ನಾನು, ಸಿಎಂ ಒಟ್ಟಿಗೆ ರಾಜಕೀಯ ಕೊನೆಗೊಳಿಸುತ್ತೇವೆ ಎಂದ ಸಚಿವ ಡಾ. ಎಚ್‌ ಸಿ ಮಹದೇವಪ್ಪ

Spread the love

ಸಾರ್ವಜನಿಕ ಜೀವನಕ್ಕೆ 1985ರಲ್ಲಿ ನಾನು ಬಂದಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 1983ನಲ್ಲಿ ಶಾಸಕರಾಗಿದ್ದರು. ನಂತರ ನಾನು ಹಾಗೂ ಅವರು ಇಬ್ಬರೂ ಜೊತೆಗೆ ಬಂದು, ಜೊತೆಗೆ ಇದ್ದೇವೆ. ಜೊತೆಗೇ ರಾಜಕೀಯ ಕೊನೇ ಮಾಡುತ್ತೇವೆ ಎಂದು ಸಚಿವ ಡಾ. ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮತ್ತೆ ಮುಖ್ಯಮಂತ್ರಿ’ ಕೃತಿ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮತ್ತೆ ಮುಖ್ಯಮಂತ್ರಿ ಅಂತ ನೋಡಿದಾಗ, ಮುಖ್ಯಮಂತ್ರಿ ಆಗಬೇಕಾ, ಅದು ಬೇಕಾ ಅನ್ನಿಸುತ್ತಿದೆ. ಏಕೆಂದರೆ, ಸಾರ್ವಜನಿಕ ಹಿತವನ್ನೇ ಕೇಂದ್ರೀಕೃತವಾಗಿರುವಂತಹ ಬದುಕು, ವ್ಯಕ್ತಿಗತವಾದ ಆಸೆಗಳನ್ನು ಹೊಂದಬೇಕು. ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ಮಾಡಬಾರದ ಕೆಲಸಗಳನ್ನೆಲ್ಲ ಮಾಡಿ ಭಾಷಣಕ್ಕೆ ನಿಂತಾಗ ಪ್ರಗತಿಪರವಾದ ಆಲೋಚನೆಗಳೇ ಬರುತ್ತವೆ. 100 ಕೋಟಿ ರೂ. ಚುನಾವಣೆಯಲ್ಲಿ ಖರ್ಚು ಮಾಡಿ ಭಾಷಣಕ್ಕೆ ನಿಂತಾಗ ಒನ್‌ ವೋಟ್‌, ಒನ್‌ ವ್ಯಾಲ್ಯೂ ಅಂತ ಹೇಳುತ್ತೇವೆ. ಚುನಾವಣೆಗೆ ಹೋದಾಗ ನಮ್ಮ ನಡವಳಿಕೆಗಳೇ ಬೇರೆ ಇರುತ್ತದೆ ಎಂದು ವಿವರಿಸಿದರು.

ಶಾಸಕರ ಸಹಿ ಸಂಗ್ರಹದ ಮಾಹಿತಿ ಇಲ್ಲ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಮಾತನಾಡಿದ್ದೇವೆ, ಬೇರೆ ಏನು ಚರ್ಚೆಯಾಗಿಲ್ಲ. ಸಿಎಂ ರೇಸ್ ಏನೂ ನಡೆಯುತ್ತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಮತ್ತು ಬಲವರ್ಧನೆ ಬಗ್ಗೆ ಮಾತ್ರ ಚರ್ಚೆ ಮಾಡಲಾಗಿದ್ದು, ಸಂಪುಟ ಪುನಾರಚನೆ ಬಗ್ಗೆಯೂ ಚರ್ಚೆ ನಡೆಸಿಲ್ಲ. ಶಾಸಕರ ಸಹಿ ಸಂಗ್ರಹದ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಹಿ ಹಾಕಲು ನನ್ನನ್ನು ಯಾರೂ ಕರೆದಿಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ. ಇನ್ನೂ ಎರಡೂವರೆ ವರ್ಷ ಕಾಂಗ್ರೆಸ್ ಸಿಎಂ ಇರುತ್ತಾರೆ ಎಂದರು.

WhatsApp Group Join Now

Spread the love

Leave a Reply