ಜಾತಿಗಣತಿ ಇನ್ನೂ ಮುಗಿಯದ ಕಾರಣ ಶಾಲೆಗಳಿಗೆ ರಜೆ ವಿಸ್ತರಣೆ? | Karnataka Caste Census

Spread the love

ರಾಜ್ಯ ಸರ್ಕಾರ ನಡೆಸುತ್ತಿರುವಂತಹ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಕ್ಕೆ ನೀಡಲಾದ ಗಡುವು ಇದೀಗ ಮುಗಿಯುತ್ತಾ ಬಂದ್ರೂ ಕೂಡ ಗಣತಿ ಕಾರ್ಯ ಮಾತ್ರ ಸದ್ಯ ಪೂರ್ಣವಾಗಿಲ್ಲ. ಸದ್ಯ ನಿಗದಿತ ಗುರಿ ತಲುಪುವಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ ಮತ್ತೆ ಈ ಗಣತಿ ವಿಸ್ತರಣೆ ಆಗಲಿದೆ ಅಂತ ಹೇಳಲಾಗಿದೆ.

ತಾಂತ್ರಿಕ ಸಮಸ್ಯೆ ಸೇರಿ ನಾನಾ ಕಾರಣಗಳಿಂದಾಗಿ ನಿರೀಕ್ಷಿತ ಗುರಿ ತಲುಪುವಲ್ಲಿ ಗಣತಿದಾರರು ವಿಫಲರಾಗುತ್ತಲಿದ್ದಾರೆ. ಇನ್ನು ಅಕ್ಟೋಬರ್ 18ರವರೆಗೆ ಸಮೀಕ್ಷೆ ಅವಧಿಯನ್ನ ವಿಸ್ತರಣೆ ಮಾಡಲಾಗಿದ್ದರೂ ಕೂಡ ರಾಜಧಾನಿ ಬೆಂಗಳೂರಿನಲ್ಲಿ ಈವರೆಗೆ ಶೇಕಡ 30ರಷ್ಟು ಮನೆಗಳ ಗಣತಿ ಮಾತ್ರ ನಡೆದಿದೆ. ಈ ಹಿನ್ನಲೆ ಮುಖ್ಯ ಆಯುಕ್ತರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದು ಮುಖ್ಯ ಆಯುಕ್ತರು ಮತ್ತು ಪಾಲಿಕೆ ಆಯುಕ್ತರು ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಸಮೀಕ್ಷೆದಾರರಿಗೆ ದಿನಕ್ಕೆ 16 ಮನೆಗಳ ಗುರಿ ನೀಡಲಾಗಿತ್ತು. ಈ ವೇಗದಲ್ಲಿ ಕಾರ್ಯ ನಡೆದರೆ ಸಮೀಕ್ಷೆಯನ್ನ ಅಕ್ಟೋಬರ್ 18 ಅಥವಾ 19ರ ಒಳಗಡೆ ಪೂರ್ಣಗೊಳಿಸಲು ಸಾಧ್ಯ ಎಂಬಂತೆ ಅಂದಾಜು ನೀಡಲಾಗಿತ್ತು. ಆದರೆ ಬೆಂಗಳೂರಿನಲ್ಲಿ ದಿನಕ್ಕೆ ಕೇವಲ ಸರಾಸರಿ ಏಳು ಎಂಟು ಮನೆಗಳ ಸಮೀಕ್ಷೆ ಆಗ್ತಾ ಇದೆ. ಪ್ರಸ್ತುತ ನಡೆದಿರುವುದು ಶೇಕಡ 30 ರಷ್ಟು ಮನೆಗಳ ಗಣತಿ ಮಾತ್ರ.

ಹಾಗಾಗಿ ಸಮೀಕ್ಷೆ ಪ್ರಗತಿಗೆ ವೈಯಕ್ತಿಕ ಗಮನಹರಿಸಿ ಕ್ರಮಗಳನ್ನ ಕೈಗೊಳ್ಳಿ ಎಂದು ಮನವಿ ಕೂಡ ಮಾಡಿದ್ದಾರೆ. ಇನ್ನು ರಾಜ್ಯದಂತ ಸೆಪ್ಟೆಂಬರ್ 22 ರಿಂದ ಆರಂಭವಾಗಿದ್ದ ಜಾತಿಗಣತೆಯನ್ನ ಅಕ್ಟೋಬರ್ ಏಳರ ಒಳಗೆ ಮುಕ್ತಗೊಳಿಸಲು ಆರಂಭದಲ್ಲಿ ನಿರ್ಧಾರ ಮಾಡಲಾಗಿತ್ತು. ಆದರೆ ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್ 18ರವರೆಗೆ ಜಾತಿ ಸಮೀಕ್ಷೆ ವಿಸ್ತರಣೆಗೊಂಡಿತ್ತು.

ಈ ಕೆಲಸದಲ್ಲಿ ಪಾಲ್ಗೊಂಡಿರುವ ಬಹುತೇಕರು ಸರ್ಕಾರಿ ಶಾಲೆ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರಾದ ಕಾರಣ ಅಕ್ಟೋಬರ್ 18ರವರೆಗೆ ಶಾಲೆಗಳಿಗೂ ಕೂಡ ರಜೆಯನ್ನ ಘೋಷಣೆ ಮಾಡಲಾಗಿತ್ತು. ಈಗ ವಿಸ್ತೃತ ಅವಧಿ ಮುಗಿಯುತ್ತ ಬಂದರು ಜಾತಿ ಸಮೀಕ್ಷೆಯ ಅಂತಿಮ ಹಂತ ತಲುಪದ ಕಾರಣ ಶಾಲೆಗಳ ಆರಂಭದ ಕಥೆ ಏನು ಎಂಬ ಪ್ರಶ್ನೆಯು ಹೆಚ್ಚಿನವರಲ್ಲಿ ಉದ್ಭವ ಆಗಿದೆ.

WhatsApp Group Join Now

Spread the love

Leave a Reply