5 ದಿನಗಳಲ್ಲಿ ಈ ಕೆಲಸ ಮಾಡದವರ ಪಿಂಚಣಿ ಬಂದ್.! ಸರ್ಕಾರದ ಹೊಸ ಆದೇಶ.! Pension New Updates

Spread the love

ಪಿಂಚಣಿದಾರರಿಗೆ ಸರ್ಕಾರ ಇದೀಗ ಈ ಆದೇಶವನ್ನ ನೀಡಿದೆ. ನವೆಂಬರ್ 30ರ ಒಳಗೆ ಈ ಕೆಲಸ ಮಾಡದಿದ್ದರೆ ಪಿಂಚಣಿ ಬಂದ್ ಆಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ಇದೊಂದು ಮಹತ್ವದ ಸುದ್ದಿಯಾಗಿದೆ. ತಮ್ಮ ಮಾಸಿಕ ಪಿಂಚಣಿಯನ್ನ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಸಲು ಪಿಂಚಣಿದಾರರು ವಾರ್ಷಿಕವಾಗಿ ಸಲ್ಲಿಸಬೇಕಾದ ಜೀವನ ಪ್ರಮಾಣಪತ್ರ ಅಂದ್ರೆ ಲೈಫ್ ಸರ್ಟಿಫಿಕೇಟ್ ಸಲ್ಲಿಕೆಗೆ ನವೆಂಬರ್ 30 ಅಂತಿಮ ದಿನಾಂಕವಾಗಿದೆ.

ಈ ಗಡುವಿನ ಒಳಗಡೆ ಪ್ರಮಾಣಪತ್ರವನ್ನ ಸಲ್ಲಿಕೆ ಮಾಡದಿದ್ದರೆ ಪಿಂಚಣಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಎಲ್ಲಾ ಪಿಂಚಣಿದಾರರು ನವೆಂಬರ್ 30ರೊಳಗೆ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅದೇ ರೀತಿ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಪಿಂಚಣಿದಾರರಿಗೆ ಪ್ರತಿವರ್ಷ ಅಕ್ಟೋಬರ್ ಒಂದರಿಂದಲೇ ಪ್ರಮಾಣಪತ್ರ ಸಲ್ಲಿಸಲು ಅವಕಾಶವನ್ನ ನೀಡಲಾಗಿದೆ.

ನವೆಂಬರ್ 30ರ ಒಳಗೆ ಜೀವನ ಪ್ರಮಾಣಪತ್ರ ಸಲ್ಲಿಸಿದ ಪಿಂಚಣಿದಾರರ ಪಿಂಚಣಿ ಪಾವತಿಯನ್ನ ಪಿಂಚಣಿ ವಿತರಣ ಏಜೆನ್ಸಿಗಳು ಅಂದರೆ ಬ್ಯಾಂಕುಗಳು ತಾತ್ಕಾಲಿಕವಾಗಿ ನಿಲ್ಲಿಸುತ್ತವೆ. ಅದಾಗಿಯೂ ನಿಮ್ಮ ಪ್ರಮಾಣ ಪತ್ರವನ್ನ ಸಲ್ಲಿಸಿದ ತಕ್ಷಣ ಪಿಂಚಣಿ ಮತ್ತೆ ಪ್ರಾರಂಭವಾಗಿ ನಿಂತಿರುವ ಬಾಕಿ ಹಣವನ್ನು ಸಹ ಜಮೆ ಮಾಡಲಾಗುತ್ತದೆ. ಮನೆಯಿಂದಲೇ ನೀವು ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದಾಗಿದೆ.

ಮುಖ ಗುರುತಿಸುವಿಕೆ ಮೂಲಕ ಅಂದ್ರೆ ಫೇಸ್ ಆಥೆಂಟಿಕೇಶನ್ಸ್ ಮೂಲಕ ಬ್ಯಾಂಕ್ ಅಥವಾ ಕಚೇರಿಗೆ ಹೋಗಲು ಸಾಧ್ಯವಾಗದವರಿಗೆ ಇದು ಅತ್ಯಂತ ಸುಲಭವಾದ ಒಂದು ಕೆಲಸ ಆಗಿದೆ.

ಡೋರ್ ಸ್ಟೆಪ್ ಬ್ಯಾಂಕಿಂಗ್ ಅಂಡ್ ಸೇವೆ ಅಂದ್ರೆ ಸಾರ್ವಜನಿಕ ವಲಯದ 12 ಬ್ಯಾಂಕುಗಳು ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಮನೆಯಲ್ಲೇ ಕುಳಿತು ಪ್ರಮಾಣಪತ್ರವನ್ನ ಸಲ್ಲಿಸಬಹುದು. ಹಾಗಾಗಿ ಪಿಂಚಣಿದಾರರು ತಮ್ಮ ಬ್ಯಾಂಕ್ನ ಮೊಬೈಲ್ ಅಪ್ಲಿಕೇಶನ್ ವೆಬ್ಸೈಟ್ ಅಥವಾ ಟೋಲ್ ಫ್ರೀ ಸಂಖ್ಯೆಗಳ ಮೂಲಕ ಮನೆ ಬಾಗಿಲಿಗೆ ಸೇವೆಗಾಗಿ ಮನವಿ ಮಾಡಬಹುದು.

ನಿಮ್ಮ ಹತ್ತಿರದ ಕೇಂದ್ರಗಳ ಮೂಲಕ ಬ್ಯಾಂಕ್ ಶಾಖೆ, ನಾಗರಿಕ ಸೇವಾ ಕೇಂದ್ರ ಅಥವಾ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಸಾಧನೆಗಳ ಮೂಲಕ ನೀವು ಪ್ರಮಾಣಪತ್ರವನ್ನ ಸಲ್ಲಿಸಬಹುದು.

ಡಿಜಿಟಲ್ ಪ್ರಮಾಣಪತ್ರ ಸಲ್ಲಿಸುವಾಗ ಈ ದಾಖಲೆಗಳನ್ನು ಕೂಡ ಇಟುಕೊಳ್ಳಬೇಕು.

• ಆಧಾರ್ ಸಂಖ್ಯೆ
• ಪಿಂಚಣಿ ಪಾವತಿ ಆದೇಶ ಸಂಖ್ಯೆ
• ಪಿಂಚಣಿ ಪಡೆಯುವ ಬ್ಯಾಂಕ್ ಖಾತೆ ಸಂಖ್ಯೆ
• ಬ್ಯಾಂಕ್ ನಲ್ಲಿ ನೊಂದಾಯಿತ ಮೊಬೈಲ್ ಸಂಖ್ಯೆ

ಪಿಂಚಣಿ ಪಾವತಿಯಲ್ಲಿ ಯಾವುದೇ ಅಡಿತಡೆ ಆಗದಂತೆ ಪಿಂಚಣಿದಾರರು ಕೂಡಲೇ ಈ ಪ್ರಕ್ರಿಯೆಯನ್ನ ಪೂರ್ಣಗೊಳಿಸುವಂತೆ ಇಲಾಖೆಗಳು ಇದೀಗ ಸೂಚನೆ ನೀಡಿವೆ.

WhatsApp Group Join Now

Spread the love

Leave a Reply