ಟೆಲಿಕಾಂ ವಲಯದಲ್ಲಿ (Telecom) ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಗ್ರಾಹಕರನ್ನು ಗಿಟ್ಟಿಸಿಕೊಂಡವರಲ್ಲಿ ಜಿಯೋ (Jio) ಕೂಡಾ ಒಂದು. ಆಫರ್ಸ್ ಮೇಲೆ ಆಫರ್ಸ್ ನೀಡುವ ಮೂಲಕ ಹಲವಾರು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಜಿಯೋ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮೇಲೆ ಜನರ ನೆಚ್ಚಿನ ರೀಚಾರ್ಜ್ ಯೋಜನೆಗೆ ಬ್ರೇಕ್ ಹಾಕಲಿದೆ.
ರಿಲಯನ್ಸ್ ಜಿಯೋ ತನ್ನ ಎಂಟ್ರಿ-ಲೆವೆಲ್ ಪ್ಲಾನ್ (1 GB/ದಿನ, ₹249, 28 ದಿನಗಳು) ನಿಲ್ಲಿಸುವುದಾಗಿ ಘೋಷಿಸಿದೆ. ಜಿಯೋ ಈ ನಿರ್ಧಾರದ ಬೆನ್ನಲ್ಲೇ, ಏರ್‌ಟೆಲ್, ವೊಡಫೋನ್ ಐಡಿಯಾ ಇದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾ? ಇಲ್ವಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಜಿಯೋನ ಹೊಸ ಬದಲಾವಣೆಯಿಂದಾಗಿ ಈಗಾಗಲೇ 28 ದಿನಗಳ 1 ಜಿಬಿ ರೀಚಾರ್ಜ್ ಪ್ಲಾನ್ ಬಳಸುತ್ತಿದ್ದ ಗ್ರಾಹಕರಿಗೆ ನಿರಾಸೆ ಉಂಟಾಗಿದೆ. ಅಲ್ಲದೇ ಇನ್ಮೇಲೆ ₹299 ಪ್ಲಾನ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಈ ಹೊಸ ಪ್ಲಾನ್ ದಿನಕ್ಕೆ 1.5 GB ಡೇಟಾ ಮತ್ತು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಜಿಯೋ ವೆಬ್‌ಸೈಟ್‌ನಲ್ಲಿ ಈಗ 1.5 GB/ದಿನ ಅಥವಾ ಹೆಚ್ಚಿನ ಡೇಟಾ ಪ್ಯಾಕ್‌ಗಳು ಮಾತ್ರ ಲಭ್ಯವಿದ್ದು, ಅದಕ್ಕಿಂತ ಕಡಿಮೆ ಡೇಟಾ ಪ್ಲಾನ್‌ಗಳ ಆಯ್ಕೆಯನ್ನು ನೀಡಲಾಗಿಲ್ಲ.
ಗ್ರಾಹಕರಿಗೆ ಹೊರೆ!
ಜಿಯೋನ ಈ ನಿರ್ಧಾರದಿಂದಾಗಿ ಗ್ರಾಹಕರು ಅನಿವಾರ್ಯವಾಗಿ ಹೆಚ್ಚು ಬೆಲೆಯ ಪ್ಯಾಕ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಜಿಯೋನ 2GB/ದಿನದ 28 ದಿನಗಳ ಪ್ಯಾಕ್ ₹349ಕ್ಕೆ ಲಭ್ಯವಿದೆ.
ಗ್ರಾಹಕರಲ್ಲಿ ಮನೆ ಮಾಡಿದ ಆತಂಕ:
ಹಿಂದೊಮ್ಮೆ ಒಂದು ಟೆಲಿಕಾಂ ಕಂಪನಿ ರೀಚಾರ್ಜ್ ಪ್ಲಾನ್‌ನಲ್ಲಿ ಬದಲಾವಣೆ ತಂದಿತ್ತು. ಇದೇ ವೇಲೆ ಪ್ರತಿಸ್ಪರ್ಧಿ ಕಂಪನಿಗಳು ಕೂಡ ತಮ್ಮ ರೀಚಾರ್ಜ್ ಪ್ಲಾನ್‌ನಲ್ಲಿ ಹೊಸ ಬದಲಾವಣೆಗಳನ್ನು ಜಾರಿಗೆ ತಂದಿತ್ತು. ಜಿಯೋನ ಹೊಸ ಪ್ರೀಪೇಯ್ಡ್ ಪ್ರವೇಶ ಬೆಲೆಗೆ ಹೋಲಿಸಿದರೆ, ವೊಡಾಫೋನ್ ಐಡಿಯಾದ ಎಂಟ್ರಿ-ಲೆವೆಲ್ 28 ದಿನಗಳ ಪ್ಯಾಕ್ (1 GB/ದಿನ) ಪ್ರಸ್ತುತ ₹299ಕ್ಕೆ ಲಭ್ಯವಿದೆ. ಅಂದರೆ ಜಿಯೋ ಕಡಿಮೆ ಬೆಲೆಗೆ, ಹೆಚ್ಚು ಡೇಟಾ ನೀಡುತ್ತಿದೆ.
ಇನ್ನು ಜಿಯೋಗೆ ಹೋಲಿಸಿದ್ರೆ ವಿಐನ 1.5 GB/ದಿನದ ಪ್ಲಾನ್ ₹349ಕ್ಕೆ ಮತ್ತು 2GB/ದಿನದ 28 ದಿನಗಳ ಪ್ಲಾನ್ ₹408ಕ್ಕೆ ಸಿಗಲಿದೆ.
ಇನ್ನು ಏರ್‌ಟೆಲ್‌ನಲ್ಲಿ ಎಂಟ್ರಿ-ಲೆವೆಲ್ ಪ್ಲಾನ್ (1GB/ದಿನ, 28 ದಿನಗಳು) ₹299ಕ್ಕೆ ಲಭ್ಯವಿದ್ದರೆ, ಅದರ 1.5 GB/ದಿನದ 28 ದಿನಗಳ ಪ್ಲಾನ್ ₹349ಕ್ಕೆ ಸಿಗುತ್ತದೆ. ಆದ್ದರಿಂದ ಏರ್‌ಟೆಲ್, ವೊಡಫೋನ್ ಐಡಿಯಾ ಎರಡಕ್ಕೂ ಹೋಲಿಸಿದ್ರೆ, ಜಿಯೋ ರೀಚಾರ್ಜ್ ಮೌಲ್ಯ ಕಡಿಮೆಯಾಗಿದೆ.
TRAI ಡೇಟಾ ಪ್ರಕಾರ, ಜೂನ್ 2025 ರಲ್ಲಿ ಜಿಯೋ 1.9 ಮಿಲಿಯನ್ ವೈರ್‌ಲೆಸ್ ಚಂದಾದಾರರನ್ನು ಸೇರಿಸುವ ಮೂಲಕ ಭಾರತೀಯ ಟೆಲಿಕಾಂನಲ್ಲಿ ನಂಬರ್ ಒನ್ ಎಂದು ಗುರುತಿಸಿಕೊಂಡಿದೆ. ಅದೇ ರೀತಿ ಏರ್‌ಟೆಲ್ 7,63,482 ಚಂದಾದಾರರನ್ನು ಗಳಿಸಿದ್ದರೆ, ವೊಡಾಫೋನ್ ಐಡಿಯಾ (Vi) 2,17,816 ಗ್ರಾಹಕರನ್ನು ಕಳೆದುಕೊಂಡಿದೆ ಎನ್ನಲಾಗಿದೆ. ಈ ಮೂಲಕ ಏರ್‌ಟೆಲ್ ಎರಡನೇ ಅತೀ ದೊಡ್ಡ ಟೆಲಿಕಾಂ ಕಂಪನಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Recharge Plans : ಜಿಯೋ ಗ್ರಾಹಕರಿಗೆ ನಿರಾಸೆ! ಇನ್ಮೇಲೆ ಇರಲ್ಲ ಈ ರೀಚಾರ್ಜ್ ಪ್ಲಾನ್
WhatsApp Group
Join Now