ರಾಜ್ಯದ ಎಲ್ಲಾ ಮಹಿಳೆಯರಿಗೆ ಹೊಸ ರೂಲ್ಸ್ | ಗೃಹಲಕ್ಷ್ಮೀ ಹಣಕ್ಕೆ ಹೊಸ ಆದೇಶ | Gruhalakshmi Scheme Rules

Spread the love

ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರ್ಕಾರ ಈಗ ಹೊಸ ನಿಯಮವನ್ನ ಜಾರಿಗೆ ತಂದಿದ್ದು, ಇನ್ನು ಮುಂದೆ ಈ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹಣವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಏನು.? ತಿಳಿಯೋಣ.

ರಾಜ್ಯ ಸರ್ಕಾರ ಈಗ ವಾರ್ಷಿಕವಾಗಿ 1 ಲಕ್ಷ 20 ಸಾವಿರಕ್ಕಿಂತ ಅಧಿಕ ಆದಾಯವನ್ನ ಹೊಂದಿರುವ ಕುಟುಂಬದ ಬಿಪಿಎಲ್ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ಮುಂದಾಗಿದೆ. ಅದೇ ರೀತಿಯಲ್ಲಿ 1ಲಕ್ಷ 20 ಸಾವಿರಕ್ಕಿಂತ ಅಧಿಕ ಆದಾಯವನ್ನ ಯಾವ ಕುಟುಂಬದವರು ಹೊಂದಿರುತ್ತಾರೋ, ಆ ಕುಟುಂಬದ ಮಹಿಳೆಯರು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಆ ಕುಟುಂಬದ ಬಿಪಿಎಲ್ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುವ ಮಹಿಳೆಯರು ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡುಗಳನ್ನ ಹೊಂದಿರಬೇಕು. ಆದರೆ ಯಾವ ಕುಟುಂಬದ ವಾರ್ಷಿಕ ಆದಾಯ 1ಲಕ್ಷ 20 ಸಾವಿರಕ್ಕಿಂತ ಅಧಿಕವಾಗಿರುತ್ತೋ ಅಂತಹ ಕುಟುಂಬದ ಬಿಪಿಎಲ್ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ಈಗ ಆದೇಶವನ್ನು ಹೊರಡಿಸಲಾಗಿದೆ. ಅದೇ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿರುವ ಮಹಿಳೆ ಅಥವಾ ಮಹಿಳೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿ ಮಾಡುತ್ತಿದ್ದರೆ ಅಂತಹ ಮಹಿಳೆಯರ ಹೆಸರನ್ನು ಕೂಡ ಗೃಹಲಕ್ಷ್ಮಿ ಯೋಜನೆಯಿಂದ ಡಿಲೀಟ್ ಮಾಡಲು ಆದೇಶವನ್ನು ಹೊರಡಿಸಲಾಗಿದೆ.

ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿ ಮಾಡುತ್ತಿರುವ ಕುಟುಂಬದ ಮಹಿಳೆಯರು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಸುಮಾರು 13 ಲಕ್ಷಕ್ಕೂ ಅಧಿಕ ಬಿಪಿಎಲ್ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗಿದೆ. ಅದೇ ರೀತಿಯಲ್ಲಿ 13 ಲಕ್ಷ ಕುಟುಂಬದ ಮಹಿಳೆಯರು ಇನ್ನು ಮುಂದೆ ಬಿಪಿಎಲ್ ರೇಷನ್ ಕಾರ್ಡುಗಳನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ.

WhatsApp Group Join Now

Spread the love

Leave a Reply