15 ವರ್ಷದ ಯಾವುದೇ ವಾಹನ ಇದ್ದರೂ ಹೊಸ ರೂಲ್ಸ್ | 15 Year Old Vehicles Rules

Spread the love

ಇದೀಗ ಹಳೆ ವಾಹನ ಓಡಿಸುವರಿಗೆ ಶಾಕಿಂಗ್ ಸುದ್ದಿಯೊಂದಿದೆ. ಇನ್ಮುಂದೆ ಫಿಟ್ನೆಸ್ ಸರ್ಟಿಫಿಕೇಟ್ ದರ ಭಾರೀ ದುಬಾರಿ ಆಗಲಿದ್ದು, ಇದೀಗ ಕೇಂದ್ರ ಸರ್ಕಾರ ಈ ದರವನ್ನ ದುಪ್ಪಟ್ಟು ಹೆಚ್ಚು ಮಾಡಿದೆ. ಹಾಗಿದ್ರೆ ಎಷ್ಟು ದರ ಹೆಚ್ಚು ಮಾಡಿದೆ ನೋಡೋಣ.

ಕೇಂದ್ರ ಸರ್ಕಾರವು ಕೇಂದ್ರ ಮೋಟಾರ್ ವಾಹನ ನಿಯಮಗಳನ್ನ ತಿದ್ದುಪಡಿ ಮಾಡಿದೆ. ಇದೀಗ ದೇಶದಾದ್ಯಂತ ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನ ಪ್ರಸ್ತುತ ಮಟ್ಟಕ್ಕಿಂತ ಹತ್ತು ಪಟ್ಟು ಹೆಚ್ಚಿಸಿದೆ. ಹೊಸ ನಿಯಮಗಳ ಅಡಿಯಲ್ಲಿ ಹೆಚ್ಚಿನ ಫಿಟ್ನೆಸ್ ಪರೀಕ್ಷಾ ಶುಲ್ಕದ ವಯಸ್ಸಿನ ಶ್ರೇಣಿಯನ್ನ ಇದೀಗ 15 ವರ್ಷಗಳಿಂದ 10 ವರ್ಷಗಳಿಗೆ ಬದಲಾಯಿಸಲಾಗಿದೆ. ಸರ್ಕಾರ ಇದೀಗ ಮೂರು ಸ್ಪಷ್ಟ ವಯಸ್ಸಿನ ವರ್ಗಗಳನ್ನ ಪರಿಚಯಿಸಿದೆ.

10 ರಿಂದ 15 ವರ್ಷ, 15 ರಿಂದ 20 ವರ್ಷ ಮತ್ತು 20 ವರ್ಷಗಳಿಗಿಂತ ಹೆಚ್ಚು. ವಾಹನವು ಹಳೆಯದಾಗುತ್ತಿದ್ದಂತೆ ಪ್ರತಿಯೊಂದು ವರ್ಗವು ಈಗ ಹೆಚ್ಚಿನ ಶುಲ್ಕವನ್ನ ಹೊಂದಿರುತ್ತದೆ. ಹೊಸ ಶುಲ್ಕಗಳು ವಾಹನದ ವಯಸ್ಸು ಮತ್ತು ಪ್ರಕಾರವನ್ನ ಆಧರಿಸಿವೆ. ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ವಾಹನಗಳಿಗೆ ಅನ್ವಯಿಸುವ ಹಿಂದಿನ ಪ್ಲಾಟ್ ರಚನೆಯನ್ನ ಕೂಡ ಅವು ಬದಲಾವಣೆ ಮಾಡುತ್ತವೆ.

ಭಾರೀ ವಾಣಿಜ್ಯ ವಾಹನಗಳಿಗೆ ಹೆಚ್ಚಳವು ಅತಿ ದೊಡ್ಡದಾಗಿದೆ. 20 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಟ್ರಕ್ ಅಥವಾ ಬಸ್ ಈಗ ಫಿಟ್ನೆಸ್ ಪರೀಕ್ಷೆಗೆ 25000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಇದಕ್ಕೂ ಮೊದಲು 2500 ರೂ. ಇತ್ತು. ಇನ್ನು ಅದೇ ವಯಸ್ಸಿನ ಮಧ್ಯಮ ವಾಣಿಜ್ಯ ವಾಹನಗಳು ಕೂಡ ಈಗ 1800ರ ಬದಲು 20,000 ಪಾವತಿಸಬೇಕಾಗಿದೆ. ಇನ್ನು 20 ವರ್ಷಕ್ಕಿಂತ ಹಳೆಯದಾದ ಲಘು ಮೋಟಾರ್ ವಾಹನಗಳು ಈಗ 15,000 ಮತ್ತು ತ್ರಿಚಕ್ರ ವಾಹನಗಳು 7000 ಪಾವತಿ ಮಾಡಬೇಕಾಗುತ್ತದೆ.

ಇನ್ನು ದ್ವಿಚಕ್ರ ವಾಹನಗಳಿಗೆ 20 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ 600 ರಿಂದ 2000 ರೂಪಾಯಿಗೆ ಏರಿಕೆಯಾಗಿದೆ. ಸರ್ಕಾರವು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಾಹನಗಳಿಗೆ ಶುಲ್ಕವನ್ನ ಹೆಚ್ಚು ಮಾಡಿದೆ. ಈ ಪರಿಷ್ಕೃತ ನಿಯಮ 81ರ ಅಡಿಯಲ್ಲಿ ಮೋಟಾರ್ ಸೈಕಲ್ಗಳು ಈಗ 400 ಎಲ್ಎಂಇವಿ ಗಳು 600 ಮತ್ತು ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು ಫಿಟ್ನೆಸ್ ಪರೀಕ್ಷೆಗೆ 1000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

WhatsApp Group Join Now

Spread the love

Leave a Reply