ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ ಈಗ ದೇಶದ ವಿದ್ಯಾರ್ಥಿಗಳಿಗಾಗಿ ಹೊಸ ಸೇವೆಯನ್ನ ಆರಂಭಿಸಿದೆ. ದೇಶದ ವಿದ್ಯಾರ್ಥಿಗಳು ಬಿಎಸ್ಎನ್ಎಲ್ ನ ಈ ಸೇವೆಯ ಅಡಿಯಲ್ಲಿ 100 GB ಡೇಟಾ ಮತ್ತು ಅನಿಮಿತ ಕರೆಯ ಸೇವೆಯನ್ನ ಬಳಸಿಕೊಳ್ಳಬಹುದು.
ವಿದ್ಯಾರ್ಥಿಗಳಿಗೆ ಸಹಾಯಕವಾಗಲಿ ಅನ್ನುವ ಉದ್ದೇಶದಿಂದ ಬಿಎಸ್ಎನ್ಎಲ್ ಈಗ ದೇಶಾದ್ಯಂತ ಈ ಸೇವೆಯನ್ನ ಆರಂಭಿಸಿದೆ. ಬಿಎಸ್ಎನ್ಎಲ್ ಈಗ ವಿದ್ಯಾರ್ಥಿಗಳಿಗಾಗಿ 251 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್ ಅನ್ನ ದೇಶಾದ್ಯಂತ ಜಾರಿಗೆ ತಂದಿದೆ. ಈ ರಿಚಾರ್ಜ್ ಪ್ಲಾನ್ ಡಿಸೆಂಬರ್ 13ರವರೆಗೆ ದೇಶಾದ್ಯಂತ ಜಾರಿಯಲ್ಲಿರುತ್ತದೆ. ವಿದ್ಯಾರ್ಥಿಗಳು 251 ರೂಪಾಯಿ ರಿಚಾರ್ಜ್ ಮಾಡಿದರೆ 100 GB ಡೇಟಾ ಅನಿಯಮಿತ ಕರೆ ಮತ್ತು 100 ಎಸ್ಎಂಎಸ್ ಸೇವೆಯನ್ನ ಬಳಸಿಕೊಳ್ಳಬಹುದು.
ಈ ರಿಚಾರ್ಜ್ ಪ್ಲಾನ್ 28 ದಿನಗಳವರೆಗೆ ಮಾನ್ಯತೆಯನ್ನ ಹೊಂದಿರುತ್ತೆ. ಡಿಸೆಂಬರ್ 13 ಈ ಯೋಜನೆಯ ಕೊನೆಯ ದಿನಾಂಕವಾಗಿರುತ್ತದೆ. ಡಿಸೆಂಬರ್ 13ರ ಒಳಗೆ 251 ರೂಪಾಯಿ ರಿಚಾರ್ಜ್ ಮಾಡಿದರೆ ಈ ಸೇವೆಯ ಲಾಭವನ್ನ ಪಡೆದುಕೊಳ್ಳಬಹುದು.
WhatsApp Group
Join Now