ಕರ್ನಾಟಕದಲ್ಲಿ ಪ್ರವಾಹದಿಂದ ಹಾನಿಗೊಳಗಾದ 12.54 ಲಕ್ಷ ಹೆಕ್ಟರ್ ಪ್ರದೇಶದ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 2000 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿ ಹೆಕ್ಟರ್ಗೆ 8500 ರಿಂದ 31000 ರೂಪಾಯಿಗಳವರೆಗೆ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನ ಜಮೆ ಮಾಡಲಾಗ್ತಾ ಇದೆ. ಹಾಗಿದ್ರೆ ಯಾವಾಗ ಹಣ ಖಾತೆಗೆ ಬರಲಿದೆ.ನೋಡೋಣ.
2025ರ ನೈರುತ್ಯ ಮುಂಗಾರು ಋತುವಿನಲ್ಲಿ ಕರ್ನಾಟಕದಾದ್ಯಂತ ಭಾರೀ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕ ಬೆಲೆಗಳಿಗೆ ಗಣನೀಯ ಹಾನಿಯಾಗಿದೆ. ಸೆಪ್ಟೆಂಬರ್ ನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಭೂಮಿಯ ಬೆಳೆಗಳು ಕೂಡ ನಾಶವಾಗಿದೆ. ರಾಜ್ಯ ಸರ್ಕಾರವು ಈ ಬೆಳೆಹಾನಿಯನ್ನ ಗಂಭೀರವಾಗಿ ಪರಿಗಣಿಸಿ ರೈತರಿಗೆ ಪರಿಹಾರ ಒದಗಿಸಲು ಇದೀಗ ಮುಂದಾಗಿದೆ.
ಬೆಳೆಹಾನಿ ಪರಿಹಾರದ ಹಣವು ಬಿಡುಗಡೆಯಾಗಿದ್ದು, ನಾಳೆ ಮಧ್ಯಾಹ್ನ ಹಣ ಬಿಡುಗಡೆ ಆಗಲಿದೆ ಅಂತ ಹೇಳಿ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಪರಿಹಾರ ಬೆಳೆ ವಿಮೆ ಮಾಡಿಸಿದ ಇನ್ಸೂರೆನ್ಸ್ ಇರುವ ಮತ್ತು ಇನ್ಸೂರೆನ್ಸ್ ಇಲ್ಲದ ಎರಡು ವರ್ಗದ ರೈತರಿಗೂ ಕೂಡ ಅನ್ವಯವಾಗಲಿದೆ. ಹಾಗಾಗಿ ರಾಜ್ಯ ಸರ್ಕಾರವು ಬೆಳೆ ಹಾನಿಯನ್ನ ನಿಖರವಾಗಿ ಗುರುತಿಸಲು ಜಂಟಿ ಸಮೀಕ್ಷೆಯನ್ನ ಈಗಾಗಲೇ ಕೈಗೊಂಡಿದೆ. ಒಟ್ಟು ಒಂಬತ್ತು ಜಿಲ್ಲೆಗಳಲ್ಲಿ ಈ ಸಮೀಕ್ಷೆಯನ್ನ ಈಗಾಗಲೇ ಪೂರ್ಣ ಮಾಡಲಾಗಿದೆ.
5.29 ಲಕ್ಷ ಹೆಕ್ಟೇರ್ ಬೆಳೆ ಹಾನಿಯ ವಿವರಗಳನ್ನು ದಾಖಲಿಸಲಾಗಿದೆ. ಆದರೆ ಕಲಬುರ್ಗಿ ಯಾದಗಿರಿ ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಇತ್ತೀಚಿನ ಪ್ರವಾಹದಿಂದಾಗಿ 7.24 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆಯನ್ನು ಪುನಃ ನಡೆಸುವ ಅಗತ್ಯ ಇದೆ. ಈ ಪರೀಕ್ಷಿತ ಸಮೀಕ್ಷೆಯು ಮುಂದಿನ 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಅಂತ ಹೇಳಿ ಸಚಿವರು ಕೂಡ ಸ್ಪಷ್ಟನೆ ನೀಡಿದ್ದಾರೆ.

ನಾಳೆ ಮಧ್ಯಾಹ್ನ 4 ಗಂಟೆಗೆ ಈ ಜಿಲ್ಲೆಗೆ ಬೆಳೆ ಪರಿಹಾರ ಹಣ | Karnataka Drought Crop Insurance & Relief Money
WhatsApp Group
Join Now