ನೀವು ಮೈಕ್ರೋ ಫೈನಾನ್ಸ್ ಅಥವಾ ಸಣ್ಣ ಪುಟ್ಟ ಸಹಕಾರಿ ಸಂಘಗಳಲ್ಲಿ ಸಾಲವನ್ನ ಮಾಡಿಕೊಂಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಈ ಆದೇಶವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಮೈಕ್ರೋ ಫೈನಾನ್ಸ್ ಗಳಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಬಹು ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್ ಮತ್ತು ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ಸಾಲವನ್ನ ಮಾಡಿದವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹಾಗಾದ್ರೆ ಮೈಕ್ರೋ ಫೈನಾನ್ಸ್ ಅಥವಾ ಸಣ್ಣ ಪುಟ್ಟ ಸಾಲ ಸಂಸ್ಥೆಗಳಲ್ಲಿ ಸಾಲವನ್ನ ಮಾಡಿಕೊಂಡವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಗುಡ್ ನ್ಯೂಸ್ ಏನು.? ತಿಳಿಯೋಣ.
ಇತ್ತೀಚಿಗೆ ಮೈಕ್ರೋ ಫೈನಾನ್ಸ್ ಗಳ ವಿರುದ್ಧವಾಗಿ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಕಾನೂನು ಮಿತಿಯನ್ನ ಮೀರಿ ಸಾಲ ವಸೂಲಾತಿಗೆ ಹೇಳಿದ ಸಂಸ್ಥೆಗಳಿಗೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಕೆಲವು ಮೈಕ್ರೋ ಫೈನಾನ್ಸ್ ಗಳು ತಮ್ಮ ವ್ಯವಹಾರವನ್ನು ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಮಿತಿಯನ್ನ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲವನ್ನು ಕೊಡುತ್ತದೆ.
ಅದೇ ರೀತಿಯಲ್ಲಿ ಕೆಲವು ಮೈಕ್ರೋ ಫೈನಾನ್ಸ್ಗಳು ಒಬ್ಬ ವ್ಯಕ್ತಿ ಸಾಲವನ್ನು ತೀರಿಸುತ್ತಿದ್ದಾಗ ಆತನ ಮೇಲೆ ಕಾನೂನು ಬಾಹಿರ ಕ್ರಮವನ್ನ ತೆಗೆದುಕೊಳ್ಳುತ್ತಿದೆ. ಈ ರೀತಿಯ ಸಾಕಷ್ಟು ಆರೋಪಗಳು ಈಗ ಮೈಕ್ರೋ ಫೈನಾನ್ಸ್ ಗಳ ಮೇಲೆ ಕೇಳಿ ಬಂದಿದೆ. ಈ ಕಾರಣಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಎಲ್ಲಾ ಮೈಕ್ರೋ ಫೈನಾನ್ಸ್ ಗಳಿಗೆ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಇನ್ನು ಮುಂದೆ ಮೈಕ್ರೋ ಫೈನಾನ್ಸ್ ಗಳು ಕಾನೂನು ಬಾಹಿರವಾಗಿ ಸಾಲವನ್ನು ವಸೂಲಿ ಮಾಡಿದರೆ ಅವರ ಮೇಲೆ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗುತ್ತದೆ.
ಅಷ್ಟೇ ಮಾತ್ರವಲ್ಲದೆ ಸಾಲಗಾರರ ಮನೆಯನ್ನು ಜಪ್ತಿ ಮಾಡುವ ಮೊದಲು ಸರ್ಕಾರದ ಅನುಮತಿಯನ್ನು ಪಡೆದುಕೊಳ್ಳಬೇಕು. ಅಂದರೆ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ನಿಯಮವನ್ನ ಪಾಲಿಸದಿದ್ದರೆ ಅವರ ನೊಂದಾವಣಿ ಪರವಾನಿಗೆ ಪತ್ರವನ್ನ ರದ್ದು ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯನವರು ಈಗ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಒಬ್ಬರೇ ವ್ಯಕ್ತಿಗೆ ಪದೇ ಪದೇ ಸಾಲವನ್ನು ಕೊಡಬಾರದು ಮತ್ತು ಕೆವೈಸಿ ಇಲ್ಲದೇ ಸಾಲವನ್ನು ಕೊಡಬಾರದು ಅಂತ ಈಗ ಸಿದ್ದರಾಮಯ್ಯ ಅವರು ಆದೇಶವನ್ನು ಹೊರಡಿಸಿದ್ದಾರೆ.
ನಿಯಮ ಉಲ್ಲಂಘನೆ ಮಾಡಿದ ಮೈಕ್ರೋ ಫೈನಾನ್ಸ್ ಗಳ ಲೈಸೆನ್ಸ್ ಗಳನ್ನ ರದ್ದುಗೊಳಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ಕೊಡಲಾಗಿದೆ. ಇನ್ನು ಮುಂದೆ ಮೈಕ್ರೋ ಫೈನಾನ್ಸ್ ಗಳ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಹೇಳಬಹುದು. ನೀವು ಕೂಡ ಮೈಕ್ರೋ ಫೈನಾನ್ಸ್ ಅಥವಾ ಸಣ್ಣ ಪುಟ್ಟ ಸಂಘ ಸಂಸ್ಥೆಗಳಲ್ಲಿ ಸಾಲವನ್ನ ಮಾಡಿದ್ದರೆ, ನಿಮಗೆ ಕಿರಿಕಿರಿ ಆಗುತ್ತಿದ್ದರೆ ನೀವು ದೂರು ಕೊಡಬಹುದು.
ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಬಾಕಿ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ.!
WhatsApp Group
Join Now