10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ – ಏನಿದು ಹೊಸ ನಿಯಮ – ಸಂಪೂರ್ಣ ಮಾಹಿತಿ

Spread the love

ಭಾರತೀಯ ರಿಸರ್ವ್ ಬ್ಯಾಂಕ್ ಈಗ ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟಂತೆ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ವಿಶೇಷವಾಗಿ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಹೊಸ ನಿಯಮವನ್ನ ದೇಶಾದ್ಯಂತ ಜಾರಿಗೆ ತಂದಿದೆ. ಯಾರು 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೋ ಅವರು ತಕ್ಷಣ ಈ ಕೆಲಸವನ್ನ ಮಾಡಬೇಕಾಗಿದೆ. ಹಾಗಾದರೆ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಗಳಿಗೆ ಸಂಬಂಧ ಪಟ್ಟಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಆದೇಶ ಏನು ತಿಳಿಯೋಣ.

ಬ್ಯಾಂಕ್ ಖಾತೆಯನ್ನ ಹೊಂದಿರುವವರು ವಿಶೇಷವಾಗಿ 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನ ಹೊಂದಿರುವವರು ತಕ್ಷಣ ಬ್ಯಾಂಕಿಗೆ ಹೋಗಿ ತಮ್ಮ ಕೆವೈಸಿ ಯನ್ನ ಮತ್ತೊಮ್ಮೆ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ 10 ವರ್ಷಗಳಿಂದ ವಹಿವಾಟು ಇಲ್ಲದ ಖಾತೆಯನ್ನ ನಿಷ್ಕ್ರಿಯ ಖಾತೆ ಅಂತ ಘೋಷಣೆ ಮಾಡಿದೆ. 10 ವರ್ಷಕ್ಕಿಂತ ಹಳೆಯ ಖಾತೆಗಳು ಅಂದರೆ ಆ ಖಾತೆಯಲ್ಲಿ ಯಾವುದೇ ವಹಿವಾಟು ಇಲ್ಲದೆ ಇದ್ದರೆ ಅಂತಹ ಖಾತೆಯನ್ನ ನಿಷ್ಕ್ರಿಯ ಖಾತೆ ಅಂತ ಘೋಷಣೆ ಮಾಡಲಾಗಿದೆ.

ಒಂದು ವೇಳೆ ಬ್ಯಾಂಕ್ ಖಾತೆ ನಿಷ್ಕ್ರಿಯವಾದರೆ ಆ ಬ್ಯಾಂಕ್ ಖಾತೆಯ ಮೂಲಕ ಹಣವನ್ನು ವರ್ಗಾವಣೆ ಮಾಡುವುದು, ಎಟಿಎಂ ಸೇವೆ ಸೇರಿದಂತೆ ಯುಪಿಐ ಸೇವೆ ಕೂಡ ಸ್ಥಗಿತವಾಗುತ್ತದೆ. 10 ವರ್ಷಗಳಿಂದ ವಹಿವಾಟು ಇಲ್ಲದ ಖಾತೆಯನ್ನ ಡಿಫಾಲ್ಟ್ ಖಾತೆಗಳು ಅಂತ ಘೋಷಣೆ ಮಾಡಲಾಗುತ್ತದೆ. ಆ ಖಾತೆಯಲ್ಲಿ ಎಷ್ಟೇ ಹಣವಿರಲಿ ಉದಾಹರಣೆಗೆ 1000, 10,000 ಅಥವಾ 10 ಲಕ್ಷವಾಗಿರಬಹುದು ಎಷ್ಟೇ ಹಣವಿದ್ದರೂ ಆ ಖಾತೆಯನ್ನ ಡಿಫಾಲ್ಟ್ ಖಾತೆ ಅಂತ ಪರಿಗಣನೆ ಮಾಡಲಾಗುತ್ತದೆ. ಈ ಕಾರಣಗಳಿಂದ 10 ವರ್ಷಗಳಿಗಿಂತ ಹಳೆಯ ಬ್ಯಾಂಕ್ ಖಾತೆಯನ್ನು ಹೊಂದಿರುವವರು ತಕ್ಷಣ ಬ್ಯಾಂಕಿಗೆ ಭೇಟಿ ನೀಡಿ ಮತ್ತೊಮ್ಮೆ ಕೆವೈಸಿಯನ್ನ ಅಪ್ಡೇಟ್ ಮಾಡಿಸಿಕೊಳ್ಳಬೇಕು.

ಈಗಾಗಲೇ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ದರೆ ಅವರು ಕೆವೈಸಿ ಅಪ್ಡೇಟ್ ಮಾಡಿ ಮತ್ತು ನಿಮ್ಮ ಒಂದು ಭಾವಚಿತ್ರವನ್ನ ಕೊಟ್ಟು ಖಾತೆಯನ್ನ ಸಕ್ರಿಯ ಮಾಡಿಕೊಳ್ಳಬಹುದು. ಅದೇ ರೀತಿಯಲ್ಲಿ ಒಮ್ಮೆ ಖಾತೆ ಸಕ್ರಿಯವಾದ ನಂತರ ನೀವು ಖಾತೆಯಲ್ಲಿರುವ ಹಣವನ್ನ ಮರಳಿ ವಾಪಸ್ ಪಡೆದುಕೊಳ್ಳಬಹುದು. ಈ ಕಾರಣಗಳಿಂದ ಹಲವು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ತಮ್ಮ ಖಾತೆಯನ್ನ ಕ್ಲೋಸ್ ಮಾಡುವುದು ಬಹಳ ಉತ್ತಮ.

ಕೆಲವರು ಮೂರು ನಾಲ್ಕು ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯುತ್ತಾರೆ. ಆದರೆ ಆ ಖಾತೆಯನ್ನ ಬಳಕೆ ಮಾಡುವುದಿಲ್ಲ. ಖಾತೆ ಬಳಕೆ ಮಾಡದೇ ಇದ್ದರೆ ಅವರ ಖಾತೆಗಳು ನಿಷ್ಕ್ರಿಯವಾಗುತ್ತದೆ. ಈ ಕಾರಣಗಳಿಂದ ಹಳೆಯ ಖಾತೆಯನ್ನು ಹೊಂದಿರುವವರು ತಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಯನ್ನ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.

WhatsApp Group Join Now

Spread the love

Leave a Reply