ಕಲಬೆರಕೆ ತುಪ್ಪ ಬಳಸಿ ಅಂದಾಜು 20 ಕೋಟಿ ಲಡ್ಡುಗಳ ವಿತರಣೆ, ತನಿಖೆಯಲ್ಲಿ ಆಘಾತಕಾರಿ ಅಂಶ ಬಯಲು

Spread the love

ಆಂಧ್ರದ ತಿರುಪತಿ ದೇವಾಲಯಕ್ಕೆ (Tirupati Tirumala) ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಅಲ್ಲಿನ ಲಡ್ಡು ಬಹಳ ಫೇಮಸ್‌. ಆದರೆ ಇದೀಗ ಕಲಬೆರಕೆ ತುಪ್ಪ ಬಳಸಿ ಅಂದಾಜು 20 ಕೋಟಿ ಲಡ್ಡುಗಳನ್ನು ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

48.76 ಕೋಟಿ ಲಡ್ಡುಗಳಲ್ಲಿ ಇದೂ ಒಂದು
ತಿರುಮಲ ತಿರುಪತಿ ದೇವಸ್ಥಾನಂ (TTD) ಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ನೀಡಿರುವ ಮಾಹಿತಿ ಪ್ರಕಾರ, 2019-2024ರ ಅವಧಿಯಲ್ಲಿ ವಿತರಿಸಲಾದ ಒಟ್ಟು 48.76 ಕೋಟಿ ಲಡ್ಡುಗಳಲ್ಲಿ ಇದೂ ಒಂದು ಎಂದಿದ್ದಾರೆ. ಇದರ ಜೊತೆಗೆ ದೇವಾಲಯದಲ್ಲಿ ದೈನಂದಿನ ಜನದಟ್ಟಣೆ ಎಷ್ಟಿತ್ತು, ಲಡ್ಡು ಖರೀದಿ ವಿವರಗಳು ಮತ್ತು ಉತ್ಪಾದನೆ ಮತ್ತು ಮಾರಾಟದ ಮಾಹಿತಿಗಳ ಆಧಾರದ ಮೇಲೆ ಎಷ್ಟು ಕೋಟಿ ಲಡ್ಡು ವಿತರಣೆ ಆಗಿದೆ ಎಂದು ಅಂದಾಜು ಮಾಡಲಾಗಿದೆ.

ಹಿಂದಿನ ವರ್ಷ ಬಹಿರಂಗವಾಗಿದ್ದ ಪ್ರಕರಣ
ಹಿಂದಿನ ವರ್ಷ ತಿರುಪತಿ ಲಡ್ಡು ಮಾಡಲು ಕಲಬೆರಕೆ ತುಪ್ಪ ಬಳಕೆ ಮಾಡಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಈ ವಿಚಾರ ದೊಡ್ಡ ಸುದ್ದಿ ಆಗಿತ್ತು. ಇದರ ನಂತರ ಈ ಪ್ರಕರಣವನ್ನು ಈಗ ಕೇಂದ್ರ ತನಿಖಾ ದಳದ ನೇತೃತ್ವದ ಎಸ್‌ಐಟಿ ತನಿಖೆ ಕೂಡ ನಡೆಸುತ್ತಿದೆ. ಈ ತನಿಖೆಯಲ್ಲಿ ಸುಮಾರು 250 ಕೋಟಿ ರೂ. ಮೌಲ್ಯದ 68 ಲಕ್ಷ ಕೆಜಿ ಕಲಬೆರಕೆ ತುಪ್ಪವನ್ನು ಪಾಮ್ ಎಣ್ಣೆ, ಪಾಮ್ ಕರ್ನಲ್ ಎಣ್ಣೆ ಮತ್ತು ಇತರ ಪದಾರ್ಥಗಳನ್ನ ಬೆರೆಸಿ ತಯಾರು ಮಾಡಲಾಗಿತ್ತು ಎನ್ನುವ ಅಂಶ ಬಹಿರಂಗವಾಗಿತ್ತು. ಈ ತುಪ್ಪವನ್ನ ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಶೆಲ್ ಕಂಪನಿಗಳು ಪೂರೈಸಿದ್ದವು.

ಇನ್ನು ಆ ಐದು ವರ್ಷಗಳಲ್ಲಿ ಸುಮಾರು 11 ಕೋಟಿ ಭಕ್ತರು ತಿರುಪತಿಗೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ಪ್ರಸಾದವನ್ನು ಪ್ರತ್ಯೇಕವಾಗಿ ಲೇಬಲ್ ಸಹ ಮಾಡಿರಲಿಲ್ಲ. ಹಾಗಾಗಿ ಯಾವ ಭಕ್ತರಿಗೆ ಕಲಬೆರಕೆ ಲಡ್ಡುಗಳು ಸಿಕ್ಕಿದೆ ಎನ್ನುವುದನ್ನ ಪತ್ತೆ ಮಾಡುವುದು ಅಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಿರುಪತಿ ಲಡ್ಡು ತಯಾರಿಗೆ ಪ್ರಾಣಿಜನ್ಯ ಕೊಬ್ಬು – ಟಿಟಿಡಿ ಅಧಿಕಾರಿಗಳಿಗೆ ಎಸ್‌ಐಟಿ ನೋಟಿಸ್?

ತಿರುಮಲ ತಿರುಪತಿ ದೇವಸ್ಥಾನಂ ಲಡ್ಡು ತುಪ್ಪ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ SIT ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಸೇವೆ ಸಲ್ಲಿಸಿದ ಟಿಟಿಡಿ ಮಾಜಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಎರಡು ತಿಂಗಳ ಹಿಂದೆ ನಿರ್ಧಾರ ಮಾಡಿತ್ತು.

ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ, ಧರ್ಮ ರೆಡ್ಡಿ, ಇತರ ಮಾಜಿ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಮಾಜಿ ಟಿಟಿಡಿ ಇಒ ಅನಿಲ್ ಕುಮಾರ್ ಸಿಂಘಾಲ್ ಅವರಿಗೆ ಮೊದಲ ಸುತ್ತಿನ ನೋಟಿಸ್ ನೀಡುವ ಸಾಧ್ಯತೆಯಿದೆ. ತನಿಖೆಗೆ ಸಹಕರಿಸಲು ಅಧಿಕಾರಿಗಳನ್ನು ಕರೆಸಿ ವಿಚಾರಣೆ ಮಾಡಿತ್ತು

ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪವನ್ನು ಪೂರೈಸಲಾಗಿದೆ ಎಂಬ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆ ಬಹುತೇಕ ಪೂರ್ಣಗೊಂಡಿದ್ದು,ಹಗರಣದ ಕೇಂದ್ರಬಿಂದುವಾಗಿರುವ ಮೂರು ಡೈರಿಗಳ ನಿರ್ದೇಶಕರಿಗೆ ಜಾಮೀನು ನೀಡುವುದನ್ನು ಎಸ್‌ಐಟಿ ಬಲವಾಗಿ ವಿರೋಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.

WhatsApp Group Join Now

Spread the love

Leave a Reply