ನವೆಂಬರ್ ಒಂದರಿಂದ ದೇಶದ ಪ್ರಮುಖ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಐದು ವಿಶೇಷ ಉಚಿತ ಸೇವೆಗಳನ್ನ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಎಸ್ ಬಿಐ, ಕೆನರಾ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ ಸೇರಿದಂತೆ ಹಲವು ಬ್ಯಾಂಕುಗಳು ಬ್ಯಾಂಕುಗಳಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ. ಈ ಕ್ರಮವು 60 ವರ್ಷ ಮೇಲ್ಪಟ್ಟವರು ಬ್ಯಾಂಕಿಂಗ್ ವಹಿವಾಟುಗಳನ್ನ ಸುಲಭ ಹಾಗು ಒತ್ತಡವಿಲ್ಲದೆ ನಿರ್ವಹಿಸಲು ಸಹಾಯ ಮಾಡುತ್ತದೆ.
ಕ್ಯೂ ಇಲ್ಲದೆ ಸೇವೆ : ಹಿರಿಯ ನಾಗರಿಕರಿಗೆ ಬ್ಯಾಂಕ್ ಕೌಂಟರ್ ಗಳಲ್ಲಿ ಮೊದಲ ಆಧ್ಯತೆ ನೀಡಲಾಗ್ತಾ ಇದೆ. ಇದರಿಂದಾಗಿ ಅವರು ಇನ್ನು ಮುಂದೆ ಸರತಿ ಸಾಲಿನಲ್ಲಿ ಕಾಯುವ ಅವಶ್ಯಕತೆ ಇರುವುದಿಲ್ಲ.
ಉಚಿತ ಪಾಸ್ ಬುಕ್ ಎಂಟ್ರಿ : ಅಂದ್ರೆ ಬ್ಯಾಂಕುಗಳು ಪಾಸ್ ಬುಕ್ ಅಪ್ಡೇಟ್ ಮಾಡಲು ಅಥವಾ ಮುದ್ರಿಸಲು ಯಾವುದೇ ಶುಲ್ಕವನ್ನ ವಿಧಿಸುವುದಿಲ್ಲ. ಈ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಉಚಿತ ಚೆಕ್ ಬುಕ್ ಸೌಲಭ್ಯ : ಹಿರಿಯ ನಾಗರಿಕರು ಯಾವುದೇ ಸೇವಾ ಶುಲ್ಕವಿಲ್ಲದೆ ಹೊಸ ಚೆಕ್ ಪುಸ್ತಕಗಳನ್ನ ಪಡೆಯಲು ಅವಕಾಶವನ್ನ ಕಲ್ಪಿಸಲಾಗಿದೆ.
ಮನೆ ಬಾಗಿಲಿನಲ್ಲಿ ಬ್ಯಾಂಕ್ ಸೇವೆ : ಇದು ಹಿರಿಯ ನಾಗರಿಕರಿಗೆ ಅತಿ ದೊಡ್ಡ ನೆಮ್ಮದಿ ನೀಡುವ ಸೇವೆಯಾಗಿದೆ. ಆಯ್ದ ಪ್ರದೇಶಗಳಲ್ಲಿ ನಗದು ಹಿಂಪಡೆಯುವುದು ಹಣ ಡೆಪಾಸಿಟ್ ಮಾಡುವುದು ಮತ್ತು ಪಾಸ್ ಬುಕ್ ಸಂಗ್ರಹದಂತಹ ಪ್ರಮುಖ ಸೇವೆಗಳು ಅವರ ಮನೆ ಬಾಗಿಲಿಗೆ ಲಭ್ಯವಾಗಲಿದೆ.
ಶೂನ್ಯ ಎಸ್ಎಂಎಸ್ ಎಟಿಎಂ ಎಚ್ಚರಿಕೆ ಶುಲ್ಕ : ಅಂದ್ರೆ ವಹಿವಾಟುಗಳ ಕುರಿತು ಗ್ರಾಹಕರಿಗೆ ನೀಡಲಾಗುವ ಎಸ್ಎಂಎಸ್ ಅಲರ್ಟ್ ಅಥವಾ ಎಟಿಎಂ ಎಚ್ಚರಿಕೆಗಳಿಗೆ ಬ್ಯಾಂಕ್ ಗಳು ಇದುವರೆಗೆ ಕಡಿತಗೊಳಿಸತ್ತ ಇದ್ದಂತ ಸಣ್ಣ ಶುಲ್ಕಗಳು ಇನ್ನು ಮುಂದೆ ನಿಲ್ಲಿಸಲಾಗುತ್ತಿದೆ.
ಈ ಎಲ್ಲಾ ಸೌಲಭ್ಯಗಳು ನವೆಂಬರ್ ಒಂದರಿಂದ ಜಾರಿಗೆ ಬರಲಿದ್ದು, ಹಿರಿಯ ನಾಗರಿಕರು ತಮ್ಮ ಬ್ಯಾಂಕ್ನಲ್ಲಿ ಈ ನಿಯಮಗಳ ಸಂಪೂರ್ಣ ವಿವರ ಮತ್ತು ಮನೆ ಬಾಗಿಲಿಗೆ ನೀಡುವ ಸೇವೆ ಯಾವ ಪ್ರದೇಶಗಳಿಗೆ ಲಭ್ಯವಿದೆ ಎಂಬುದನ್ನ ದೃಢೀಕರಣ ಮಾಡಿಕೊಳ್ಳಬಹುದು.

ಬ್ಯಾಂಕ್ ನಲ್ಲಿ ನವೆಂಬರ್ 1 ರಿಂದ ಹಿರಿಯ ನಾಗರೀಕರಿಗೆ ಈ 5 ಸೇವೆ ಉಚಿತ | Senior Citizens
WhatsApp Group
Join Now