ಈ 5 ದಾಖಲೆ ಸಾಬೀತು ಮಾಡಿದರೆ ಮಾತ್ರ BPL ಕಾರ್ಡ್ | ಹೊಸ ಆದೇಶ – BPL Ration Card

Spread the love

ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚಿಗೆ ಸುಮಾರು 13 ಲಕ್ಷ ಬಿಪಿಎಲ್ ರೇಷನ್ ಕಾರ್ಡುಗಳನ್ನ ರದ್ದು ಮಾಡಿರುವುದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಅದೇ ರೀತಿಯಲ್ಲಿ ಈಗ ಬಿಪಿಎಲ್ ರೇಷನ್ ಕಾರ್ಡುಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಸಾಕಷ್ಟು ಕುಟುಂಬದವರು ಬಿಪಿಎಲ್ ರೇಷನ್ ಕಾರ್ಡುಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿರುವುದು ಈಗ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ.

ಈ ಕಾರಣಗಳಿಂದ ರಾಜ್ಯ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಇನ್ನು ಮುಂದೆ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ಗಳನ್ನ ಮಾಡಿಸಿಕೊಳ್ಳಲು ಈ ದಾಖಲೆಗಳು ಕಡ್ಡಾಯವಾಗಿ ಇರಬೇಕು. ಈ ದಾಖಲೆಗಳು ಇಲ್ಲದವರಿಗೆ ಬಿಪಿಎಲ್ ರೇಷನ್ ಕಾರ್ಡ್ಗಳನ್ನ ನೀಡದಿರಲು ಈಗ ಆದೇಶವನ್ನು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ಯಾರು ಹೊಸ ಬಿಪಿಎಲ್ ರೇಷನ್ ಕಾರ್ಡುಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಅನ್ನುವುದಕ್ಕೆ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.  ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಕರ್ನಾಟಕದ ಕಾಯಂ ನಿವಾಸಿಗಳು ಮಾತ್ರ ಹೊಸ ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ ಇಲ್ಲಿಯ ತನಕ ಯಾವುದೇ ರೀತಿಯ ಪಡಿತರ ಚೀಟಿಯನ್ನ ಹೊಂದಿಲ್ಲದೇ ಇರುವವರು ಮಾತ್ರ ಅರ್ಜಿಯನ್ನ ಸಲ್ಲಿಸಬಹುದು.

ಇತ್ತೀಚಿಗೆ ಮದುವೆಯನ್ನ ಮಾಡಿಕೊಂಡ ನವದಂಪತಿಗಳು ಬಿಪಿಎಲ್ ರೇಷನ್ ಕಾರ್ಡುಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕುಟುಂಬದ ಆದಾಯ ಕಡಿಮೆ ಇರುವವರು ಮಾತ್ರ ಬಿಪಿಎಲ್ ರೇಷನ್ ಕಾರ್ಡುಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊಸ ಬಿಪಿಎಲ್ ರೇಷನ್ ಕಾರ್ಡುಗಳಿಗೆ ಬೇಕಾಗಿರುವ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದೆ.

ಹೊಸ ಬಿಪಿಎಲ್ ರೇಷನ್ ಕಾರ್ಡಿ್ಗೆ ಅರ್ಜಿಯನ್ನು ಸಲ್ಲಿಸುವವರು ವೋಟರ್ ಐಡಿ, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ವಾಹನ ಪರವಾನಿಗೆ ಪತ್ರ, ಇತ್ತೀಚಿನ ಒಂದು ಫೋಟೋ, ಮೊಬೈಲ್ ಸಂಖ್ಯೆ ಮತ್ತು ಸ್ವಯಂ ಘೋಷಿತ ಪ್ರಮಾಣಪತ್ರವನ್ನ ಕಡ್ಡಾಯವಾಗಿ ಕೊಡಬೇಕು. ಈ ಎಲ್ಲಾ ದಾಖಲೆಗಳು ಇಲ್ಲದೇ ಇರುವವರು ಕಡ್ಡಾಯವಾಗಿ ಈ ದಾಖಲೆಯನ್ನ ಕೊಡಲೇಬೇಕಾಗುತ್ತದೆ.

ಅರ್ಜಿ ಸಲ್ಲಿಸುವವರು ಆನ್ಲೈನ್ ಅಥವಾ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡಿ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸರ್ಕಾರ ನೀವು ಸಲ್ಲಿಸಿದ ಅರ್ಜಿಯನ್ನ ಪರಿಶೀಲನೆ ಮಾಡಿ ನಿಮಗೆ ಬಿಪಿಎಲ್ ರೇಷನ್ ಕಾರ್ಡುಗಳನ್ನ ಕೊಡಬೇಕೋ ಅಥವಾ ಬೇಡವೋ ಅನ್ನುವುದನ್ನ ನಿರ್ಧಾರ ಮಾಡುತ್ತದೆ.

ಕರ್ನಾಟಕದಲ್ಲಿ ಸಾಕಷ್ಟು ಕುಟುಂಬದವರು ಬಿಪಿಎಲ್ ರೇಷನ್ ಕಾರ್ಡುಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿರುವ ಕಾರಣ ಕರ್ನಾಟಕ ರಾಜ್ಯ ಸರ್ಕಾರ ಈಗ ಬಿಪಿಎಲ್ ರೇಷನ್ ಕಾರ್ಡುಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯಾದ್ಯಂತ ಕಠಿಣ ನಿಯಮವನ್ನ ಜಾರಿಗೆ ತಂದಿದೆ.

WhatsApp Group Join Now

Spread the love

Leave a Reply