ಬೆಂಗಳೂರಿನ ಗುಂಡಿಗಳು (Bangalore Roads Crisis) ಮತ್ತೆ ಚರ್ಚೆಗೆ ಬಂದಿವೆ. ಈ ಹಿಂದೆ ಬೆಂಗಳೂರಿನ ಹೊಂಡಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಗುಂಡಿಗಳು ಮತ್ತೆ ಚರ್ಚೆಗೆ ಬರಲು ಈ ಘಟನೆ ಕಾರಣ.
ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನ ಗುಂಡಿಯಿಂದ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದಲ್ಲೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಈ ಸ್ಥಿತಿಗೆ ಕಳಪೆ ಮೂಲಸೌಕರ್ಯ ಕಾರಣ ಎಂದು ಆರೋಪಿಸಿದ್ದಾರೆ.ಈ ವಿಡಿಯೋವನ್ನು ಅವರ ಸ್ನೇಹಿತೆ ಶ್ರೀ ಎಂಬವವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ರಸ್ತೆ ಸುರಕ್ಷತೆ, ಹೊಣೆಗಾರಿಕೆ ಮತ್ತು ಪ್ರಯಾಣಿಕರು ಎದುರಿಸುತ್ತಿರುವ ದೈನಂದಿನ ಸಮಸ್ಯೆ ಬಗ್ಗೆ ಈ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಳನ್ನು ಸರಿಪಡಿಸಲು ನಿಮಗೆ ಸಾಧ್ಯವಾಗದಿದ್ದರೆ, ದಯವಿಟ್ಟು ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳನ್ನು ನಿಷೇಧಿಸಿ ಎಂದು ಈ ಪೋಸ್ಟ್ನಲ್ಲಿ ಶೀರ್ಷಿಕೆಯನ್ನು ಕೂಡ ನೀಡಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿ ಗಾಯಗೊಂಡ ಸೌರಭ್ ಪಾಂಡೆ ಹೀಗೆ ಹೇಳಿಕೊಂಡಿದ್ದಾರೆ. ‘ಕಳಪೆ ರಸ್ತೆ, ಗುರುತು ಹಾಕದ ಸ್ಪೀಡ್ ಬ್ರೇಕರ್‌ನಿಂದಾಗಿ ನನ್ನ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡಿತ್ತು. ಇದರಿಂದ ನನ್ನ ಕಾಲು, ಕೈ ಮತ್ತು ತೋಳಿಗೆ ತೀವ್ರವಾದ ಗಾಯಗಳಾಗಿವೆ. ದಯವಿಟ್ಟು ನಗರದ ರಸ್ತೆಗಳ ಬಗ್ಗೆ ಏನಾದರೂ ಮಾಡಿ’ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ವಿಡಿಯೋ ಇಲ್ಲಿದೆ ನೋಡಿ:
ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಸೌರಭ್ ಪಾಂಡೆ ಅವರ ಸ್ನೇಹಿತೆ ಶ್ರೀ ಅವರು ಹೀಗೆ ಹೇಳಿದ್ದಾರೆ. ‘ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ನಿಂದ ಬೈಕ್ನ ನಿಯಂತ್ರಣ ಕಳೆದುಕೊಂಡ ನನ್ನ ಸ್ನೇಹಿತನಿಗೆ ಗಾಯಗಳಾಗಿವೆ. ಇದೀಗ ಅವನಿಗೆ ವೈದ್ಯರು ತಕ್ಷಣದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅವನು ಈ ತಿಂಗಳಿನ ಕೊನೆಯಲ್ಲಿ ಊರಿಗೆ ಹೋಗಬೇಕಿತ್ತು. ಆದರೆ ಇದೀಗ ಅವನಿಗೆ ನಡಿಯಲು ಸಾಧ್ಯವಿಲ್ಲ. ಈ ಶಸ್ತ್ರಚಿಕಿತ್ಸೆ 6 ಲಕ್ಷ ರೂ. ಖರ್ಚಾಗಿದೆ. ಇದಕ್ಕೆ ನಿಜವಾಗಿ ಯಾರು ಹೊಣೆ, ಹೆಲ್ಮೆಟ್ ಹಾಕದಿದ್ದರೆ ದಂಡ ಹಾಕುತ್ತಾರೆ, ಆದರೆ ಸ್ಪೀಡ್ ಬ್ರೇಕರ್ನ್ನು ಯಾಕೆ ಸರಿಯಾಗಿ ಮಾಡಿಲ್ಲ’ ಎಂದು ಪ್ರಶ್ನಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು :
ಬೆಂಗಳೂರಿನಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ದೈನಂದಿನ ಸಮಸ್ಯೆ ಇದು ಎಂದು ಹಲವು ನೆಟ್ಟಿಗರು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ನೀವು ಬೆಂಗಳೂರಿನಲ್ಲಿ ಸರಿಯಾಗಿ ವಾಹನ ಚಲಾಯಿಸಲು ಕಲಿತರೆ, ಜಗತ್ತಿನ ಯಾವ ಮೂಲೆಯಲ್ಲೂ ಬೇಕಾದರೂ ವಾಹನ ಓಡಿಸಬಹುದು ಎಂದು ಒಬ್ಬ ನೆಟ್ಟಿಗ ಹೇಳಿದ್ದಾರೆ. ವಾಹನ ಚಲಾಯಿಸುವಾಗ ಕಣ್ಣು ತೆರೆದು ಓಡಿಸಿ, ಏಕೆಂದರೆ ಇದು ಬೆಂಗಳೂರಿನ ರಸ್ತೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಯಿಂದ ಕೈ-ಕಾಲು ಮುರಿದುಕೊಂಡ ಬೈಕ್ ಸವಾರ, 6 ಲಕ್ಷ ರೂ. ಆಸ್ಪತ್ರೆ ಬಿಲ್
WhatsApp Group
Join Now