ಭಾರತೀಯರಿಗೆ BSNL ಐತಿಹಾಸಿಕ ಆಫರ್ ಘೋಷಣೆ | ಸಿಹಿಸುದ್ದಿ | BSNL Offers

Spread the love

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ ಈಗ ತನ್ನ ಎಲ್ಲಾ ಗ್ರಾಹಕರಿಗೆ ದೀಪಾವಳಿ ಹಬ್ಬದ ಹುಡುಗೊರೆಯನ್ನು ಕೊಟ್ಟಿದೆ. ಬಿಎಸ್ಎನ್ಎಲ್ ಗ್ರಾಹಕರು ಈಗ ಕೇವಲ ಒಂದು ರೂಪಾಯಿಗೆ ಒಂದು ತಿಂಗಳವರೆಗೆ ದಿನಕ್ಕೆ 2 GB ಡೇಟಾ ಅನಿಯಮಿತ ಕರೆ ಮತ್ತು 100 ಎಸ್ಎಂಎಸ್ ಗಳನ್ನ ಉಚಿತವಾಗಿ ಪಡೆದುಕೊಳ್ಳಬಹುದು. ಹಾಗಾದ್ರೆ ಬಿಎಸ್ಎನ್ಎಲ್ ನ ಈ ರಿಚಾರ್ಜ್ ಪ್ಲಾನ್ ಯಾವುದು ಮತ್ತು ಇದರ ಉಪಯೋಗ ಪಡೆಯುವುದು ಹೇಗೆ.? ತಿಳಿಯೋಣ.

ಬಿಎಸ್ಎನ್ಎಲ್ ಈಗ ವಿಶೇಷವಾಗಿ ದೀಪಾವಳಿ ಹಬ್ಬದ ಬೋನಸ್ ಆಫರ್ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ. ಹೊಸದಾಗಿ ಬಿಎಸ್ಎಲ್ ಚಂದಾದಾರಿಕೆಯನ್ನ ಪಡೆದುಕೊಳ್ಳುವವರು ಈಗ ಕೇವಲ ಒಂದು ರೂಪಾಯಿಯ ನಾಮಮಾತ್ರ ಶುಲ್ಕಕ್ಕೆ ಇಡೀ ತಿಂಗಳು 4ಜಿ ಡೇಟಾವನ್ನ ಬಳಸಿಕೊಳ್ಳಬಹುದು. ಬಿಎಸ್ಎನ್ಎಲ್ ಇತ್ತೀಚಿಗೆ ದೇಶಾಧ್ಯಂತ 4G ಸೇವೆಯನ್ನ ಆರಂಭಿಸಿದ್ದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಅಕ್ಟೋಬರ್ 15 ರಿಂದ ನವೆಂಬರ್ 15ರವರೆಗೆ ಈ ಆಫರ್ ಮಾನ್ಯವಾಗಿರುತ್ತೆ.

ಗ್ರಾಹಕರು ಬಿಎಸ್ಎಲ್ ಕಚೇರಿ ಅಥವಾ ಆನ್ಲೈನ್ ಮೂಲಕ ಈ ಆಫರ್ ಅನ್ನ ಸಕ್ರಿಯ ಮಾಡಿಕೊಳ್ಳಬಹುದು. ಗ್ರಾಮೀಣ ಮತ್ತು ಹಳ್ಳಿ ಪ್ರದೇಶದವರು ಕೂಡ ಈ 4ಜಿ ಸೇವೆಯನ್ನ ಬಳಸಿಕೊಳ್ಳಬೇಕು ಅನ್ನುವ ಉದ್ದೇಶದಿಂದ ಬಿಎಸ್ಎನ್ಎಲ್ ಈ ಆಫರ್ ಅನ್ನ ಬಿಡುಗಡೆ ಮಾಡಿದೆ. ಯಾವುದೇ ರೀತಿಯ ಸೇವಾ ಶುಲ್ಕಗಳಿಲ್ಲದೆ 30 ದಿನಗಳವರೆಗೆ ನೆಟ್ವರ್ಕ್ ಅನ್ನ ಬಳಸಿಕೊಳ್ಳಬಹುದು. ನೀವು ಬಿಎಸ್ಎನ್ಎಲ್ ಆಫೀಸ್ಗೆ ಭೇಟಿ ಕೊಟ್ಟು ಹೊಸದಾಗಿ ಬಿಎಸ್ಎನ್ಎಲ್ ಸಿಮ್ ಖರೀದಿ ಮಾಡಿ ಈ ಆಫರ್ ಅನ್ನ ಪಡೆದುಕೊಳ್ಳಬಹುದು.

ಈ ಸಿಮ್ ಅನ್ನ ನೀವು ಉಚಿತವಾಗಿ ಪಡೆದುಕೊಳ್ಳಬಹುದು. ಯಾವುದೇ ರೀತಿಯ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ. ಬಿಎಸ್ಎಲ್ ನ 4G ಸಿಮ್ ಅನ್ನ ಪಡೆದುಕೊಂಡರೆ ನೀವು ದಿನಕ್ಕೆ 2 GB ಡೇಟಾ 100 ಎಸ್ಎಂಎಸ್ ಮತ್ತು ಅನಿಯಮಿತ ಕರೆಯನ್ನ ಬಳಸಿಕೊಳ್ಳಬಹುದು. ಬಿಎಸ್ಎಲ್ ನ ಈ ಆಫರ್ ಅಕ್ಟೋಬರ್ 15 ರಿಂದ ನವೆಂಬರ್ 15ರ ವರೆಗೆ ದೇಶಾದ್ಯಂತ ಚಾಲ್ತಿಯಲ್ಲಿರುತ್ತದೆ.

WhatsApp Group Join Now

Spread the love

Leave a Reply