ನೀವು ಕೂಡ ಬ್ಯಾಂಕ್ ಲಾಕರ್ ಅನ್ನ ಹೊಂದಿದ್ರೆ ನಿಮಗೊಂದು ಆಘಾತಕಾರಿ ಸುದ್ದಿ ಬಂದಿದೆ. ಯಾವುದೇ ಬ್ಯಾಂಕಿನಲ್ಲಿ ಲಾಕರ್ ಹೊಂದಿರುವವರಿಗೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ ಆಘಾತಕಾರಿ ಸುದ್ದಿ ನೀಡಿದೆ ಅಂತ ಹೇಳಿದ್ರೆ ತಪ್ಪಾಗಲ್ಲ. ಬ್ಯಾಂಕಿನಲ್ಲಿ ಲಾಕರ್ ಹೊಂದಿರುವವರು ಭಾರತೀಯ ರಿಸರ್ವ್ ಬ್ಯಾಂಕಿನ ಈ ನಿಯಮವನ್ನ ಕಡ್ಡಾಯವಾಗಿ ತಿಳಿದುಕೊಳ್ಳಬೇಕು.
ಮನೆಯಲ್ಲಿ ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನ ಇಟ್ಟುಕೊಂಡರೆ ಅವುಗಳು ಕಳ್ಳತನವಾಗುವ ಸಾಧ್ಯತೆ ಇರುತ್ತೆ ಅನ್ನುವ ಕಾರಣಕ್ಕೆ ಬ್ಯಾಂಕ್ ಲಾಕರ್ ನಲ್ಲಿ ಅವುಗಳನ್ನ ಇಡಲಾಗುತ್ತದೆ. ಆದರೆ ಬ್ಯಾಂಕ್ ಲಾಕರ್ ಕೂಡ ಸೇಫ್ ಅಲ್ಲ ಅನ್ನೋದು ಸಾಕಷ್ಟು ಜನರಿಗೆ ಇನ್ನು ಕೂಡ ತಿಳಿದಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕಿನ ಲಾಕರ್ ನಿಯಮದ ಪ್ರಕಾರ ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಯಾವುದೇ ವಸ್ತುವಿಗೆ ಬ್ಯಾಂಕುಗಳು ಹೊಣೆಗಾರಿಕೆಯನ್ನ ಹೊಂದಿರುವುದಿಲ್ಲ. ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಅಥವಾ ಯಾವುದೇ ರೀತಿಯ ಬೆಲೆಬಾಳುವ ವಸ್ತುಗಳನ್ನ ಇಟ್ಟರು ಕೂಡ ಬ್ಯಾಂಕುಗಳು ಅದಕ್ಕೆ ಹೊಣೆಗಾರಿಕೆಯನ್ನ ಹೊಂದಿರುವುದಿಲ್ಲ.
ಒಂದು ವೇಳೆ ಬ್ಯಾಂಕ್ ಸಿಬ್ಬಂದಿಗಳ ನಿರ್ಲಕ್ಷದಿಂದ ನೀವು ಇಟ್ಟಿರುವ ವಸ್ತುಗಳು ಕಳವಾದರೆ ನೀವು ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಬ್ಯಾಂಕಿನ ಸಿಬ್ಬಂದಿಗಳ ನಿರ್ಲಕ್ಷದಿಂದ ಬ್ಯಾಂಕಿನ ಲಾಕರ್ ನಲ್ಲಿ ಇಟ್ಟಿರುವ ವಸ್ತುಗಳು ನಷ್ಟವಾದರೆ ಬ್ಯಾಂಕ್ ಲಾಕರ್ ನ ವಾರ್ಷಿಕ ಬಾಡಿಗೆಯ ಮೇಲೆ ನೂರು ಪಟ್ಟು ಪರಿಹಾರವನ್ನ ಪಡೆದುಕೊಳ್ಳಬಹುದು.
ಒಂದು ವೇಳೆ ಪ್ರವಾಹ ನೈಸರ್ಗಿಕ ವಿಕೋಪ ಅಥವಾ ಭೂಕಂಪದಿಂದ ಯಾವುದೇ ರೀತಿಯ ನಷ್ಟವಾದರೆ ಬ್ಯಾಂಕುಗಳು ಅದಕ್ಕೆ ಜವಾಬ್ದಾರಿಯನ್ನ ತೆಗೆದುಕೊಳ್ಳುವುದಿಲ್ಲ. ಯಾವುದೇ ಬ್ಯಾಂಕಿನ ಲಾಕರ್ ನಲ್ಲಿ ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ಇಡುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕಿನ ಈ ನಿಯಮವನ್ನು ತಿಳಿದುಕೊಳ್ಳುವುದು ಅತಿ ಅಗತ್ಯವಾಗಿದೆ
ಬ್ಯಾಂಕ್ ನಲ್ಲಿ ಬಂಗಾರ ಇಟ್ಟ ಎಲ್ಲರಿಗೂ ಹೊಸ ರೂಲ್ಸ್ | ಆಘಾತದ ನಿಯಮ.! ಏನಿದು ಸುದ್ಧಿ.!
WhatsApp Group
Join Now