ಡಿಕೆ ಬ್ರದರ್ಸ್ ತಲೆ ಮೇಲೆ ಕೈಯಿಟ್ಟು ಆಣೆ ಮಾಡಿದ್ರು ಸಿದ್ದರಾಮಯ್ಯ ಎಂದ ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ಹೊಸ ಬಾಂಬ್

Spread the love

ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಚರ್ಚೆ ಜೋರಾಗುತ್ತಿರುವಾಗಲೇ ಬಿಜೆಪಿ ಎಂಎಲ್ ಸಿ ಎಚ್ ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ. ಡಿಕೆ ಬ್ರದರ್ಸ್ ತಲೆ ಮೇಲೆ ಕೈಯಿಟ್ಟು ಸಿದ್ದರಾಮಯ್ಯ ಆಣೆ ಮಾಡಿದ್ರು ಎಂದಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಕುರ್ಚಿ ತಿಕ್ಕಾಟದ ವಿಚಾರದ ಬಗ್ಗೆ ಎಚ್ ವಿಶ್ವನಾಥ್ ಹೊಸ ವಿಚಾರವನ್ನು ಹೊರಹಾಕಿದ್ದಾರೆ.ದೆಹಲಿಯಲ್ಲಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನಡೆದುಕೊಳ್ಳಬೇಕು. ವಚನ ಭ್ರಷ್ಟರಾಗಬಾರದು ಎಂದು ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.

ದೆಹಲಿಯಲ್ಲಿ ಹೈಕಮಾಂಡ್ ಉಪಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ತಲೆಮೇಲೆ ಕೈಯಿಟ್ಟು ಸಿದ್ದರಾಮಯ್ಯನವರು ಅಧಿಕಾರ ಹಂಚಿಕೆ ಕುರಿತು ಆಣೆ ಮಾಡಿದ್ರು. ಈ ಸಂದರ್ಭದಲ್ಲಿ ಕೆಲವರು ಮಾತ್ರ ಉಪಸ್ಥಿತರಿದ್ದರು ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಡಿಕೆ ಪಾತ್ರ ದೊಡ್ಡದು. ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಯಡಿಯೂರಪ್ಪನಿಗೆ ವಚನ ನೀಡಿ ಮುರಿದ ಕುಮಾರಸ್ವಾಮಿ ಕತೆ ಏನಾಯ್ತು? ವಚನ ಭ್ರಷ್ಟರಾದವರು ಯಾರಿಗೂ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂದಿದ್ದಾರೆ. ಅವರ ಈ ಹೇಳಿಕೆ ಕುರ್ಚಿ ಕದನಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದೆ.

WhatsApp Group Join Now

Spread the love

Leave a Reply