ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ನಲ್ಲಿ 75 ವರ್ಷ ಮೇಲ್ಪಟ್ಟವರಿದ್ದರೆ ನಿಮಗೆ ರಾಜ್ಯ ಸರ್ಕಾರದಿಂದ ಹೊಸ ಸೇವೆ ಆರಂಭವಾಗಿದೆ. ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ನಲ್ಲಿ 75 ವರ್ಷ ಮೇಲ್ಪಟ್ಟವರಿದ್ದರೆ ಅಂತವರಿಗಾಗಿ ರಾಜ್ಯ ಸರ್ಕಾರ ಈಗ ಹೊಸ ಸೇವೆಯನ್ನ ಆರಂಭಿಸಿದೆ. ರಾಜ್ಯದಲ್ಲಿ 75 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ರಾಜ್ಯ ಸರ್ಕಾರದಿಂದ ಈ ಸೇವೆಯನ್ನ ಉಚಿತವಾಗಿ ಪಡೆದುಕೊಳ್ಳಬಹುದು.
ಕರ್ನಾಟಕ ರಾಜ್ಯ ಸರ್ಕಾರ ಈಗ 75 ವರ್ಷ ಮೇಲ್ಪಟ್ಟವರಿಗಾಗಿ ‘ಅನ್ನ ಸುವಿಧಾ’ ಯೋಜನೆಯನ್ನ ಜಾರಿಗೆ ತಂದಿದೆ. ಕರ್ನಾಟಕದ 75 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಕರ್ನಾಟಕ ರಾಜ್ಯ ಸರ್ಕಾರದ ಈ ‘ಅನ್ನ ಸುವಿಧಾ’ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದು. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ‘ಅನ್ನ ಸುವಿಧಾ’ ಯೋಜನೆಗೆ ಹೆಸರು ನೊಂದಾವಣೆ ಮಾಡಿಕೊಂಡರೆ ಅವರ ಮನೆಯ ಬಾಗಿಲಿಗೆ ಪಡಿತರ ಧಾನ್ಯಗಳು ಬರುತ್ತದೆ.
75 ವರ್ಷ ಮೇಲ್ಪಟ್ಟವರ ಮನೆಯ ಬಾಗಿಲಿಗೆ ಪಡಿತರ ಧಾನ್ಯವನ್ನ ವಿತರಣೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ ಈ ‘ಅನ್ನ ಸುವಿಧಾ’ ಯೋಜನೆಯನ್ನ ರಾಜ್ಯಾದ್ಯಂತ ಜಾರಿಗೆ ತಂದಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ನ್ಯಾಯಬೆಲೆ ಅಂಗಡಿಗೆ ಭೇಟಿಕೊಟ್ಟು ಈ ಅನ್ನ ಸುವಿಧಾ ಯೋಜನೆಗೆ ತಮ್ಮ ಹೆಸರು ನೊಂದಾವಣೆ ಮಾಡಿಕೊಳ್ಳಬೇಕು.
ಹೆಸರು ನೊಂದಾವಣೆಯನ್ನ ಮಾಡಿಕೊಂಡರೆ ಕರ್ನಾಟಕ ರಾಜ್ಯ ಸರ್ಕಾರವು ಆಹಾರ ಧಾನ್ಯಗಳಾದ ಅಕ್ಕಿ, ಗೋದಿ ಸೇರಿದಂತೆ ಇತರ ಪಡಿತರ ವಸ್ತುಗಳನ್ನ ನೇರವಾಗಿ ಫಲಾನುಭವಿಯ ಮನೆಗೆ ತಲುಪಿಸುತ್ತದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ನ್ಯಾಯಬೆಲೆ ಅಂಗಡಿಗೆ ಭೇಟಿ ಕೊಡದೇ ಪಡಿತರ ಧಾನ್ಯವನ್ನ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು.
ವೃದ್ಧರಿಗೆ ಆಹಾರದ ಕೊರತೆ ಆಗಬಾರದು ಅನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ‘ಅನ್ನ ಸುವಿಧಾ’ ಯೋಜನೆಯನ್ನ ವಿಸ್ತರಣೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರ ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ಈ ಸೇವೆಯನ್ನ ಆರಂಭಿಸಿದೆ. ನಿಮ್ಮ ಮನೆಯಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದರೆ ಹಿಂದೆ ನ್ಯಾಯಬೆಲೆ ಅಂಗಡಿಗೆ ಭೇಟಿಕೊಟ್ಟು ಹೆಸರನ್ನ ನೊಂದಾವಣೆ ಮಾಡಿಕೊಳ್ಳಿ.
BPL ಕಾರ್ಡ್ ಇದ್ದ 75 ವರ್ಷದವರಿಗೆ ದೊಡ್ಡ ಸಿಹಿಸುದ್ದಿ – ಹಿರಿಯ ನಾಗರಿಕರಿಗೆ ಈ ಸೇವೆ ಉಚಿತ | BPL Ration Card
WhatsApp Group
Join Now