30×40 ಸೈಟ್ ಖರೀದಿ ಮಾಡುವವರಿಗೆ ಈಗ ರಾಜ್ಯ ಸರ್ಕಾರ ಹೊಸ ನಿಯಮವನ್ನ ಜಾರಿಗೆ ತಂದಿದೆ. ಇನ್ನು ಮುಂದೆ 30×40 ಸೈಟ್ ಖರೀದಿ ಮಾಡುವ ಎಲ್ಲರೂ ಕೂಡ ಈ ದಾಖಲೆಯನ್ನ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಕರ್ನಾಟಕದಲ್ಲಿ 30×40 ಸೈಟ್ಗೆ ಸಂಬಂಧಪಟ್ಟಂತೆ ಕೆಲವು ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ. ಹಾಗಾದರೆ 30×40 ಸೈಟ್ ಖರೀದಿ ಮಾಡುವವರು ಯಾವ ದಾಖಲೆಯನ್ನ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಈ ಕುರಿತಂತೆ ಸರ್ಕಾರ ಹೊರಡಿಸಿರುವ ಆದೇಶವೇನು.? ತಿಳಿಯೋಣ.
30×40 ಸೈಟ್ ಖರೀದಿ ಮಾಡುವವರು ಎನ್ಕಂಬರೆನ್ಸ್ ಸರ್ಟಿಫಿಕೇಟ್ ಅಂದರೆ ಈಸಿ ದಾಖಲೆಯನ್ನ ಇಟ್ಟುಕೊಳ್ಳುವುದು ಅತಿ ಅಗತ್ಯವಾಗಿದೆ. 30×40 ಸೈಟ್ ಖರೀದಿ ಮಾಡುವವರು ಕಳೆದ 12 ವರ್ಷದಿಂದ 15 ವರ್ಷಗಳವರೆಗಿನ ಈಸಿ ದಾಖಲೆಯನ್ನ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಈಸಿ ದಾಖಲೆಯ ಮೂಲಕ ಆಸ್ತಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳಬಹುದು.
ಅಂದರೆ ನೀವು ಖರೀದಿ ಮಾಡಿದ ಆಸ್ತಿಗೆ ಸಂಬಂಧಪಟ್ಟಂತೆ ಏನಾದರೂ ವಿವಾದಗಳಿದ್ದರೆ ಅಂದರೆ ಯಾರು ಯಾರಿಗೆ ಈ ಆಸ್ತಿ ಮಾರಾಟವಾಗಿದೆ. ಮತ್ತು ಯಾರು ಯಾರು ಈ ಆಸ್ತಿಯನ್ನ ಖರೀದಿ ಮಾಡಿದ್ದಾರೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳಬಹುದು.
ಅದೇ ರೀತಿಯಲ್ಲಿ ಸೇಲ್ ಅಗ್ರಿಮೆಂಟ್ ನ್ನ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. 30×40 ಸೈಟ್ ಖರೀದಿ ಮಾಡುವ ಸಮಯದಲ್ಲಿ ಈ ಸೇಲ್ ಅಗ್ರಿಮೆಂಟ್ ಅನ್ನೋದು ಪ್ರಮುಖವಾದ ಪಾತ್ರವನ್ನು ವಹಿಸುತ್ತೆ. ಈ ಸೇಲ್ ಅಗ್ರಿಮೆಂಟ್ನಲ್ಲಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರ ನಡುವಿನ ಒಪ್ಪಂದವನ್ನ ಸಂಪೂರ್ಣವಾಗಿ ಬರೆಯಲಾಗುತ್ತದೆ. ಖರೀದಿ ಮಾಡುವ ಆಸ್ತಿಯ ಬೆಲೆ ಮತ್ತು ಕೆಲವು ಶರತ್ತುಗಳನ್ನು ಕೂಡ ಇದರಲ್ಲಿ ನಮೂದಿಸಲಾಗುತ್ತದೆ.
ಆಸ್ತಿಯ ಶೀರ್ಷಿಕೆ ದಾಖಲೆಯನ್ನ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. 30×40 ಸೈಟ್ ಖರೀದಿ ಮಾಡುವ ಸಮಯದಲ್ಲಿ ಪ್ರತಿಯೊಬ್ಬರು ಕೂಡ ಆಸ್ತಿಗೆ ಸಂಬಂಧಪಟ್ಟಂತೆ ಶೀರ್ಷಿಕೆ ದಾಖಲೆಯನ್ನ ಇಟ್ಟುಕೊಳ್ಳಬೇಕು. ಈ ಶೀರ್ಷಿಕೆ ದಾಖಲೆಯು ಆಸ್ತಿಯ ಮಾಲಿಕರ ಹೆಸರು ಆಸ್ತಿಯ ವಿವರಗಳು ಮತ್ತು ಕಾನೂನು ಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ಒದಗಿಸುತ್ತೆ. ಉಪ ನೋಂದಾವಣಿ ಅಧಿಕಾರಿಯ ಕಚೇರಿಗೆ ಭೇಟಿಕೊಟ್ಟು ಈ ದಾಖಲೆಯನ್ನ ಪಡೆದುಕೊಳ್ಳಬಹುದು.
ಆರ್ಟಿಸಿ ಯನ್ನ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. 30×40 ಸೈಟ್ ಖರೀದಿ ಮಾಡುವ ಸಮಯದಲ್ಲಿ ನೀವು ಆ ಆಸ್ತಿ ಯಾರ ಹೆಸರಲ್ಲಿ ಇದೆ ಅಂತ ತಿಳಿದುಕೊಳ್ಳಲು ಇತ್ತೀಚಿನ ಆರ್ಟಿಸಿ ಯನ್ನ ಪಡೆದುಕೊಳ್ಳುವುದು ಅತಿ ಅಗತ್ಯವಾಗಿದೆ. ನೀವು ಕೂಡ 30×40 ಸೈಟ್ ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದರೆ ಈ ದಾಖಲೆಯನ್ನ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಈ ದಾಖಲೆಗಳು ಇಲ್ಲದೆ ಇದ್ದರೆ ನೀವು ಕೆಲವು ಸರ್ಕಾರಿ ಸೇವೆಯಿಂದ ಮಾತ್ರವಲ್ಲದೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗುತ್ತೆ

30×40 ಸೈಟ್ ಖರೀದಿಗೆ ಇನ್ಮೇಲೆ ಈ 4 ದಾಖಲೆ ಕಡ್ಡಾಯ | ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ.?
WhatsApp Group
Join Now