ಬಿಗ್ ಬಾಸ್ ನಲ್ಲಿ ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಬಗ್ಗೆ ಗಿಲ್ಲಿ ತಾಯಿ ಹೇಳಿದ್ದೇನು ಗೊತ್ತ? Gillinata! Biggboss

Spread the love

ಬಿಗ್ ಬಾಸ್ ನಲ್ಲಿ ಗಿಲ್ಲಿ ಮೇಲೆ ಹಲ್ಲೆ ಆಗಿರುವ ಬಗ್ಗೆ ಅವರ ತಾಯಿ ಸವಿತಾವರು ಮೊದಲ ಬಾರಿಗೆ ಮಾತನಾಡಿದ್ದು ಬಿಗ್ ಬಾಸ್ ನ ಮೇಲೆ ಬೇಸರವನ್ನ ಹೊರಹಾಕಿದ್ದಾರೆ. ಅಸಲಿಗೆ ರಿಷಾ ಗೌಡ ರವರು ಗಿಲ್ಲಿಯನ್ನ ಹೊಡೆದಿದ್ರು ಕೂಡ ಬಿಗ್ ಬಾಸ್ ಯಾಕೆ ಇನ್ನು ಅವರನ್ನ ಹೊರಗಡೆ ಕಳುಹಿಸಲಿಲ್ಲ. ಈ ವಿಚಾರದಲ್ಲಿ ಡಬಲ್ ಗೇಮ್ ಮಾಡುತ್ತಿದ್ದಾರಾ.?

ಕಳೆದ ಬಾರಿಯೇ ಜಗದೀಶ್ ಅವರನ್ನ ತಳ್ಳಿದ್ದಕ್ಕೆ ರಂಜಿತ್ ನ ಹೊರಗಡೆ ಕಳುಹಿಸಿದ್ದರು. ಆದರೆ ಈ ಬಾರಿ ಗಿಲ್ಲಿಯನ್ನ ಒಂದು ಸಲ ಹೊಡೆದು ಮತ್ತೊಂದು ಸಲ ತಳ್ಳಿದ್ರೂ ಕೂಡ ಯಾಕೆ ರಿಷಾ ಗೌಡರನ್ನ ಇನ್ನು ಹೊರಗೆ ಕಳುಹಿಸಲಿಲ್ಲ.? ಇದರ ಬಗ್ಗೆ ಕಿಚ್ಚ ಸುದೀಪ್ ರವರು ಹೇಳಿದ್ದಾದರೂ ಏನು.?

ಈ ಬಾರಿಯ ಬಿಗ್ ಬಾಸ್ ಅನ್ನು ಜನರು ನೋಡ್ತಾ ಇರೋದೇ ಗಿಲ್ಲಿಯ ಎಂಟರ್ಟೈನ್ಮೆಂಟ್ ಯಿಂದ. ನೀವು ಆಚೆ 100 ಜನರನ್ನ ಕೇಳಿ ನೋಡಿ. ಅದರಲ್ಲಿ 90 ಜನರು ಗಿಲ್ಲಿನ ಹೊಗಳುತ್ತಾರೆ. ಆದರೆ ಬಿಗ್ ಬಾಸ್ ಒಳಗಡೆ ಇರುವ ಅಶ್ವಿನಿ ಗೌಡ ಮತ್ತು ಈ ರಿಷಾ ಗೌಡ ಬೇಕಂತಲೇ ಗಿಲ್ಲಿನ ಟಾರ್ಗೆಟ್ ಮಾಡ್ತಿದ್ದಾರೆ. ಯಾಕಂದ್ರೆ ಗಿಲ್ಲಿನ ಟಾರ್ಗೆಟ್ ಮಾಡಿದ್ರೆ ನಾವು ಹೈಲೈಟ್ ಆಗ್ತೀವಿ. ಫಿನಾಲೆವರೆಗೂ ಬಂದು ಬಿಡ್ತೀವಿ ಅನ್ನುವಂತಹ ಭ್ರಮೆಯಲ್ಲಿ ಇದ್ದಾರೆ. ಈ ರಿಷಾ ಗೌಡ ಬಿಗ್ ಬಾಸ್ ಒಳಗೆ ಬಂದಾಗ ನಾನು ಅದನ್ನ ಕಿತ್ತು ಹಾಕಿಬಿಡ್ತೀನಿ, ಇದನ್ನ ಮಾಡಿಬಿಡ್ತೀನಿ ಅಂತೆಲ್ಲ ಬರೀ ಬಿಲ್ಡಪ್ ಕೊಡ್ತಿದ್ರು.

ಆದರೆ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಒಂದೇ ಒಂದು ಟಾಸ್ಕ್ ಕೂಡ ಗೆದ್ದಿಲ್ಲ ಮನೆ ಕೆಲಸವನ್ನೂ ಮಾಡೋದಿಲ್ಲ. ಕಂಟೆಂಟ್ ಕೊಡಬೇಕು ಅಂತ ಕಿರ್ಚಾಡೋದು, ಚೀರಾಡೋದೇ ಒಂದು ದೊಡ್ಡ ಕಂಟೆಂಟ್ ಅನ್ಕೊಂಡು ಬಿಟ್ಟಿದ್ದಾರೆ. ಬಂದಾಗಿನಿಂದ ಪ್ರತಿಯೊಬ್ಬರ ಮೇಲೂ ಕೂಡ ಜಗಳ ಆಡ್ತಿದ್ದಾಳೆ. ಈ ರೀತಿ ಜಗಳ ಆಡಿದ್ರೆ ಬಿಗ್ ಬಾಸ್ ಇವಳನ್ನ ಸೇವ್ ಮಾಡಿಬಿಡ್ತಾರೆ ಅನ್ನುವ ಭ್ರಮೆಯಲ್ಲಿ ಬದುಕುತಿದ್ದಾಳೆ. ಅಸಲಿಗೆ ಬಿಗ್ ಬಾಸ್ ನಲ್ಲಿ ನಡೆದಿದ್ದು ಏನೆಂದ್ರೆ ಗಿಲ್ಲಿಯವರು ಸ್ನಾನಕ್ಕಾಗಿ ತುಂಬಾ ಹೊತ್ತು ಕಾಯುತ್ತಿರುತ್ತಾರೆ.

ಆದರೆ ಈ ರಿಷಾ ಗೌಡ ರವರು ಬಕೆಟ್ ಕೊಡದೆ ಬಾಗಿಲು ಹಾಕೊಂಡು ಕಾಲ ಕಳೀತಿರ್ತಾರೆ. ಬಕೆಟ್ ಕೊಡಲಿಲ್ಲ ಅನ್ನುವಂತಹ ಕಾರಣಕ್ಕೆ ಅವಳಿಗೆ ಬುದ್ದಿ ಕಲಿಸೋಣ ಎಂದು ತಮಾಷೆಗಾಗಿ ಅವಳ ಬಟ್ಟೆಗಳನ್ನೆಲ್ಲ ತಂದು ಒಂದು ಕಡೆ ಗುಡ್ಡೆ ಹಾಕ್ತಾನೆ ಗಿಲ್ಲಿ. ಆಗ ಈ ಅವಿವೇಕಿ ರಿಷಾಗೌಡ ಜೋರ್ ಜೋರಾಗಿ ಗಿಲ್ಲಿ ಮೇಲೆ ಕಿರ್ಚಾಡುತ್ತಾ ಬಂದು ಏಕಾಏಕಿ ಗಿಲ್ಲಿ ಭುಜಕ್ಕೆ ಜೋರಾಗಿ ಹೊಡೀತಾಳೆ. ಆಗ ಇಡೀ ಬಿಗ್ ಬಾಸ್ನ ಮನೆ ಒಂದು ಕ್ಷಣ ಗಾಬರಿಯಿಂದ ನೋಡ್ತಾರೆ. ಆದರೂ ಕೂಡ ರಿಷಾ ಗೌಡ ನಿಲ್ಲಿಸದೇ ಗಿಲ್ಲಿ ಮೇಲೆ ಕಿರ್ಚಾಡುತ್ತಾ ಸೀದಾ ರೂಮ್ಗೆ ಹೋಗಿ ಗಿಲ್ಲಿ ಬಟ್ಟೆಗಳನ್ನ ಎತ್ಕೊಂಡು ಅದನ್ನ ಸಿಕ್ಕ ಸಿಕ್ಕಾಗೆ ಚಲಾಪಿಲ್ಲಿ ಮಾಡುತ್ತಾ ಓವರಾಗಿ ಆಡ್ತಾಳೆ.

ಆಗ ಕ್ಯಾಪ್ಟೆನ್ ಅವರು ಬಂದು ಯಾಕೆ ಈತರ ಮಾಡ್ತಾ ಇದ್ದೀರಾ ಅಂತಾರೆ, ಆದರೂ ಕೂಡ ಹುಚ್ಚುಹುಚ್ಚಾಗಿ ಆಡುತ್ತಾ ಗಿಲ್ಲಿ ಬಟ್ಟೆಗಳನ್ನೆಲ್ಲ ಎಸೆದಾಡುತ್ತಾಳೆ. ಆಗ ಅಶ್ವಿನಿ ಗೌಡ ಬಂದು, ಗಿಲ್ಲಿ ಮಾಡಿದ ಅಂತ ನೀನು ಮಾಡಿದ್ರೆ ಇಬ್ಬರಿಗೂ ಏನು ವ್ಯತ್ಯಾಸ ಅಂತ ಕೇಳ್ತಾರೆ. ಆದರೂ ಅಶ್ವಿನಿಯ ಮಾತು ಕೂಡ ಕೇಳಿಸಿಕೊಳ್ಳದೆ ರಿಷಾ ಗೌಡ ಹಾಫ್ ಮೆಂಟಲ್ ತರ ಆಡ್ತಿದ್ದಾಳೆ. ಆಗ ಗಿಲ್ಲಿ ಬಂದು ಏನ್ ಮಾಡ್ತಿದೀಯಾ ಅಂತ ಕೇಳಕೆ ಬಂದ್ರೆ ಮತ್ತೆ ಗಿಲ್ಲಿಯನ್ನ ತಳ್ಳಿ ಹಲ್ಲೆ ಮಾಡ್ತಾಳೆ. ಆಗ ರಕ್ಷಿತ, ರಿಷಾ ಮತ್ತು ಗಿಲ್ಲಿ ಮಧ್ಯೆ ಬಂದು ಜಗಳವನ್ನ ನಿಲ್ಲಿಸುತ್ತಾಳೆ. ಮತ್ತು ರಿಷಾ ಗೌಡನ ಹಿಡಿದುಕೊಳ್ಳುತ್ತಾಳೆ. ಆದರೂ ಕೂಡ ಈ ರಿಷಾ ಗೌಡಾಳ ದುರಹಂಕಾರ ಮಾತ್ರ ಕಡಿಮೆ ಆಗಲ್ಲ.

ರಿಷಾ ಇದೆಲ್ಲ ಬೇಕಂತಾನೆ ಮಾಡ್ತಿರೋದು ಯಾಕಂದ್ರೆ ಅವಳಿಗೆ ಗೊತ್ತು ಹೊರಗಡೆ ಜನ ಗಿಲ್ಲಿನ ತುಂಬಾ ಸಪೋರ್ಟ್ ಮಾಡ್ತಿದ್ದಾರೆ ಎಂದು. ಅವಳು ಒಳಗಡೆ ಹೋದಾಗಲೂ ಕೂಡ ಹಾಡು ಬಂದ್ರೆ ಸಾಕು ಗಿಲ್ಲಿ ಜೊತೆ ಡಾನ್ಸ್ ಮಾಡೋದೇನು, ಎಲ್ಲವೂ ಮಾಡ್ತಿದ್ಳು, ಆದ್ರೆ ಯಾವಾಗ ಅಶ್ವಿನಿ ಗೌಡರ ಗುಂಪಿಗೆ ಸೇರಿಕೊಂಡಳು. ಆವಾಗಿಂದ ಗಿಲ್ಲಿ ಗುಂಪು ಕಂಡ್ರೆನೆ ಇವಳಿಗೆ ಆಗೋದೇ ಇಲ್ಲ. ಏನಾದ್ರೂ ಒಂದು ಕಿರಿಕ್ ತೆಗಿತಾನೆ ಇರ್ತಾಳೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಮೊದಲು ಧ್ರುವಂತ್ ನ ಟಾರ್ಗೆಟ್ ಮಾಡಿದ್ದಳು. ಧ್ರುವಂತ್ ನ ಮುಖವಾಡವನ್ನ ಕಳಿಸ್ತೀನಿ ಅಂತೆಲ್ಲ ಹೇಳಿ ಧ್ರುವಂತ್ ಜೊತೆಗೆ ಜೋರ್ ಜೋರಾಗಿ ಕಿರ್ಚಾಡುತ್ತಾ ಜಗಳ ಮಾಡಿದ್ಳು, ಆನಂತರ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಜಾನ್ವಿ ಅವರು ಒಂದು ಟಾಸ್ಕ್ ಸಮಯದಲ್ಲಿ ಹೇಳ್ತಾರೆ, ರಿಷಾರವರು ಚಂದ್ರಪ್ರಭಾ ರವರ ಜೊತೆ ಡಾನ್ಸ್ ಆಡೋದು ತಮಾಷೆ ಮಾಡೋದು ನೋಡೋಕೆ ಮುಜುಗರ ಆಗುತ್ತೆ ಅಂತ.

ಅಷ್ಟಕ್ಕೆ ಸುದೀಪ್ ರವರು ಇದ್ದರೂ ಕೂಡ ಜೋರ್ ಜೋರಾಗಿ ಕಚ್ಚಾಡಿಕೊಂಡು ನಾನು ಎಪಿಸೋಡ್ ಆದ ಮೇಲೆ ಹಂಗ್ ಮಾಡ್ತೀನಿ ಹಿಂಗ್ ಮಾಡ್ತೀನಿ ಅಂತ ಬಿಲ್ಡಪ್ ಕೊಟ್ರು ಈ ರಿಷಾಗೌಡ. ಆದರೆ ಏನನ್ನು ಕೂಡ ಮಾಡಲಿಲ್ಲ. ಆನಂತರ ಗಿಲ್ಲಿ ಜೊತೆಗೆ ಮತ್ತು ರಕ್ಷಿತಾಳ ಜೊತೆಗೂ ಕೂಡ ಜಗಳವಾಡಿದ್ದಳು. ಯಾವಾಗಲೂ ಜಗಳ ಆಡೋದಕ್ಕೆ ಕಾಯ್ತಾ ಇರ್ತಾಳೆ. ಮೊನ್ನೆ ಮತ್ತೆ ಗಿಲ್ಲಿ ಮೇಲೆ ಕೋಪ ಮಾಡಿಕೊಂಡು ಕಣ್ಣೀರು ಹಾಕಿದ್ಳು. ನೀನು ಬಂದ ಹೊಸದರಲ್ಲಿ ನನ್ನ ಜೊತೆ ಎಷ್ಟು ನಗ್ನಗ್ತಾ ಮಾತಾಡಿಕೊಂಡಿದ್ದೆ. ಆದರೆ ಈಗ ನನ್ನ ಜೊತೆ ಮಾತಾಡೋದೇ ಇಲ್ಲ ಅಂತ ಗಿಲ್ಲಿನ ತೊಡೆ ಮೇಲೆ ಮಲಗಿಸಿಕೊಂಡು ನಾಟಕ ಆಡಿದಳು.

ಆದರೆ ಇವತ್ತು ನೋಡಿದ್ರೆ ಮತ್ತೆ ಅದೇ ರಾಗ ಅದೇ ಹಾಡು ಪ್ರತಿದಿನ ಈ ರಿಷಾ ಗೌಡಾಳ ಜಗಳ ನೋಡಿ ಸಾಕಾಗಿಹೋಗಿದೆ. ಅದನ್ನೇ ಸುದೀಪ್ ರವರು ಕೂಡ ಮೊನ್ನೆ ಹೇಳಿದ್ರು, 12 ಸೀಸನ್ ನಲ್ಲಿ ಇಷ್ಟೊಂದು ಕಿರುಚಾಟ, ಚೀರಾಟ ಆಗೇ ಇರಲಿಲ್ಲ. ಜನರಿಗೂ ಕೂಡ ನಿಮ್ಮ ಆಟ ನೋಡಿ ಸಾಕಾಗಿಹೋಗಿದೆ. ಇನ್ನು ರಷಾ ಗಿಲ್ಲಿನ ಹೊಡೆದಿದ್ದಕ್ಕೆ ಅವಳನ್ನ ಮನೆಯಿಂದ ಆಚೆ ಕಳಿಸಿಲ್ಲ. ಅದೇ ಕಳೆದ ಸೀಸನ್ ನಲ್ಲಿ ರಂಜಿತ್ ರವರು ಕೇವಲ ಜಗದೀಶ್ರನ್ನ ತಳ್ಳಿದ ಒಂದೇ ಒಂದು ಕಾರಣಕ್ಕೆ ಆಚೆ ಕಳಿಸಿಬಿಟ್ರು. ಅವಾಗ ಒಂದು ನ್ಯಾಯ ಆದರೆ ಇವಾಗ ಒಂದು ನ್ಯಾಯನಾ.? ಕಳೆದ ಸೀಸನ್ ನಲ್ಲಿ ಮತ್ತೊಂದು ಘಟನೆಯಲ್ಲಿ ಭವ್ಯ ಗೌಡ ರವರು ಕೂಡ ಹನುಮಂತನ ಮೇಲೆ ಹಲ್ಲೆಯನ್ನ ಮಾಡ್ತಾರೆ.

ಆಗಲೂ ಕೂಡ ಅವರನ್ನ ಆಚೆ ಕಳಿಸಲಿಲ್ಲ. ಸುದೀಪ್ ರವರೇ ಇದಕ್ಕೆ ಬಿಗ್ ಬಾಸ್ ನ ಮೇಲೆ ಬೇಸರವನ್ನ ವ್ಯಕ್ತಪಡಿಸಿದ್ದರು. ಈ ಬಾರಿ ಕೂಡ ಕಿಚ್ಚ ಸುದೀಪ್ ರವರನ್ನ ಗಿಲ್ಲಿಯ ಫ್ಯಾನ್ ಪೇಜ್ಗಳು ಪ್ರಶ್ನೆ ಮೇಲೆ ಪ್ರಶ್ನೆ ಮಾಡ್ತಿದ್ದಾರೆ. ಏನ್ ಸರ್ ಗಿಲ್ಲಿನ ಹೊಡೆದರು ಕೂಡ ರಿಷಾರನ್ನ ಆಚೆ ಕಳಿಸಿಲ್ಲ ಇದು ಸರಿನಾ ಅಂತ ಕೇಳ್ತಾನೆ ಇದ್ದಾರೆ. ಅದಕ್ಕೆ ಸುದೀಪ್ ರವರು ಕೂಡ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನನಗೆ ನಿಮ್ಮ ಕಾಳಜಿ ಮತ್ತು ಸಂಕಟ ಅರ್ಥ ಆಗ್ತಿದೆ. ನಾನು ಬಿಗ್ ಬಾಸ್ ನ ನಿರೂಪಕ ಮಾತ್ರ. ಒಬ್ಬರನ್ನ ಆಚೆ ಕಳಿಸೋದು ಒಳಗಡೆ ಕರ್ಕೊಳ್ಳೋದು ಯಾವುದು ಕೂಡ ನನ್ನ ಕೈಯಲ್ಲಿ ಇಲ್ಲ, ಇರೋದು ಇಲ್ಲ. ಬಿಗ್ ಬಾಸ್ ಗೆ ಅದರದ್ದೇ ಆದ ರೂಲ್ಸ್ಗಳು ಇವೆ.  ಬಿಗ್ ಬಾಸ್ ಏನ್ ನಿರ್ಧಾರ ತಗೊಳ್ಳುತ್ತಾರೋ ಕಾದು ನೋಡೋಣ.

ಮತ್ತೊಂದು ಕಡೆ ಗಿಲ್ಲಿರವರ ತಾಯಿ ಕೂಡ ಟಿವಿ ಸಂದರ್ಶನಕ್ಕೆ ಇಂಟರ್ವ್ಯೂ ಕೊಟ್ಟಾಗ ರಿಷಾ ಗೌಡ ಗಿಲ್ಲಿನ ಹೊಡೆದಿದ್ದಕ್ಕೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಮತ್ತು ಗಿಲ್ಲಿ ನಮ್ಮ ಮನೆಯಲ್ಲಿ ಇದ್ದಾಗಲೂ ಅಷ್ಟೇ ಎಲ್ಲರನ್ನ ತಮಾಷೆ ಮಾಡ್ತಾ ತರಲೆ ಮಾಡ್ತಿರ್ತಾನೆ.!.  ಅದೇ ರೀತಿ ಬಿಗ್ ಬಾಸ್ ನಲ್ಲೂ ಕೂಡ ಇದ್ದಾನೆ ಆದರೆ ರಿಷಾ ಅವರು ಗಿಲ್ಲಿಯನ್ನ ಹೊಡೆದಿದ್ದು ತಪ್ಪು. ಅದೇ ಒಂದು ಹುಡುಗ ಮತ್ತೊಂದು ಹುಡುಗನನ್ನ ಹೊಡೆದರೆ ಆಚೆ ಕಳಿಸಿಬಿಡ್ತಾರೆ. ಆದರೆ ಒಂದು ಹುಡುಗಿ ಹುಡುಗನನ್ನ ಹೊಡೆದ್ರೆ ಯಾವುದೇ ಶಿಕ್ಷೆಯನ್ನ ಕೊಡೋದಿಲ್ಲ. ಒಂದು ವೇಳೆ ನನ್ನ ಮಗನೇ ಆ ರಿಷಾ ಗೌಡ ಮೇಲೆ ತಮಾಷೆಗೆ ಅಂತಾನೆ ಕೈ ಮಾಡಿದ್ರೆ ಬಿಡ್ತಿದ್ರಾ.? ಇದು ಯಾವ ನ್ಯಾಯ ಸ್ವಾಮಿ.?

ನೋಡೋಣ ಶನಿವಾರ ಸುದೀಪ್ ಸರ್ ಏನು ಹೇಳ್ತಾರೋ ಅದಕ್ಕೆ ನಾನು ಕಾಯ್ತೀನಿ. ಅವರು ಒಳ್ಳೆ ತೀರ್ಪನ್ನೇ ಕೊಡ್ತಾರೆ ಅಂತ ನಾನು ನಂಬಿದ್ದೀನಿ ಅಂತ ಗಿಲ್ಲಿ ಅವರ ತಾಯಿ ಸವಿತ ರವರು ಹೇಳಿದ್ದಾರೆ ಇನ್ನು ರಿಷಾ ಗೌಡ ಗಿಲ್ಲಿಯನ್ನ ಟಾರ್ಗೆಟ್ ಮಾಡಿದಕ್ಕೆ ಬಿಗ್ ಬಾಸ್ನ ಅನೇಕ ಸದಸ್ಯರು ರಿಷಾ ಗೌಡರನ್ನು ಮಸಿ ಬಳೆದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವಂತಹ ರಘು ರವರು ಸರಿಯಾಗಿ ಉಗ್ದಿದ್ದಾರೆ. ನಾನು ಮನೇಲಿ ರಾಕ್ಷಸನಂತೆ ಇರ್ತೀನಿ. ಬಟ್ಟೆನೇ ಹಾಕುವುದಿಲ್ಲ ಹಾಗಂತ ಬಿಗ್ ಬಾಸ್ ನಲ್ಲೂ ಕೂಡ ಹಾಗೆ ಇರುವುದಕ್ಕೆ ಆಗುವುದಿಲ್ಲ. ಇಡೀ ಕರ್ನಾಟಕ ಜನತೆ ನಮ್ಮನ್ನ ನೋಡ್ತಿರ್ತಾರೆ ಎಂದು ಮಸಿ ಬಳೆದು ಬುದ್ದಿ ಹೇಳಿದ್ದಾರೆ. ಇನ್ನು ಕೂಡ ನಿನ್ನ ಮುಖವಾಡ ಕಳಚಿ ಬಿದ್ದಿದೆ. ಇಡೀ ಕರ್ನಾಟಕವೇ ನೋಡ್ತಿದೆ ಅಂತ ರಿಷಾಗೌಡಗೆ ಬುದ್ದಿ ಹೇಳಿದ್ದಾರೆ.

ಈ ರಿಷಾಗೌಡ ನ್ಯಾಷನಲ್ ಲೆವೆಲ್ ರನ್ನಿಂಗ್ ಚಾಂಪಿಯನ್ ಅಂತ ಹೇಳ್ಕೊಂಡು ಮನೆಯೊಳಗೆ ಬಂದ್ಲು. ಆದ್ರೆ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲೂ ಕೂಡ ಸೋತಳು. ಕಬಡ್ಡಿ ಟಾಸ್ಕ್ ನಲ್ಲಿ ಭಾಗವಹಿಸಲೇ ಇಲ್ಲ. ಬಿಗ್ ಬಾಸ್ ಕಾಲೇಜ್ನಲ್ಲಿ ಕೂಡ ಡಾನ್ಸ್ ಕಾಂಪಿಟೇಷನ್ ನಲ್ಲೂ ಸರಿಯಾಗಿ ಡಾನ್ಸ್ ಅನ್ನು ಕೂಡ ಮಾಡಲಿಲ್ಲ. ಟಾಸ್ಕ್ಗಳು ಬಿಟ್ಟುಬಿಡಿ, ಮನೆಯ ಕೆಲಸ ಯಾವುದು ಕೂಡ ಬರೋದಿಲ್ಲ. ಒಂದು ಪಾತ್ರೆ ತೊಳೆಯೋಕೆ ಬರೋದಿಲ್ಲ. ಅಡುಗೆ ಮಾಡೋಕಂತೂ ಬರೋದೇ ಇಲ್ಲ. ಏನ್ ಕೇಳಿದ್ರು ನಮ್ಮ ಮನೆಯಲ್ಲಿ ನಾನು ಯಾವುದೇ ರೀತಿಯ ಕೆಲಸವನ್ನ ಮಾಡ್ತಿರಲಿಲ್ಲ ಅಂತಾಳೆ.

ಅಶ್ವಿನಿ ಗೌಡ ಜೊತೆಗೆ ಕೂತ್ಕೊಂಡು ರಿಷಾ ಹೇಳ್ತಾರೆ, ಈ ಗಿಲ್ಲಿಗೆ ಜನಬೆಂಬಲ ಹೊರಗಡೆ ತುಂಬಾನೇ ಇದೆ. ಆದರೆ ಇವನು ಕಪ್ ಹೊಡೆಯೋಕೆ ಸಾಧ್ಯನೇ ಇಲ್ಲ. ಅದು ಅವನ ಹಣೆಯಲ್ಲಿ ಕೂಡ ಬರದಿಲ್ಲ ಅಂತ ಹೇಳ್ತಾರೆ. ಈ ರಿಷಾ ಗೌಡನ ಅಶ್ವಿನಿ ಗೌಡ ಮ್ಯಾನಿಪುಲೇಟ್ ಮಾಡ್ತಿದ್ದಾರ ಅಥವಾ ಈ ರಿಷಾ ಗೌಡ ಅಸಲಿ ಮುಖವಾಡ ಈಗ ಕಳಚಿ ಬಿದ್ದಿದೆಯಾ.? ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ದಯವಿಟ್ಟು ಕಾಮೆಂಟ್ ಬಾಕ್ ಬಾಕ್ಸ್ನಲ್ಲಿ ತಿಳಿಸಿ.

WhatsApp Group Join Now

Spread the love

Leave a Reply