ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ 1 ಲಕ್ಷ ರೂ. ಆರ್ಥಿಕ ನೆರವು – ಶೇ.20ರಷ್ಟು ಸಬ್ಸಿಡಿ.!

Spread the love

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳ ಆರ್ಥಿಕ ಮತ್ತು ವೃತ್ತಿ ಅಭಿವೃದ್ಧಿಗಾಗಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದೇ “ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ನೆರವು” ಯೋಜನೆ. ಈ ಯೋಜನೆ ಪಂಚವೃತ್ತಿ ಯೋಜನೆ ಎಂದೇ ಜನಜನಿತವಾಗಿದೆ. ಈ ಯೋಜನೆಯನ್ನು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಕುಶಲಕರ್ಮಿಗಳು ತಮ್ಮ ವೃತ್ತಿಯನ್ನು ಆಧುನೀಕರಿಸಲು, ಹೊಸ ಉಪಕರಣಗಳನ್ನು ಖರೀದಿಸಲು ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಈ ಯೋಜನೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಪಂಚವೃತ್ತಿ ಯೋಜನೆ? ಯೋಜನಯಡಿ ದೊರೆಯುವ ಆರ್ಥಿಕ ನೆರವು ಎಷ್ಟು? ಅರ್ಜಿ ಸಲ್ಲಿಕೆ ಹೇಗೆ ಎಂಬುದನ್ನು ತಿಳಿಯೋಣ.

ಏನಿದು ಪಂಚವೃತ್ತಿ ಯೋಜನೆ.?

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಜಾರಿಗೊಳಿಸಿರುವ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ಅಥವಾ ಪಂಚವೃತ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ನು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ ರೂಪಿಸಲಾಗಿರುವ ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಒಟ್ಟು 1,00,000 ನೆರವು ನೀಡಲಾಗುತ್ತದೆ.

ಇದರಲ್ಲಿ 80,000 ರೂ. ಸಾಲವನ್ನು ವಾರ್ಷಿಕ 4% ಬಡ್ಡಿದರದಲ್ಲಿ ನೀಡಿದರೆ ಉಳಿದ 20,000 ರೂ. ಮೊತ್ತವು ಮರುಪಾವತಿ ರಹಿತ ಸಹಾಯಧನವಾಗಿರುತ್ತದೆ. ಈ ಸಾಲವನ್ನು 3 ವರ್ಷಗಳ ಅವಧಿಯಲ್ಲಿ (34 ಮಾಸಿಕ ಕಂತುಗಳಲ್ಲಿ), 2 ತಿಂಗಳ ಗ್ರೇಸ್ ಅವಧಿಯೊಂದಿಗೆ ಮರುಪಾವತಿ ಮಾಡಬೇಕಿರುತ್ತದೆ, ಹಾಗೂ ಅರ್ಜಿಯನ್ನು ನಿಗಮದ ಕಚೇರಿ ಅಥವಾ ವೆಬ್‌ಸೈಟ್ ಮೂಲಕ ಆಫ್‌ಲೈನ್ ವಿಧಾನದಲ್ಲಿ ಸಲ್ಲಿಸಬಹುದು.

ಪಂಚವೃತ್ತಿ ಯೋಜನೆ

ಪಂಚವೃತ್ತಿ ಯೋಜನೆಯ ಪ್ರಮುಖ ಅಂಶಗಳು :-

• ಕಡಿಮೆ ಬಡ್ಡಿದರ: ಕೇವಲ ವಾರ್ಷಿಕ 4% ಬಡ್ಡಿದರದಲ್ಲಿ 80,000 ರೂ. ಸಾಲ ಲಭ್ಯ.
• ಸಹಾಯಧನ: 20,000 ರೂ. ಸರ್ಕಾರದಿಂದ ಮರುಪಾವತಿ ರಹಿತ ಸಹಾಯಧನ ಲಭ್ಯವಾಗಲಿದೆ.
• ಆಧುನೀಕರಣಕ್ಕೆ ಅವಕಾಶ: ಕುಶಲಕರ್ಮಿಗಳು ಒಟ್ಟು 1 ಲಕ್ಷ ರೂ.ದ ನೆರವಿನಿಂದ ಆಧುನಿಕ ಉಪಕರಣಗಳನ್ನು ಖರೀದಿಸಬಹುದು ಅಥವಾ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬಹುದು.
• ಸುಲಭ ಮರುಪಾವತಿ: 2 ತಿಂಗಳ ಗ್ರೇಸ್ ಅವಧಿಯೊಂದಿಗೆ 3 ವರ್ಷಗಳ ಮರುಪಾವತಿ ಅವಧಿ ಇರಲಿದೆ.
• ಆರ್ಥಿಕ ಸಬಲೀಕರಣ: ಸಾಂಪ್ರದಾಯಿಕ ವೃತ್ತಿಗಳನ್ನು ಉಳಿಸಿಕೊಂಡು, ನಿರಂತರ ಆದಾಯ ಗಳಿಕೆಗೆ ಅನುಕೂಲ.

ಫಲಾನುಭವಿಗಳ ಆಯ್ಕೆ ಹೇಗೆ.?

ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಹತಾ ಮಾನದಂಡಗಳು :-

ಯೋಜನೆಯ ಲಾಭ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
• ಅರ್ಜಿದಾರರು ವಿಶ್ವಕರ್ಮ ಸಮುದಾಯಕ್ಕೆ ಸೇರಿರಬೇಕು.
ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
• ವಯೋಮಿತಿ 18 ರಿಂದ 55 ವರ್ಷಗಳ ಒಳಗಿರಬೇಕು.
• ಈ ಕೆಳಗಿನ ಸಾಂಪ್ರದಾಯಿಕ ವೃತ್ತಿಗಳಾದ ಚಿನ್ನ ಮತ್ತು ಬೆಳ್ಳಿ ಕೆಲಸ, ಶಿಲ್ಪಕಲೆ, ಕಮ್ಮಾರಿಕೆ, ಮರಗೆಲಸ ಮತ್ತು ಕರಕುಶಲ ವೃತ್ತಿಯಲ್ಲಿ ತೊಡಗಿರಬೇಕು.
• ಈ ಹಿಂದೆ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಯಾವುದೇ ಸಾಲವನ್ನು ಪಡೆದಿರಬಾರದು.
• ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನಗ್ರಾಮಾಂತರ ಪ್ರದೇಶದವರಿಗೆ ರೂ.40,000 ರೂ.ಗಳು ಪಟ್ಟಣ ಪ್ರದೇಶದವರಿಗೆ 55,000 ರೂ.ಗಳ ಒಳಗಿರಬೇಕು.
• ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಆದಾಯ ಪ್ರಮಾಣಪತ್ರವು ನಿಗದಿತ ಮಿತಿಯಲ್ಲಿರಬೇಕು.

ಅರ್ಜಿ ಸಲ್ಲಿಸುವ ವಿಧಾನ – ಆಫ್‌ಲೈನ್ ಪ್ರಕ್ರಿಯೆ :-

ಪಂಚವೃತ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಫ್‌ಲೈನ್ ಮೂಲಕ ನಡೆಯುತ್ತದೆ:

• ಹಂತ 1: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಭೇಟಿ ನೀಡಿ. ಅಥವಾ ಅಧಿಕೃತ KVCDC ವೆಬ್‌ಸೈಟ್‌ https://kvcdcl.karnataka.gov.in/ ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
• ಹಂತ 2: ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಬೇಕು.
• ಹಂತ 3: ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ನಿಮ್ಮ ಜಿಲ್ಲೆಯಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಿ.
• ಹಂತ 4: ಅರ್ಜಿ ಸಲ್ಲಿಸಿದ ನಂತರ ದಿನಾಂಕ, ಸಮಯ ಮತ್ತು ಅನನ್ಯ ಉಲ್ಲೇಖ ಸಂಖ್ಯೆ (ಲಭ್ಯವಿದ್ದರೆ) ಇರುವ ಸ್ವೀಕೃತಿ ರಸೀದಿ ಪಡೆಯಲು ಮರೆಯಬೇಡಿ.

ಬೇಕಾಗುವ ಅಗತ್ಯ ದಾಖಲೆಗಳೇನು.?

• ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
• ಆಧಾರ್ ಕಾರ್ಡ್
• ಪಡಿತರ ಚೀಟಿ
• ಆದಾಯ ಪ್ರಮಾಣಪತ್ರ (ತಹಶೀಲ್ದಾರ್ ಅವರಿಂದ ಪಡೆದದ್ದು)
• ಜಾತಿ ಪ್ರಮಾಣಪತ್ರ
• ಆಧಾರ್‌ಗೆ ಲಿಂಕ್ ಆದ ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕಿನ ಉಳಿತಾಯ ಖಾತೆಯ ಪಾಸ್‌ಬುಕ್ ಪ್ರತಿ

WhatsApp Group Join Now

Spread the love

Leave a Reply