ದೀಪಾವಳಿಗೆ ಗೃಹಲಕ್ಷ್ಮೀ ಹಣ ಫಿಕ್ಸ್‌! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ದುಡ್ಡು – ಹಣ ಬಂದಿರೋದು ಹೇಗೆ ಚೆಕ್ ಮಾಡೋದು?

Spread the love

ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಮೊದಲು ನೀಡಿದ ಪಂಚ ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಬಹುತೇಕ ಯಶಸ್ವಿಯಾದರೂ ಸಹ ಕಳೆದ ಕೆಲ ತಿಂಗಳ ಹಣ ಇನ್ನೂ ಬಾಕಿ ಉಳಿದಿದೆ. ಇದೀಗ 4 ತಿಂಗಳುಗಳು ಕಳೆದರೂ ಮಹಿಳೆಯರ ಅಕೌಂಟ್ ಗೆ 2000 ರೂಪಾಯಿ ಹಣ ಜಮೆ ಆಗಿಲ್ಲ.

ಆದರೆ ಇದೀಗ ದೀಪಾವಳಿ ಹಬ್ಬ ನಿಮಿತ್ತ ಒಟ್ಟು 3 ತಿಂಗಳ ಹಣವನ್ನು ಒಟ್ಟಿಗೆ ಹಾಕುವ ಸಾಧ್ಯತೆ ಇದ್ದು, ಒಟ್ಟು 6,000 ರೂಪಾಯಿ ಮಹಿಳೆಯರ ಖಾತೆ ಸೇರುವ ನಿರೀಕ್ಷೆಯಿದೆ.

ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ?

ಗೃಹಲಕ್ಷ್ಮೀ ಹಣ ಬಾಕಿ ಕುರಿತು ಟೈಮ್ಸ್ ನೌ ಸುದ್ದಿ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜುಲೈ ತಿಂಗಳಿಂದ ಗೃಹ ಲಕ್ಷ್ಮೀ ಹಣ ನೀಡಲು ಬಾಕಿ ಇದ್ದು, ಇದರಲ್ಲಿ ಜುಲೈ ತಿಂಗಳ ಹಣ ಕೂಡಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಜುಲೈ ತಿಂಗಳ ಹಣ ಬಿಡುಗಡೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ, ಇನ್ನೆರಡು ಅಥವಾ ಮೂರು ದಿನಗಳಲ್ಲಿ ಈ ಹಣ ಮಹಿಳಾ ಫಲಾನುಭವಿಗಳ ಖಾತೆ ಸೇರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಹಣ ಜುಲೈ ತಿಂಗಳ ಹಣ ಬಿಡುಗಡೆಯಾದ ನಂತರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇವರುಗಳಿಗೆ ಗೃಹಲಕ್ಷ್ಮಿ ಹಣ ಸಿಗಲ್ಲ?

ಇನ್ನು, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರು ಅಥವಾ ಅವರ ಪತಿ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಇದ್ದರೆ ಅಂತವರು ಈ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೇ ಆದಾಯ ತೆರಿಗೆ ಪಾವತಿಸುತ್ತಿರುವವರು, GST ಅಡಿಯಲ್ಲಿ ನೋಂದಾಯಿಸಲ್ಪಟ್ಟವರು ಅನರ್ಹರಾಗುತ್ತಾರೆ. ಇವೆಲ್ಲವೂ ಪರಿಶೀಲಿಸಿ ಈಗಾಗಲೇ ಸುಮಾರು 2 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ನೀವು ಈ ಯೋಜನೆಯ ಪಲಾನುಭವಿಯಾಗಿದ್ದೀರಾ ಎಂದು ತಿಳಿದುಕೊಳ್ಳಲು ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಾಲಯದಲ್ಲಿ ವಿಚಾರಿಸಿ.

ಅರ್ಜಿ ಸಲ್ಲಿಸುವುದು ಹೇಗೆ?

* ಸೇವಾ ಸಿಂದು ವೆಬ್‌ಸೈಟ್‌ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಈ ಲಿಂಕ್‌ https://sevasindhugs.karnataka.gov.in/
* ಇದಲ್ಲವಾದ್ದಲ್ಲಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
* ಇನ್ನು, ಫಲಾನುಭವಿಯು ಆಧಾರ್ ಕಾರ್ಡ್ ಹೊಂದಿರಬೇಕು ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು
* ಸಹಾಯವಾಣಿ ಸಂಖ್ಯೆ: 1912 ಗೆ ಕರೆ ಮಾಡಿ ವಿಚಾರಿಸಬಹುದು.

ಗೃಹಲಕ್ಷ್ಮಿ ಯೋಜನೆ ಹೊಸ ನಿಯಮ:

ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಲು ಕೆಲವಷ್ಟು ಹೊಸ ನಿಯಮಗಳನ್ನು ರಾಜ್ಯ ಸರ್ಕಾರ ಈಗಾಗಲೇ ಜಾರಿಗೊಳಿಸಿದೆ. ಅಂದರೆ ನಿಮ್ಮ ಆಧಾರ್ ಕಾರ್ಡ್ ಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಣೆಗಳು ಸರಿಯಾದ ರೀತಿಯಲ್ಲಿ ಇರಬೇಕು. ಒಂದೇ ಕುಟುಂಬದಲ್ಲಿ 2 ರೇಷನ್ ಕಾರ್ಡ್ ಗಳನ್ನು ಪಡೆದಿರಬಾರದು. ಮುಖ್ಯವಾಗಿ ಕುಟುಂಬದಲ್ಲಿ ಯಾರೂ ಆದಾಯ ತೆರಿಗೆದಾರರು ಇರಕೂಡದು. ಈ ನಿಯಮ ಪಾಲನೆ ಆಗದಿದ್ದರೆ ನಿಮ್ಮ ಖಾತೆಗೆ ಹಣ ಸೇರುವುದಿಲ್ಲ.
Asha Workers: ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌ ಕೊಟ್ಟ ರಾಜ್ಯ ಸರ್ಕಾರ, ಮೂರು ತಿಂಗಳ ಗೌರವಧನ ಬಿಡುಗಡೆ

ಗೃಹಲಕ್ಷ್ಮಿ ಹಣ ಜಮಾ ಲಿಸ್ಟ್ ಚೆಕ್ ಮಾಡುವ ವಿಧಾನ:

* ಮೊದಲಿಗೆ ಗೃಹಲಕ್ಷ್ಮಿ ಯೋಜನೆ ಹಣದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: https://ahara.kar.nic.in/Home/EServices
* ಈ ಪೇಜ್‌ ಮೇಲೆ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. ಈ ರೇಷನ್ ಕಾರ್ಡ್ ಆಯ್ಕೆ ಮಾಡಿಕೊಳ್ಳಿ.
* ಮುಂದಿನ ಪುಟದಲ್ಲಿ ಶೋ ಹಳ್ಳಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು, GO ಮೇಲೆ ಕ್ಲಿಕ್ ಮಾಡಿ.
* ನಂತರ ಪುಟದಲ್ಲಿ ಸಂಪೂರ್ಣ ಗೃಹಲಕ್ಷ್ಮಿ ಯೋಜನೆ ಹಣ ಜಮಾ (DBT) ಆಗುವವರ ಲಿಸ್ಟ್ ನೋಡಬಹುದು.

ಈ ವಿಚಾರ ಗಮನದಲ್ಲಿರಲಿ:

ಮಖ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ ಮೇಲೆ ನೀಡಿರುವ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುವವರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲವಾದ್ದಲ್ಲಿ ಯಾವುದೇ ರೀತಿಯ ಆತಂಕ ಬೇಡಿ, ನಿಮ್ಮ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯಬಹುದು. ಅಲ್ಲದೇ ಸದ್ಯದ ಮಾಹಿತಿ ಪ್ರಕಾರ ದೀಪಾವಳಿಗೆ ಹಣ ಬರುವ ನಿರೀಕ್ಷೆಯಿದ್ದು, ರಾಜ್ಯ ಸರ್ಕಾರ ಯಾವುದೇ ಅಧಿಕೃತ ಮಾಹಿತಿಯನ್ನು ಹೊರಡಿಸಿಲ್ಲ. ಆದರೂ ಸಹ ನಿಯಮಾನುಸಾರ ಹಣ ಬರುವ ಮುನ್ನವೇ ನಿಮ್ಮ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದು ಉತ್ತಮ.

WhatsApp Group Join Now

Spread the love

Leave a Reply