ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರಿಗೆ ನವೆಂಬರ್ 30ನೇ ತಾರೀಕಿನಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ. ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚು ಗ್ರಾಹಕರನ್ನ ಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ತನ್ನ ಸೇವೆಯಲ್ಲಿ ಬಹುದೊಡ್ಡ ಬದಲಾವಣೆಯನ್ನು ಮಾಡಲು ಮುಂದಾಗಿದೆ. ನವೆಂಬರ್ 30ನೇ ತಾರೀಕಿನಿಂದ ಭಾರತೀಯ ಸ್ಟೇಟ್ ಬ್ಯಾಂಕಿನ ಜನಪ್ರಿಯ ಸೇವೆಯೊಂದು ಸ್ಥಗಿತವಾಗುತ್ತಿದೆ. ಹಾಗಾದ್ರೆ ನವೆಂಬರ್ 30ನೇ ತಾರೀಕಿನಿಂದ ಸ್ಥಗಿತವಾಗುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕಿನ ಆ ಸೇವೆ ಯಾವುದು ತಿಳಿಯೋಣ.
ಭಾರತೀಯ ಸ್ಟೇಟ್ ಬ್ಯಾಂಕ್ ನವೆಂಬರ್ 30ನೇ ತಾರೀಕಿನಿಂದ ಎಂ ಕ್ಯಾಶ್ ಸೇವೆಯನ್ನ ಸ್ಥಗಿತ ಮಾಡಲು ಮುಂದಾಗಿದೆ. ನವೆಂಬರ್ 30ನೇ ತಾರೀಕಿನಿಂದ ಭಾರತೀಯ ಸ್ಟೇಟ್ ಬ್ಯಾಂಕಿನ ಗ್ರಾಹಕರು ಫಲಾನುಭವಿಗಳನ್ನ ನೊಂದಾವಣಿ ಮಾಡದೇ ಯಾವುದೇ ಹಣವನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ.
ಎಂ ಕ್ಯಾಶ್ ಅಪ್ಲಿಕೇಶನ್ ಅಥವಾ ಇಮೇಲ್ ಮೂಲಕ ಬಂದ ಲಿಂಕ್ನಿಂದ ಹಣವನ್ನ ಕ್ಲೈಮ್ ಮಾಡುವ ವ್ಯವಸ್ಥೆಯನ್ನ ಈಗ ಭಾರತೀಯ ಸ್ಟೇಟ್ ಬ್ಯಾಂಕ್ ಸ್ಥಗಿತ ಮಾಡಿದೆ. ಇದರಿಂದಾಗಿ ಎಲ್ಲಾ ಎಸ್ಬಿಐ ಗ್ರಾಹಕರು ಇನ್ನು ಮುಂದೆ ಹಣ ವರ್ಗಾವಣೆಯನ್ನ ಇತರ ಡಿಜಿಟಲ್ ವಿಧಾನದ ಮೂಲಕ ಮಾಡಬೇಕಾಗುತ್ತದೆ. ಎಂ ಕ್ಯಾಶ್ ಸೇವೆಯ ಬದಲಾಗಿ ಗ್ರಾಹಕರು ಯುಪಿಐ ಐಎಂಪಿಎಸ್ ನೆಫ್ಟ್ ಅಥವಾ ಆರ್ಟಿಜಿಎಸ್ ಸೇವೆಯನ್ನ ಬಳಸಬೇಕು ಅಂತ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಮನವಿಯನ್ನ ಮಾಡಿಕೊಂಡಿದೆ.
ಈ ಹಿಂದೆ ಎಂ ಕ್ಯಾಶ್ ಮೂಲಕ ಬಳಕೆದಾರರು ಗ್ರಾಹಕರ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನ ನಮೂದಿಸಿ ಹಣವನ್ನ ವರ್ಗಾವಣೆ ಮಾಡಬಹುದಾಗಿತ್ತು. ಆದರೆ ನವೆಂಬರ್ 30ನೇ ತಾರೀಕಿನಿಂದ ಈ ಸೇವೆ ಸ್ಥಗಿತವಾಗಲಿದೆ.
ಎಸ್ ಬಿಐ(SBI) ನಲ್ಲಿ ಖಾತೆ ಇದ್ದವರಿಗೆ ದೊಡ್ಡ ಅಲರ್ಟ್ | ಈ ಎಲ್ಲಾ ಸೇವೆಗಳು ಸಂಪೂರ್ಣ ಬಂದ್.!
WhatsApp Group
Join Now