಕ್ಕೆ ಮೀನಮೇಷ ಎಣಿಸ್ತಿದ್ಯಾ ಹೈಕಮಾಂಡ್?

ರಾಜ್ಯ ಕಾಂಗ್ರೆಸ್‌ನಲ್ಲಿ ಪಟ್ಟದಾಟದ ಗುದ್ದಾಟ ಕಾವೇರಿದೆ. ಸಿಎಂ ಡಿಸಿಎಂ ಮಧ್ಯೆ ಪೋಸ್ಟ್ ವಾರ್ ಬೀದಿಗೆ ಬಂದಿದೆ. ಹೀಗಿದ್ದರೂ ಹೈಕಮಾಂಡ್ ಇಬ್ಬರ ನಡುವೆ ಸಂಧಾನ ಮಾಡದೇ ಮೀನಮೇಷ ಎಣಿಸುತ್ತಿರುವುದ್ಯಾಕೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ವಾರದಲ್ಲಿ ಎರಡು ಬಾರಿ ರಾಜ್ಯಕ್ಕೆ ಬಂದು ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಿನ್ನೆ ಸಂಜೆ ಕೂಡಾ ಸಭೆ ನಡೆದಿದ್ದು, ಅಲ್ಲಿ ಪಟ್ಟದ ವಿಚಾರವಾಗಲಿ, ರಾಜ್ಯದ ವಿದ್ಯಾಮಾನದ ಬಗ್ಗೆಯಾಗಲಿ ಚರ್ಚೆಯಾಗಿಲ್ಲ. ಇದೀಗ ಸೋನಿಯಾ ಗಾಂಧಿ ವಿದೇಶದಿಂದ ಇವತ್ತು ರಾತ್ರಿ ವಾಪಸ್ ಬರ್ತಿದ್ದಾರೆ.

ಸೋನಿಯಾ ಗಾಂಧಿ ಅಭಿಪ್ರಾಯ ಪಡೆದು ಭಾನುವಾರ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಕೆ.ಸಿ ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ರಾಜ್ಯ ನಾಯಕರಿಗೆ ಬರುವಂತೆ ವರಿಷ್ಠರು ಸೂಚನೆ ನೀಡುವ ಸಾಧ್ಯತೆ ಇದೆ. ಅಲ್ಲಿಗೆ ಈ ಪಟ್ಟದಾಟದ ಮೀಟಿಂಗ್ ಮುಂದಿನ ವಾರಕ್ಕೆ ಹೋದಂತೆ ಕಾಣ್ತಿದೆ.

ಒಟ್ಟಿನಲ್ಲಿ ಸಿಎಂ ಸ್ಥಾನದ ಕಿತ್ತಾಟವನ್ನು ಸಿಎಂ, ಡಿಸಿಎಂ ಇಬ್ಬರೇ ಮಾತನಾಡಿ ಬಗೆಹರಿಸಿಕೊಳ್ಳಲು ಹೈಕಮ್ಯಾಂಡ್ ವೇದಿಕೆ ಸೃಷ್ಟಿಸಿದೆ. ಆದ್ರೆ, ಬ್ರೇಕ್ ಫಾಸ್ಟ್ ಮೀಟಿಂಗ್​​ನಲ್ಲಿ ಎಲ್ಲಾ ಗೊಂದಲ ಬಗೆಹರಿಸಿಕೊಳ್ಳುತ್ತಾರೋ ಅಥವಾ ಮತ್ತೆ ದೆಹಲಿಯತ್ತ ಮುಖ ಮಾಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.


Spread the love

Leave a Reply