ಅಕ್ಟೋಬರ್ 31 ರವೆರೆಗೆ ಶಾಲೆಗಳಿಗೆ ರಜೆ ವಿಸ್ತರಣೆ.? ಮಕ್ಕಳಿಗೆ ಇನ್ನೊಂದು ಸಿಹಿಸುದ್ದಿ.!

Spread the love

ಜನಗಣತಿ ಕೂಡ ಅಕ್ಟೋಬರ್ 31ರವರೆಗೆ ಮುಂದುವರೆದಿದೆ. ಸದ್ಯ ಶಾಲೆಗೆ ರಜೆ ಸಿಗ್ತದೆ ಇಲ್ವಾ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಈಗಾಗಲೇ ದೀಪಾವಳಿ ರಜೆಯಲ್ಲಿ ಇರುವಂತ ಮಕ್ಕಳು ಅಕ್ಟೋಬರ್ 31ರವರೆಗೆ ಶಾಲೆಗೆ ರಜೆ ಸಿಗಲಿದೆಯಾ ಎನ್ನುವ ಗೊಂದಲದಲ್ಲಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವಂತಹ ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿಗಣತೆಯ ಅವಧಿಯನ್ನ ಸರ್ಕಾರವು ಮತ್ತೊಮ್ಮೆ ವಿಸ್ತರಣೆ ಮಾಡಿದೆ.

ಸಮೀಕ್ಷೆಯ ಅಂತಿಮ ಗಡುವನ್ನ ಅಕ್ಟೋಬರ್ 31ರವರೆಗೆ ವಿಸ್ತರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ಪಡಿಸಿದ್ದಾರೆ. ಈ ಹಿಂದೆ ಜಾತಿಗಣಿತಿ ಕಾರ್ಯಕ್ಕೆ ಶಿಕ್ಷಕರನ್ನ ಬಳಸಿಕೊಂಡಿದ್ದ ಕಾರಣ ದಸರಾ ರಜೆಯನ್ನ ಅಕ್ಟೋಬರ್ 18ರವರೆಗೆ ವಿಸ್ತರಣೆ ಮಾಡಲಾಗಿತ್ತು. ಆದರೆ ಸಮೀಕ್ಷೆ ಅವಧಿ ವಿಸ್ತರಣೆಯಾಗಿದ್ರೂ ಕೂಡ ಈ ಬಾರಿ ಶಿಕ್ಷಕರಿಗೆ ಸಮೀಕ್ಷೆ ಕಾರ್ಯದಿಂದ ವಿನಾಯಿತಿಯನ್ನು ನೀಡಲಾಗಿದೆ.

ಹೀಗಾಗಿ ಶಾಲಾ ಕಾಲೇಜುಗಳಿಗೆ ಯಾವುದೇ ಹೆಚ್ಚುವರಿ ರಜೆ ಘೋಷಣೆ ಮಾಡಿಲ್ಲ. ಶಾಲೆಗಳು ಎಂದಿನಂತೆ ನಡೆಯಲಿವೆ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ. ಹಾಗಾಗಿ ಅಕ್ಟೋಬರ್ 18ರ ನಂತರ ಶಾಲೆಗಳು ಪುನರಾರಂಭಗೊಳ್ಳಲಿದೆ. ಇನ್ನು ಅಕ್ಟೋಬರ್ 31ರವರೆಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಶಿಕ್ಷಕರ ಬದಲಿಗೆ ಇತರ ಇಲಾಖೆಗಳ ಸರ್ಕಾರಿ ಸಿಬ್ಬಂದಿಯನ್ನ ಬಳಸಿಕೊಳ್ಳಲಾಗುವುದು. ಇದರ ಜೊತೆಗೆ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿದಿರುವಂತಹ ಸಮೀಕ್ಷೆಯನ್ನು ಪೂರ್ಣಗೊಳಿಸಲು ಆನ್ಲೈನ್ ಮೂಲಕವು ಮಾಹಿತಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಜನಗಣತಿ ಕೂಡ ಅಕ್ಟೋಬರ್ 31ರವರೆಗೆ ಮುಂದುವರೆಯುವುದರಿಂದ ಸದ್ಯ ಶಾಲೆಗೆ ರಜೆ ಸಿಗುತ್ತಾ.? ಇಲ್ವಾ.? ಎನ್ನುವ ಪ್ರಶ್ನೆ ಕೇಳಿ ಬರುತ್ತಿದ್ದು, ಸದ್ಯಕ್ಕೆ ಸರ್ಕಾರ ಯಾವುದೇ ನಿರ್ಧಾರ ಕೂಡ ಮಾಡಿಲ್ಲ. ಇದು ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ಅಕ್ಟೋಬರ್ 20, 21 ಮತ್ತು 22 ರಂದು ದೀಪಾವಳಿ ಹಬ್ಬದ ನಿಮಿತ್ತ ರಜೆ ಇರಲಿದ್ದು, ಅಕ್ಟೋಬರ್ 23 ರಿಂದ ಸಮೀಕ್ಷೆ ಮತ್ತೆ ಪುನರಾರಂಭ ಆಗಲಿದೆ.

WhatsApp Group Join Now

Spread the love

Leave a Reply