60 ವರ್ಷದವರಿಗೆ ಸಿಹಿಸುದ್ದಿ ಕೊಟ್ಟ ಈ 3 ಬ್ಯಾಂಕುಗಳು | Senior Citizens FD Interest Rate Hike

Spread the love

ಹೂಡಿಕೆದಾರರು ತಮ್ಮ ಹಣವನ್ನ ಎಫ್ ಡಿಯಲ್ಲಿ ಹೂಡಲು ಹೆಚ್ಚಿನ ಆಧ್ಯತೆಯನ್ನ ನೀಡುತ್ತಾರೆ. ವಿವಿಧ ಬ್ಯಾಂಕಗಳು ನೀಡುವ ಬಡ್ಡಿ ದರಗಳಲ್ಲಿ ವಿವಿಧ ರೀತಿಯ ಬದಲಾವಣೆ ಇದ್ದು, ಹೂಡಿಕೆದಾರರು ಹೆಚ್ಚು ಲಾಭ ಪಡೆಯಲು ತಮ್ಮ ಹಣವನ್ನ ಈ ಬ್ಯಾಂಕ್ನಲ್ಲಿ ಹೂಡಲು ಹೆಚ್ಚಿನ ಆಧ್ಯತೆಯನ್ನ ನೀಡ್ತಾರೆ. 

ಎಫ್ಡಿ ಯಲ್ಲಿ ಹೂಡಿಕೆ ಮಾಡುವವರಿಗೆ 2025ರ ಮಧ್ಯಭಾಗದಲ್ಲಿ ಪ್ರಮುಖ ಬ್ಯಾಂಕ್ಗಳು ನೀಡ್ತಾ ಇರುವಂತಹ ಮೂರು ವರ್ಷಗಳ ಗೆಫ್ಟಿ ಬಡ್ಡಿ ದರಗಳನ್ನ ಹೋಲಿಕೆ ಮಾಡುವುದು ಬಹಳಷ್ಟು ಮುಖ್ಯವಾಗಿದೆ. ಸಾಮಾನ್ಯವಾಗಿ ಹೂಡಿಕೆದಾರರು ಅಲ್ಪಾವಧಿ ಎಫ್ ಡಿಗಳಿಗಿಂತ ದೀರ್ಘಾವಧಿ ಎಫ್ ಡಿಗಳಲ್ಲಿ ಹೂಡಿಕೆ ಮಾಡಲು ಆಧ್ಯತೆ ನೀಡುತ್ತಾರೆ. ಉದಾಹರಣೆಗೆ ಮೂರು ವರ್ಷಗಳಲ್ಲಿ ಹೆಚ್ಚು ಬಡ್ಡಿ ಪಡೆಯಲು ಆಧ್ಯತೆಯನ್ನ ನೀಡ್ತಾರೆ. ಹೀಗಾಗಿ ಹೂಡಿಕೆದಾರರು ಹೆಚ್ಚು ಲಾಭ ಪಡೆಯಲು ತಮ್ಮ ಹಣವನ್ನ ಮೂರು ವರ್ಷಗಳ ಎಫ್ ಡಿ ಗಳಲ್ಲಿ ಹೂಡಿಕೆ ಮಾಡಲು ಆಧ್ಯತೆ ನೀಡ್ತಾರೆ.

ಅದರಲ್ಲಿ ಪ್ರಮುಖವಾಗಿ HDFC ಬ್ಯಾಂಕ್ ಸಾಮಾನ್ಯ ಠೇವಣಿದಾರರಿಗೆ ಇಲ್ಲಿ 6.45% ಮತ್ತು ಹಿರಿಯ ನಾಗರಿಕರಿಗೆ 6.95 ರಷ್ಟು ಬಡ್ಡಿ ದರ ಸಿಗಲಿದೆ. ಐಸಿಐಸಿಐ ಬ್ಯಾಂಕ್ ಸಾಮಾನ್ಯ ಠೇವಣಿದಾರರಿಗೆ 6.65 ರಷ್ಟು ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ 7.1ರಷ್ಟು ಬಡ್ಡಿ ಸಿಗಲಿದೆ. ಕೋಟಕ್ ಮಹಿಂದ್ರಾ ಬ್ಯಾಂಕ್ ನಲ್ಲಿ ಸಾಮಾನ್ಯ ಠೇವಣಿದಾರರಿಗೆ 6.4 ರಷ್ಟು ಬಡ್ಡಿ ಹಾಗು ಹಿರಿಯ ನಾಗರಿಕರಿಗೆ 6.9 ರಷ್ಟು ಬಡ್ಡಿ ಸಿಗಲಿದೆ. ಇನ್ನು ಫೆಡರಲ್ ಬ್ಯಾಂಕ್ ನಲ್ಲಿ ಸಾಮಾನ್ಯ ಠೇವಣಿದಾರರಿಗೆ 6.4% ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ 6.9% ಬಡ್ಡಿ ಸಿಗಲಿದೆ.

ಎಸ್ ಬಿಐ ಬ್ಯಾಂಕ್ ನಲ್ಲಿ ಸಾಮಾನ್ಯ ಠೇವಣಿದಾರರಿಗೆ 6.3 ರಷ್ಟು ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ 6.8 ರಷ್ಟು ಬಡ್ಡಿ ದರ ಸಿಗಲಿದೆ. ಬ್ಯಾಂಕ್ ಆಫ್ ಬರೋಡದಲ್ಲಿ ಸಾಮಾನ್ಯ ಠೇವಣಿದಾರರಿಗೆ 6.5% ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ 7%ರಷ್ಟು ಬಡ್ಡಿ ಸಿಗಲಿದೆ. ಯೂನಿಯನ್ ಬ್ಯಾಂಕ್ ನಲ್ಲಿ ಸಾಮಾನ್ಯ ಠೇವಣಿದಾರರಿಗೆ 6.6%ರಷ್ಟು ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ 7.1%ರಷ್ಟು ಬಡ್ಡಿ ದರ ಸಿಗಲಿದೆ. ಈ ದರಗಳು 2025ರ ಮಧ್ಯಭಾಗದಲ್ಲಿ ಜಾರಿಗೆ ಬಂದಿದ್ದು ವಿಶೇಷವಾಗಿ ಹಿರಿಯ ನಾಗರಿಕರು ಹೆಚ್ಚುವರಿ ಬಡ್ಡಿ ಪಡೆಯಲು ಕೂಡ ಅರ್ಹರಾಗಿರ್ತ್ತಾರೆ.

ಇನ್ನು ಹೆಚ್ಚಿನ ಬಡ್ಡಿಯನ್ನ ಪಡೆಯಲು ಹೂಡಿಕೆದಾರರು ತಮ್ಮ ಎಫ್ ಡಿ ಅವಧಿಯನ್ನ ಹೆಚ್ಚಿನ ಅವಧಿಗೆ ಆಯ್ಕೆ ಮಾಡಬೇಕು. ಒಂದು ಅಥವಾ ಎರಡು ವರ್ಷದ ಎಫ್ ಡಿಗಳಿಗಿಂತ ಮೂರು ವರ್ಷದ ಎಫ್ ಡಿಗಳಿಗೆ ಹೆಚ್ಚುವರಿ ಬಡ್ಡಿಯನ್ನ ನೀಡಲಾಗುತ್ತದೆ. ಆದ್ದರಿಂದ ದೀರ್ಘಾವಧಿ ಎಫ್ ಡಿ ಹೂಡಿಕೆ ದೀರ್ಘಾವಧಿಯ ಆದಾಯಕ್ಕೆ ಉತ್ತಮ ಆಯ್ಕೆ ಕೂಡ ಆಗಿರುತ್ತದೆ.

WhatsApp Group Join Now

Spread the love

Leave a Reply