15 ದಿನದ ಹಸುಗೂಸು, 5 ವರ್ಷದ ಮಗುವಿನೊಂದಿಗೆ ರಂಜಿತಾ ನಾಪತ್ತೆ : ಕಣ್ಣೀರಿಡುತ್ತಿರುವ ಕುಟುಂಬ.!

Spread the love

ಬೆಂಗಳೂರಿನ ಹೆಚ್.ಎ.ಎಲ್ ಬಳಿ, 5 ವರ್ಷದ ಮಗ ಮತ್ತು 15 ದಿನದ ಹಸುಗೂಸಿನೊಂದಿಗೆ ರಂಜಿತಾ ಎಂಬ ತಾಯಿ ಕಾಣೆಯಾಗಿದ್ದಾರೆ. ಮಗನನ್ನು ಶಾಲೆಗೆ ಬಿಡಲು ಹೋದವರು ಮನೆಗೆ ಹಿಂತಿರುಗಿಲ್ಲ, ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಆ ಮಗು ಹುಟ್ಟಿ ಇನ್ನು 15 ದಿನ ಕಳೆದಿತ್ತು. ತಾಯಿ ಹಸುಗುಸು, 5 ವರ್ಷದ ಮಗನ ಜೊತೆ ಕಾಣೆಯಾಗಿದ್ದಾಳೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.. ಎಷ್ಟೇ ಹುಡುಕಿದ್ರೂ ತಾಯಿ ಮಗು ಮಾತ್ರ ಇನ್ನು ಪತ್ತೆಯಾಗಿಲ್ಲ. ನವೆಂಬರ್ 24ರ ಬೆಳಗ್ಗೆ 9.30 ಕ್ಕೆ ಮಗುವಿನ ಸ್ಕೂಲ್ ಗೆ ಬಿಟ್ಟು ಬರುವುದಾಗಿ ಹೇಳಿದ್ದ ತಾಯಿ ರಂಜಿತಾ ಹಸುಗುಸಿನ ಜೊತೆ ಕಾಣೆಯಾಗಿದ್ದಾರೆ‌‌. ಹೆಚ್ ಎಎಲ್ ಪೊಲೀಸರು ತಾಯಿ ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸ್ತಿದ್ದಾರೆ.

ನಗರದ ಹೆಚ್.ಎ.ಎಲ್ ಬಳಿಯ ಅಣ್ಣಸಂದ್ರದಲ್ಲಿ ತಾಯಿ ಮಣ್ಣಿಯಮ್ಮ ಮನೆಯಲ್ಲಿ ಮಗಳು ರಂಜಿತಾ ಡೆಲಿವರಿಗೆ ಅಂತ ಬಂದಿದ್ರು. ಈ ವೇಳೆ 9 ತಾರೀಖು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯಿಂದ ತಾಯಿ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಐದು ವರ್ಷದ‌ ಮಗ ಮತ್ತು 15 ದಿನದ ಹಸುಗೂಸು ಜೊತೆ ಸಾಪತ್ತೆಯಾಗಿದ್ದಾರೆ.‌ ಗಂಡ ಮೋಹನ್ ದೂರಿನ ಅನ್ವಯ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ.

ಸೋಮವಾರ ಬೆಳಗ್ಗೆ 9:30 ಕ್ಕೆ ಮಗನನ್ನು ಶಾಲೆಗೆ ಬಿಡಲು ಹೋಗಿದ್ದ‌ ರಂಜಿತಾ ನಂತರ ಸಂಜೆಯಾದರು‌ ಸಹ ಮನೆಗೆ ವಾಪಸ್ ಬಂದಿರಲಿಲ್ಲ. ತಾಯಿ ಮಣಿಯಮ್ಮ ಸ್ಕೂಲ್ ಬಳಿ ಮತ್ತು ಗಂಡನ ಮನೆ ಬಳಿ ಹೋಗಿ ನೋಡಿದ್ದಾರೆ. ಆದರೇ ಅಲ್ಲಿಯು ಸಹ ರಂಜಿತಾ ಇರಲಿಲ್ಲ. ಗಂಡನ ಮನೆಗೆ ಹೋಗ್ತೀನಿ ಎಂದು ಕೆಲ ದಿನಗಳಿಂದ ಹೇಳುತ್ತಿದ್ದ ರಂಜಿತಾ ಇದೀಗ ಎಲ್ಲಿ ಹುಡುಕುತ್ತಿದ್ದರು ಸಹ ರಂಜಿತಾ ಸುಳಿವು ಸಿಗುತ್ತಿಲ್ಲ. ಎರಡು ಪ್ರತ್ಯೇಕ ತಂಡ ರಚಿಸಿಕೊಂಡು ತಾಯಿ ಮಕ್ಕಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಾಣೆಯಾದ‌ ಬೆಳಗ್ಗೆ ಗಂಡನ ‌ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದ ರಂಜಿತಾ ಬಳಿಕ ನಾಪತ್ತೆಯಾಗಿದ್ರು. ಕಮಿಷನರ್ ಭೇಟಿಗೆ ಬಂದು ಕಚೇರಿಯಲ್ಲಿ ರಂಜಿತಾ ತಾಯಿ ಮಣ್ಣಿಯಮ್ಮ ಕಣ್ಣೀರು ಹಾಕುತ್ತಿದ್ದಾರೆ. ಕೌಟುಂಬಿಕ‌ ಕಲಹ ಹಿನ್ನಲೆ ಮನೆಯಿಂದ ಹೊರ ಹೋಗಿರುವ ಬಗ್ಗೆ ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಪೊಲೀಸರ ಜೊತೆಗೆ ರಂಜಿತಾ ಗಂಡ ಮೋಹನ್ ಸಹ ಹೆಂಡ್ತಿ ಮಕ್ಕಳ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ. ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ತನಿಖೆ ಮುಂದುವರೆದಿದೆ. ಇಬ್ಬರು ಮಕ್ಕಳು ತಾಯಿ ರಂಜಿತಾಗಾಗಿ ತೀವ್ರ ಶೋಧ ಕಾರ್ಯ ಜಾರಿಯಲಿದೆ.

WhatsApp Group Join Now

Spread the love

Leave a Reply